Site icon Vistara News

Hardik Pandya : ಹಾರ್ದಿಕ್​ ಪಾಂಡ್ಯ ಬದಲಿಗೆ ಗುಜರಾತ್​​ನ ಆಲ್​ರೌಂಡರ್​ಗೆ ಚಾನ್ಸ್​?

Axar Patel

ಬೆಂಗಳೂರು: ಟೀಂ ಇಂಡಿಯಾದ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾಗೆ ವಾಪಸಾಗಬಹುದೇ ಎಂಬ ಮಾಹಿತಿ ಕುತೂಹಲ ಮೂಡಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ಪಾಂಡ್ಯ ಗ್ರೇಡ್ 1 ಅಸ್ಥಿರಜ್ಜು ಗಾಯದಿಂದ ಬಳಲುತ್ತಿದ್ದಾರ/, ಇದರಿಂದಾಗಿ ತಂಡಕ್ಕೆ ಮರಳುವುದು ಕಠಿಣವಾಗಲಿದೆ. ಆದ್ದರಿಂದ ಅಕ್ಷರ್ ಪಟೇಲ್ ಬದಲಿ ಆಟಗಾರನಾಗಿ ತಂಡಕ್ಕೆ ಮರಳುತ್ತಾರೆಯೇ ಎಂಬ ಚರ್ಚೆಗಳು ಆರಂಭಗೊಂಡಿವೆ. ಅಕ್ಷರ್ ಪಟೇಲ್ ಆರಂಭದಲ್ಲಿ ವಿಶ್ವ ಕಪ್​ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಬಳಿಕ ಅವರು ಅಶ್ವಿನ್​ಗಾಗಿ ಅವಕಾಶ ಕಳೆದುಕೊಂಡಿದ್ದರು. ಇದೀಗ ಮರಳಿ ಅವಕಾಶ ಪಡೆಬಹುದು ಎನ್ನಲಾಗಿದೆ.

“ನಿತಿನ್ ಪಟೇಲ್ ನೇತೃತ್ವದ ವೈದ್ಯಕೀಯ ತಂಡವು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಅವರನ್ನು ಮೇಲ್ವಿಚಾರಣೆ ಮಾಡುತ್ತಿದೆ. ಆದರೆ ಗಾಯವು ಮೊದಲು ಗ್ರಹಿಸಿದ್ದಕ್ಕಿಂತ ಸ್ವಲ್ಪ ಹೆಚ್ಚು ಗಂಭೀರವಾಗಿದೆ. ಅವರು ಸಣ್ಣ ಅಸ್ಥಿರಜ್ಜು ಹರಿತದಿಂಧ ಬಳಲುತ್ತಿದ್ದಾರೆಂದು ತೋರುತ್ತದೆ. ಅದು ಗುಣವಾಗಲು ಸಾಮಾನ್ಯವಾಗಿ ಕನಿಷ್ಠ ಎರಡು ವಾರಗಳು ಬೇಕಾಗುತ್ತದೆ. ಅವರ ಗಾಯ ಗುಣವಾಗುವವರೆಗೂ ಎನ್ಸಿಎ ಅವರನ್ನು ಬಿಡುಗಡೆ ಮಾಡುವುದಿಲ್ಲ. ಶೀಘ್ರದಲ್ಲೇ ಅವರನ್ನು ಮತ್ತೆ ಪಿಚ್​ಗೆ ಕರೆತರುವ ಭರವಸೆಯಿದೆ ಎಂದು ವೈದ್ಯಕೀಯ ತಂಡವು ತಂಡದ ಮ್ಯಾನೇಜ್ಮೆಂಟ್​​ಗೆ ತಿಳಿಸಿದೆ. ಬದಲಿ ಆಟಗಾರನನ್ನು ಕರೆತರಲು ತಂಡ ಬಯಸುವುದಿಲ್ಲ. ಪಾಂಡ್ಯಗಾಗಿ ಕಾಯಲು ಸಿದ್ಧವಾಗಿದೆ,” ಎಂದು ಬಿಸಿಸಿಐ ಮೂಲವೊಂದು ಹೇಳಿದೆ.‘

ಈ ಸುದ್ದಿಯನ್ನೂ ಓದಿ : Ben Stokes : ಬೆಂಗಳೂರಿನ ಆಟೋ ಡ್ರೈವರ್​ನ ವೇಗಕ್ಕೆ ಬೆಚ್ಚಿಬಿದ್ದ ಇಂಗ್ಲೆಂಡ್​ ಆಟಗಾರ ಬೆನ್​ಸ್ಟೋಕ್ಸ್​​

ಭಾರತ ತಂಡವು ಪ್ರಸ್ತುತ ಪಂದ್ಯಾವಳಿಯಲ್ಲಿ ಆರಾಮ ಸ್ಥಾನ ಪಡೆದಿದೆ. ಹಾರ್ದಿಕ್ ಇದೀಗ ತಂಡದೊಂದಿಗೆ ಪ್ರಯಾಣಿಸುವ ಬದಲು ಪುನಶ್ಚೇತನಕ್ಕಾಗಿ ಎನ್​​ಸಿಎನಲ್ಲಿಏಐ ಉಳಿಯುವ ಸಾಧ್ಯತೆಯಿದೆ. ಪ್ರಸ್ತುತ ಪರಿಸ್ಥಿತಿ ಹೇಗಿದೆಯೆಂದರೆ, ಪಂದ್ಯಾವಳಿಯ ಉಳಿದ ಭಾಗಕ್ಕೆ ಹಾರ್ದಿಕ್ ಪಾಲ್ಗೊಳ್ಳುವಿಕೆಯ ಬಗ್ಗೆ ಮುಂದಿನ ವಾರ ನಿರ್ಧಾರ ತೆಗೆದುಕೊಳ್ಳಲಾಗುವುದು. ಅವರು ಚುಚ್ಚುಮದ್ದು ತೆಗೆದಕೊಂಡು ಪಂದ್ಯಾವಳಿಯ ಕೊನೆಯಲ್ಲಿ ಆಡಲು ಸಿದ್ಧರಾಗಿದ್ದಾರೆ. ಹಾರ್ದಿಕ್ ಪೂರ್ಣ ಪ್ರಮಾಣದಲ್ಲಿ ಬೌಲಿಂಗ್ ಮಾಡದಿದ್ದರೆ ಅದು ಸಂಯೋಜನೆಯಲ್ಲಿ ಅಂತಹ ದೊಡ್ಡ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಬೇರೆ ಬ್ಯಾಟರ್​ಗಳ ಮೂಲಕ ಆಟ ಮುಂದುವರಿಸಲು ತಂಡದ ಮ್ಯಾನೇಜ್ಮೆಂಟ್ ಮುಂದಾಗಿದೆ.

ಹಾರ್ದಿಕ್ ಪಾಂಡ್ಯಗೆ ಗಾಯ

ಭಾರತ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ ಮುಖಾಮುಖಿಯಲ್ಲಿ ಚೆಂಡನ್ನು ತಡೆಯಲು ಪ್ರಯತ್ನಿಸಿದಾಗ ಹಾರ್ದಿಕ್ ಅವರ ಪಾದಕ್ಕೆ ಗ್ರೇಡ್ 1 ಅಸ್ಥಿರಜ್ಜು ಗಾಯವಾಗಿದೆ. ಹಾರ್ದಿಕ್ ಮುಂದುವರಿಯಲು ಸಾಧ್ಯವಾಗಲಿಲ್ಲ ಮತ್ತು ಅಗತ್ಯ ಸ್ಕ್ಯಾನ್ ಗಳಿಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಅವರು ಆಯ್ಕೆಗೆ ಲಭ್ಯವಿರಲಿಲ್ಲ. ಶಾರ್ದೂಲ್ ಠಾಕೂರ್ ಬದಲಿಗೆ ಸೂರ್ಯಕುಮಾರ್ ಯಾದವ್​​ಗೆ ಅವಕಾಶ ನೀಡಲಾಗಿತ್ತು. ಬೌಲರ್ ಆಗಿ ಮೊಹಮ್ಮದ್ ಶಮಿಗೆ ಅವಕಾಶ ನೀಡಲಾಗಿತ್ತು.

ಗಾಯದ ಹೊರತಾಗಿಯೂ, ಪಾಂಡ್ಯ ಫಿಟ್ ಆಗುವವರೆಗೆ ತಂಡವು ಕಾಯುವುದರಿಂದ ಯಾವುದೇ ಬದಲಿ ಆಟಗಾರರನ್ನು ಘೋಷಿಸಲು ತಂಡ ಸಿದ್ಧವಿಲ್ಲ. ಮತ್ತೊಂದೆಡೆ, ಅಕ್ಷರ್ ಪಟೇಲ್ ಭಾರತೀಯ ಕ್ರಿಕೆಟ್ ತಂಡಕ್ಕೆ ಸ್ಟ್ಯಾಂಡ್ಬೈ ಆಗಿ ಉಳಿದಿದ್ದಾರೆ. ಆದರೆ ಅಕ್ಷರ್ ಪಟೇಲ್ ಉತ್ತಮ ಫಾರ್ಮ್​ನಲ್ಲಿದ್ದಾರೆ. ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಂಜಾಬ್ ವಿರುದ್ಧ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.

Exit mobile version