ಹರಾರೆ : ಭಾರತ ಹಾಗೂ ಜಿಂಬಾಬ್ವೆ ನಡುವಿನ ಎರಡನೇ ಏಕ ದಿನ ಪಂದ್ಯದಲ್ಲಿ (IND vs ZIM ODI) ಫೀಲ್ಡಿಂಗ್ ವೇಳೆ ಅಕ್ಷರ್ ಪಟೇಲ್ ಮೇಲೆಯ ಇಶಾನ್ ಕಿಶನ್ ಚೆಂಡೆಸೆದ ಪ್ರಸಂಗ ನಡೆದಿದೆ. ಮೈಮೇಲೆ ಚೆಂಡು ಬೀಳುತ್ತಿದ್ದಂತೆ ಕೋಪಗೊಂಡ ಅಕ್ಷರ್ ಪಟೇಲ್ ಅವರು ಇಶಾನ್ ಅವರತ್ತ ದುರುಗುಟ್ಟಿ ನೋಡಿದರೆ, ತಕ್ಷಣ ಇಶಾನ್ ಕ್ಷಮೆ ಕೋರಿದರು.
ಈ ಪ್ರಸಂಗ ಇನಿಂಗ್ಸ್‌ನ ೨೮ನೇ ಓವರ್‌ನಲ್ಲಿ ನಡೆದಿದೆ. ದೀಪಕ್ ಹೂಡ ಆ ಓವರ್ ಎಸೆದಿದ್ದು, ಎರಡನೇ ಎಸೆತ ಡೀಪ್ ಸ್ಕ್ವೇರ್ ಕಡೆಗೆ ಹೋಗಿತ್ತು. ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಇಶಾನ್ ಕಿಶನ್ ಅದನ್ನಿಡಿದು ವಾಪಸ್ ಎಸೆದಿದ್ದಾರೆ. ಅದು ಮಿಡ್ ವಿಕೆಟ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಅಕ್ಷರ್ ಪಟೇಲ್ ಕಡೆಗೆ ಸಾಗಿದೆ. ತಕ್ಷಣ ಅವರು ತಲೆ ಮೆಲೆ ಕೈ ಹಿಡಿದು ಬಗ್ಗೆ ಕುಳಿತಿದ್ದಾರೆ. ಆದರೂ ಚೆಂಡು ಅವರ ಬೆನ್ನಿಗೆ ಬಿದ್ದಿದೆ. ತಕ್ಷಣ ಎದ್ದ ಅಕ್ಷರ್ ಪಟೇಲ್ ಇಶಾನ್ ಕಡೆಗೆ ದುರುಗುಟ್ಟಿ ನೋಡಿದ್ದಾರೆ. ಇಶಾನ್ ಕ್ಷಮೆ ಕೋರುವ ಮೂಲಕ ಪ್ರಸಂಗಕ್ಕೆ ಕೊನೆ ಹಾಡಿದ್ದಾರೆ.
ಈ ಪಂದ್ಯದಲ್ಲಿ ಭಾರತ ತಂಡ ೫ ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ೨-೧ ಅಂತರದಿಂದ ಜಯಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ೧೬೧ ರನ್‌ಗಳಿಗೆ ಅಲ್‌ಔಟ್ ಆಗಿದ್ದರೆ, ಗುರಿ ಬೆನ್ನಟ್ಟಿದ್ದ ಭಾರತ ತಂಡ ೨೫. ೪ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೧೬೭ ರನ್ ಬಾರಿಸಿ ಜಯಶಾಲಿಯಾಯಿತು.