Site icon Vistara News

Ayesha Naseem: ಇಸ್ಲಾಂ ಧರ್ಮಕ್ಕಾಗಿ ಕ್ರಿಕೆಟ್​ ತ್ಯಜಿಸಿದ ಪಾಕ್ ತಂಡದ ಉದಯೋನ್ಮುಖ​​ ಆಟಗಾರ್ತಿ

Ayesha Naseem

ಕರಾಚಿ: ಇಸ್ಲಾಂ ಧರ್ಮಕ್ಕೆ ಅನುಗುಣವಾಗಿ ಹೆಚ್ಚು ಧಾರ್ಮಿಕ ಜೀವನವನ್ನು(live life according to Islam) ನಡೆಸುವ ಸಲುವಾಗಿ ಪಾಕಿಸ್ತಾನದ(Pakistan cricketer) 18 ವರ್ಷದ ಉದಯೋನ್ಮುಖ ಆಟಗಾರ್ತಿ ಆಯೇಷಾ ನಸೀಮ್(Ayesha Naseem) ಅವರು ಗುರುವಾರ ಎಲ್ಲ ಮಾದರಿಯ ಕ್ರಿಕೆಟ್​ಗೆ ದಿಢೀರ್​ ನಿವೃತ್ತಿ ಘೋಷಿಸಿದ್ದಾರೆ. ನಸೀಮ್ ಅವರ ನಿವೃತ್ತಿ ನಿರ್ಧಾರವನ್ನು ಪಾಕ್​ ಕ್ರಿಕೆಟ್​ ಮಂಡಳಿ ಖಚಿತಪಡಿಸಿದೆ.

“ಇಸ್ಲಾಂ ಧರ್ಮದ ಪ್ರಕಾರ ನನ್ನ ಜೀವನವನ್ನು ನಡೆಸಲು ಬಯಸಲು ಇಚ್ಚಿಸಿದ ಕಾರಣ ನಾನು ಕ್ರಿಕೆಟ್ ತ್ಯಜಿಸುತ್ತಿದ್ದೇನೆ” ಎಂದು ಆಯೇಷಾ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಪತ್ರ ಬರೆದು ತಮ್ಮ ನಿವೃತ್ತಿಯನ್ನು ಪ್ರಕಟಿಸಿದ್ದಾರೆ. ಆಯೇಷಾ ಅವರ ಮನವಿಯನ್ನು ಪಾಕ್​ ಕ್ರಿಕೆಟ್​ ಮಂಡಳಿ ಸಮ್ಮತಿಸಿದೆ ಎಂದು ತಿಳಿದುಬಂದಿದೆ.

2020ರಲ್ಲಿ ಪಾಕಿಸ್ತಾನ ಮಹಿಳಾ ತಂಡಕ್ಕೆ ಪದಾರ್ಪಣೆ ಮಾಡಿದ ಆಯೇಷಾ ಏಕದಿನ ಮತ್ತು ಟಿ20 ಕ್ರಿಕೆಟ್​ನಲ್ಲಿ ತ್ವರಿತ ಗತಿಯ ಪ್ರಗತಿ ಸಾಧಿಸಿದ್ದರು. ಆಕ್ರಮಣ ಕಾರಿ ಬ್ಯಾಟಿಂಗ್​ ಶೈಲಿಯ ಮೂಲಕ ಭವಿಷ್ಯದ ತಾರೆ ಎಂದು ಗುರುತಿಸಲ್ಪಟ್ಟಿದ್ದರು. 15ನೇ ವಯಸ್ಸಿಗೆ ಪಾಕ್​ ಕ್ರಿಕೆಟ್​ ತಂಡದ ಪರ ಆಡಿ ಗಮನಸೆಳೆದಿದ್ದರು. ಮಹಿಳಾ ಟಿ20 ವಿಶ್ವಕಪ್​ನಲ್ಲಿ ಆಡುವ ಮೂಲಕ ಕ್ರಿಕೆಟ್​ ಜಗತ್ತಿಗೆ ಎಂಟ್ರಿ ಕೊಟ್ಟಿದ್ದರು. 30 ಟಿ20 ಪಂದ್ಯಗಳು ಮತ್ತು ನಾಲ್ಕು ಏಕದಿನ ಪಂದ್ಯಗಳಲ್ಲಿ ಆಡಿದ ಅವರು ಎರಡು ಸ್ವರೂಪದ ಕ್ರಿಕೆಟ್​ನಲ್ಲಿ ಕ್ರಮವಾಗಿ 369 ಮತ್ತು 33 ರನ್ ಗಳಿಸಿದ್ದಾರೆ.

ಇದನ್ನೂ ಓದಿ World Cup : ವಿಶ್ವಕಪ್ ವೇಳಾಪಟ್ಟಿ ವಿಳಂಬ: ಪಾಕ್​ ಕ್ರಿಕೆಟ್​ ಮಂಡಳಿ ಉದ್ಧಟತನಕ್ಕೆ ಬಿಸಿಸಿಐ ಗರಂ

ಭಾರತ ಮಹಿಳಾ ತಂಡಕ್ಕೆ ಜಯ

ಮಿರ್ಪುರ್‌: ಜೆಮಿಮಾ ರೋಡ್ರಿಗಸ್‌ ಅವರ ಜಬರ್ದಸ್ತ್ ಪ್ರದರ್ಶನದ ನೆರವಿನಿಂದ ಬುಧವಾರ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 108 ರನ್ನುಗಳಿಂದ ಭಾರತ ಬಗ್ಗುಬಡಿದಿದೆ. ಈ ಮೂಕಲ ಸರಣಿಯನ್ನು ಸಮಬಲಕ್ಕೆ ತಂದು ನಿಲ್ಲಿಸಿದೆ. ಅಂತಿಮ ಪಂದ್ಯ ಜುಲೈ 22ಕ್ಕೆ ನಡೆಯಲಿದೆ.

ಮೊದಲು ಬ್ಯಾಟಿಂಗ್​ ನಡೆಸಿದ ಭಾರತ 8 228 ರನ್‌ ಪೇರಿಸುವಲ್ಲಿ ಯಶಸ್ವಿಯಾಯಿತು. ಜವಾಬಿತ್ತ ಬಾಂಗ್ಲಾ 35.1 ಓವರ್‌ಗಳಲ್ಲಿ 120ಕ್ಕೆ ಆಲೌಟ್‌ ಆಯಿತು.

ಭಾರತ ಪರ ಜೆಮಿಮಾ ರೋಡ್ರಿಗಸ್‌ ಅಮೋಘ ಆಲ್‌ರೌಂಡ್‌ ಶೋ ನೀಡಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 5ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಜೆಮಿಮಾ 78 ಎಸೆತಗಳಿಂದ 86 ರನ್‌ (9 ಬೌಂಡರಿ) ಸಿಡಿಸಿದರು. ಇದು ಅವರ ಜೀವನಶ್ರೇಷ್ಠ ಗಳಿಕೆ ಆಗಿದೆ. ಬಳಿಕ ಬೌಲಿಂಗ್‌ನಲ್ಲೂ ಮಿಂಚಿ ಕೇವಲ 3.1 ಓವರ್‌ಗಳಲ್ಲಿ 3 ರನ್ನಿಗೆ 4 ವಿಕೆಟ್‌ ಉಡಾಯಿಸಿದರು.

Exit mobile version