ಬೆಂಗಳೂರು: ಭಾರತ ತಂಡ ಶ್ರೇಷ್ಠ ಕ್ರಿಕೆಟರ್, ಅತ್ಯುತ್ತಮ ನಾಯಕ ಸೌರವ್ ಗಂಗೂಲಿಯ (Sourav Ganguly ) ಬಯೋಪಿಕ್ ಸಿನಿಮಾ ನಿರ್ಮಾಣ ತಂಡ ಹೊಸ ಅಪ್ಡೇಟ್ ನೀಡಿದೆ. ಈ ಸಿನಿಮಾಕ್ಕೆ ನಾಯಕ ಯಾರೆಂಬುದನ್ನು ಘೋಷಿಸಿದ್ದಾರೆ. ಅಂಧಾಧುನ್ ಸಿನಿಮಾದ ಜತೆಗೆ ಹಲವಾರು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿರುವ ಆಯುಷ್ಮಾನ್ ಖುರಾನಾ ಈ ಸಿನಿಮಾದಲ್ಲಿ ಗಂಗೂಲಿ ಪಾತ್ರ ವಹಿಸಲಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಮತ್ತು ನಾಯಕ ಸೌರವ್ ಗಂಗೂಲಿ ಅವರ ಜೀವನವನ್ನು ಆಧರಿಸಿ ನಿರ್ಮಾಪಕರಾದ ಲುವ್ ರಂಜನ್ ಮತ್ತು ಅಂಕುರ್ ಗರ್ಗ್ ಸಿನಿಮಾ ಮಾಡುತ್ತಿದ್ದಾರೆ. ಯೋಜನೆ ರೂಪುಗೊಂಡಿರುವ ಹೊರತಾಗಿಯೂ ನಾಯಕ ಯಾರೆಂಬುದು ಗೊತ್ತಾಗಿರಲಿಲ್ಲ. ಇದೀಗ ಪೀಪಿಂಗ್ ಮೂನ್ ನ ಸಂಸ್ಥೆ ಈ ಕುರಿತು ಮಾಹಿತಿ ನೀಡಿದೆ. ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನೆ ಈ ಚಿತ್ರಕ್ಕಾಗಿ ಆಯುಷ್ಮಾನ್ ಖುರಾನಾ ಜತೆ ಒಪ್ಪಂದಕ್ಕೆ ಸಹಿ ಹಾಕಿಕೊಂಡಿದ್ದಾರೆ ಎಂದು ಹೇಳಿದೆ.
ಆಯುಷ್ಮಾನ್ ಖುರಾನಾ ಎಡಗೈ ಬ್ಯಾಟಿಂಗ್ ಕೌಶಲ ಹೊಂದಿದ್ದಾರೆ. ಆದ್ದರಿಂದ ಗಂಗೂಲಿ ಪಾತ್ರಕ್ಕೆ ಸೂಕ್ತವೆಂದು ಪರಿಗಣಿಸಲಾಗಿದೆ. ನಟ ಆಯುಷ್ಮಾನ್ ಶೀಘ್ರದಲ್ಲೇ ಗಂಗೂಲಿ ಪಾತ್ರಕ್ಕಾಗಿ ತಮ್ಮ ಸಿದ್ಧತೆಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ತೀವ್ರ ರೀತಿಯ ಕ್ರಿಕೆಟ್ ತರಬೇತಿ ಅವಧಿಗಳು ಮತ್ತು ಗಂಗೂಲಿ ಅವರೊಂದಿಗೆ ಮುಖಾಮುಖಿ ಸಂಭಾಷಣೆಗಳು ಕೂಡ ಸೇರಿವೆ.
ಚಿತ್ರೀಕರಣ ಆರಂಭದ ದಿನಾಂಕವನ್ನು ಇನ್ನೂ ನಿರ್ಧರಿಸಲಾಗಿಲ್ಲವಾದರೂ, ಇದು 2024ರ ಅರ್ಧದಲ್ಲಿ ಸೆಟ್ಟೇರುವ ನಿರೀಕ್ಷೆಯಿದೆ. 2025 ರಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ.
ವಿವಿಧ ಹಂತದ ಕತೆಗಳು
ಸಿನಿಮಾ ಗಂಗೂಲಿ ಅವರ ಜೀವನದ ವಿವಿಧ ಹಂತಗಳನ್ನು ವಿಶ್ಲೇಷಿಸುವ ನಿರೀಕ್ಷೆಯಿದೆ. ಅವರ ಕ್ರಿಕೆಟ್ನ ಆರಂಭಿಕ ದಿನಗಳಿಂದ ಅವರ ನಾಯಕತ್ವ, ಸ್ಮರಣೀಯ ಗೆಲುವುಗಳು ಮತ್ತು ಭಾರತದಲ್ಲಿ ಕ್ರೀಡೆಯ ಮೇಲೆ ಅವರ ನಿರಂತರ ಪ್ರಭಾವವನ್ನು ಗುರುತಿಸಲಿದೆ.
ಇದನ್ನೂ ಓದಿ : Shaheen Afridi : ನಾಯಕನಿಗೇ ಆಘಾತ; ಒಂದೇ ಓವರ್ಗೆ 24 ರನ್ ಚಚ್ಚಿಸಿಕೊಂಡ ಅಫ್ರಿದಿ
ಪಾತ್ರಕ್ಕೆ ಎಲ್ಲ ಮಾದರಿಯಲ್ಲಿ ಒಗ್ಗುವ ಖುರಾನಾ, ದೈಹಿಕ ಬದಲಾವಣೆಗಳಿಗೂ ಒಳಗಾಗುತ್ತಾರೆ. ಗಂಗೂಲಿ ಅವರ ವ್ಯಕ್ತಿತ್ವದ ಸೂಕ್ಷ್ಮತೆಗಳಲ್ಲಿ ಮುಳುಗಿ ಮನವೊಪ್ಪಿಸುವ ಅಭಿನಯವನ್ನು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ಚಿತ್ರವು ಗಂಗೂಲಿ ಅವರ ನಾಯಕತ್ವ ಮತ್ತು ಭಾರತೀಯ ಕ್ರಿಕೆಟ್ಗೆ ನೀಡಿದ ಕೊಡುಗೆಗಳನ್ನು ಆಚರಿಸುವ ಗುರಿಯನ್ನು ಹೊಂದಿದೆ. ಪ್ರೇಕ್ಷಕರಿಗೆ ಅವರ ಶ್ರೇಷ್ಠ ವೃತ್ತಿಜೀವನವನ್ನು ವ್ಯಾಖ್ಯಾನ ಮತ್ತು ಅವರು ಎದುರಿಸಿರುವ ಸವಾಲುಗಳು ಮತ್ತು ವಿಜಯಗಳ ನೋಟವನ್ನು ಕಲ್ಪಿಸುತ್ತದೆ.
ಆಯುಷ್ಮಾನ್ ಖುರಾನಾ , ಸೌರವ್ ಗಂಗೂಲಿ ಜೀವನಚರಿತ್ರೆ ಮನರಂಜನೆ ಮತ್ತು ಸ್ಫೂರ್ತಿಯ ಮಿಶ್ರಣವನ್ನು ಜನರಿಗೆ ನೀಡಲಿದ್ದಾರೆ. ಕ್ರಿಕೆಟ್ ಉತ್ಸಾಹಿಗಳು ಮತ್ತು ಚಲನಚಿತ್ರ ಪ್ರೇಮಿಗಳನ್ನು ಸೆಳೆಯಲಿದೆ. ಮುಂಬರುವ ವೃತ್ತಿಪರ ಉದ್ಯಮದಲ್ಲಿ ಸೌರವ್ ಗಂಗೂಲಿ ಅವರ ಭವ್ಯ ಪಾತ್ರಕ್ಕೆ ಖುರಾನಾ ಎಷ್ಟು ನ್ಯಾಯ ಒದಗಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.