Site icon Vistara News

Babar Azam: 18 ವರ್ಷದ ನೆಟ್​ ಬೌಲರ್​ ಮುಂದೆ ಪರದಾಡಿದ ಪಾಕ್​ ನಾಯಕ ಬಾಬರ್​ ಅಜಂ; ವಿಡಿಯೊ ವೈರಲ್​

Babar Azam

Babar Azam: Amid Criticism, Viral Video Shows Babar Azam's Struggles Against 18-Year-Old Pacer In Nets

ಕರಾಚಿ: ಪಾಕಿಸ್ತಾನ ತಂಡ ಮುಂದಿನ ತಿಂಗಳು ಟೆಸ್ಟ್​ ಸರಣಿಯನ್ನಾಡಲು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಗೆ ಈಗಿಂದಲೇ ಪಾಕ್​ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಪಾಕ್​ ನಾಯಕ ಬಾಬರ್​ ಅಜಂ(Babar Azam) ಅವರು ನೆಟ್ಸ್​ನಲ್ಲಿ 18 ವರ್ಷದ ವೇಗಿಯ ಎಸೆತವನ್ನು ಎದುರಿಸಲು ಪರದಾಟ ನಡೆಸಿದ್ದಾರೆ. ಈ ವಿಡಿಯೊ ವೈರಲ್(Viral Video)​ ಆಗಿದೆ.

ಬಾಬರ್​ ಅಜಂ ಮತ್ತು ಪಾಕ್​ನ ಕೆಲ ಬ್ಯಾಟರ್​ಗಳು ಈ 18 ವರ್ಷದ ನೆಟ್​ ಬೌಲರ್​ನ ಎಸೆತವನ್ನು ಡಿಫೆನ್ಸ್​ ಮಾಡಲು ಕೂಡ ಪರದಾಟ ನಡೆಸಿದ್ದಾರೆ. ಮಾಜಿ ವೇಗಿ ಅಖ್ತರ್​ ಅವರಂತೆ ಬೆಂಕಿ ಚೆಂಡೆಸೆಯುವ ಈ 18 ವರ್ಷದ ವೇಗಿ ಪಾಕ್​ ತಂಡದ ವೇಗಿ ನಸೀಮ್ ಶಾ ಅವರ ಕಿರಿಯ ಸಹೋದರ. ಇವರ ಹೆಸರು ಉಬೈದ್ ಶಾ(Ubaid Shah). ನಸೀಮ್​ ಕೂಡ ಘಾತಕ ಬೌಲಿಂಗ್​ಗೆ ಹೆಸರುವಾಸಿಯಾಗಿದ್ದು, ಇದೀಗ ತಮ್ಮ ಕೂಡ ಅಣ್ಣನಂತೆ ಬೌಲಿಂಗ್​ ನಡೆಸಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಪಾಕ್​ ತಂಡಕ್ಕೆ ಸೇರ್ಪಡೆಯಾದರೂ ಅಚ್ಚರಿಯಿಲ್ಲ.

ಇತ್ತೀಚೆಗೆ ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಕ್ರಿಕೆಟ್​ ಶಿಶು ಅಮೆರಿಕ ವಿರುದ್ಧವೂ ಸೋಲಿನ ಅಪಮಾನ ಎದುರಿಸಿತ್ತು. ಲೀಗ್​ ಹಂತದಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಪಾಕ್​ ತಂಡದ ಹೀನಾಯ ಪ್ರದರ್ಶನಕ್ಕೆ ಮಾಜಿ ನಾಯಕ ಶಾಹಿದ್ ಅಫ್ರಿದಿ ಬಾಬರ್ ಅವರನ್ನು ತೀವ್ರವಾಗಿ ಟೀಕಿಸಿದ್ದರು.

“ಪಾಕಿಸ್ತಾನವನ್ನು ಮುನ್ನಡೆಸಲು ಬಾಬರ್‌ಗೆ ಸಂಪೂರ್ಣವಾಗಿ ಮುಕ್ತ ಅವಕಾಶ ಸಿಕ್ಕಿದ್ದರೂ ಕೂಡ ಇದನ್ನು ಅವರು ಉಪಯೋಗ ಮಾಡಿಕೊಂಡಿಲ್ಲ. ಅವರು ಫೀಲ್ಡ್​ನಲ್ಲಿ ತೆಗೆದುಕೊಳ್ಳುವ ನಿರ್ಧಾರವೇ ಗೊಂದಲಮಯವಾಗಿದೆ” ಎಂದು ಅಫ್ರಿದಿ ಹೇಳಿದ್ದರು.

ಇದನ್ನೂ ಓದಿ Babar Azam: ಮ್ಯಾಚ್​ ಫಿಕ್ಸಿಂಗ್ ಆರೋಪ ಮಾಡಿದವನ ಮೇಲೆ 1 ಕೋಟಿ ರೂ. ಮಾನನಷ್ಠ ಮೊಕದ್ದಮೆ ಹೂಡಿದ ಬಾಬರ್ ಅಜಮ್​

ಕಳೆದ ವರ್ಷ(2023) ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಬಾಬರ್​ ಸಾರಥ್ಯದಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ತೋರಿತ್ತು. ಆಡಿದ 9 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ ಲೀಗ್​ ಹಂತದಲ್ಲೇ ಹೊರಬಿದ್ದಿತ್ತು. ಹೀಗಾಗಿ ಬಾಬರ್​ ವಿರುದ್ಧ ಪಾಕ್​ ತಂಡದ ಮಾಜಿ ಆಟಗಾರರು ಸೇರಿ ಅಂದಿನ ಪಿಬಿ ಅಧ್ಯಕ್ಷ ಭಾರೀ ಟೀಕೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಾಬರ್ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದರು. ಬಾಬರ್ ಕೆಳಗಿಳಿದ ಬಳಿಕ ಶಾನ್ ಮಸೂದ್ ಅವರನ್ನು ಟೆಸ್ಟ್ ನಾಯಕರನ್ನಾಗಿ ನೇಮಿಸಿದರೆ, ಶಾಹೀನ್ ಅಫ್ರಿದಿಗೆ ಟಿ20 ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಯಿತು. ಆದರೆ ಇವರ ನಾಯಕತ್ವದಲ್ಲಿ ಪಾಕಿಸ್ತಾನ ಹಿಂದೆಂದು ಕಾಣದ ವೈಫಲ್ಯ ಕಂಡಿತ್ತು. ಆಡಿದ ಹಲವು ಸರಣಿಗಳಲ್ಲಿ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಅಫ್ರೀದಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಮತ್ತೆ ಬಾಬರ್​ಗೆ ನಾಯಕತ್ವದ ಪಟ್ಟ ನೀಡಲಾಗಿತ್ತು. ಆದರೆ ಇವರ ನಾಯಕತ್ವದಲ್ಲಿಯೂ ಪಾಕ್​ ಕಳಪೆ ಪ್ರದರ್ಶನ ತೋರಿದೆ.

Exit mobile version