ಆಕ್ಲೆಂಡ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಬಾಬರ್ ಅಜಂ(Babar Azam) ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ(Rohit Sharma) ಅವರ ದಾಖಲೆಯೊಂದನ್ನು ಮುರಿದಿದ್ದಾರೆ. ಗುರುವಾರ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಮೊದಲ ಟಿ20(New Zealand vs Pakistan, 1st T20I) ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಬಾಬರ್ ಈ ಮೇಲುಗಲ್ಲು ನಿರ್ಮಿಸಿದರು.
ಆಕ್ಲೆಂಡ್ನಲ್ಲಿ ನಡದ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಬಾಬರ್ ಕೇವಲ 35 ಎಸೆತಗಳಲ್ಲಿ 57 ರನ್ ಬಾರಿಸಿ ಮಿಂಚಿದ್ದರು. ಈ ಅರ್ಧಶತಕದೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ 50+ ಸ್ಕೋರ್ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದರು. ಈ ಮೂಲಕ ರೋಹಿತ್ ದಾಖಲೆಯನ್ನು ಹಿಂದಿಕ್ಕಿದರು.
ಇದನ್ನೂ ಓದಿ Tim Southee: ಟಿ20 ವಿಶ್ವಕಪ್ ಗೆಲ್ಲುವುದು ಪ್ರಮುಖ ಗುರಿ; ದಾಖಲೆ ವೀರ ಟಿಮ್ ಸೌಥಿ
ರೋಹಿತ್ ಶರ್ಮ ಅವರು ಟಿ20 ಕ್ರಿಕೆಟ್ನಲ್ಲಿ ಒಟ್ಟು 33 ಬಾರಿ 50+ ಸ್ಕೋರ್ಗಳಿಸಿ ದ್ವಿತೀಯ ಸ್ಥಾನದಲ್ಲಿದ್ದರು. ಈಗ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಅಜಂ ಸದ್ಯ 34 ಬಾರಿ 50+ ಸ್ಕೋರ್ಗಳಿಸಿದ್ದಾರೆ. ಭಾರತ ತಂಡ ಆಫ್ಘನ್ ವಿರುದ್ಧ ಟಿ20 ಪಂದ್ಯ ಆಡುತ್ತಿರುವ ಕಾರಣ ರೋಹಿತ್ಗೆ ಬಾಬರ್ ಅವರನ್ನು ಹಿಂದಿಕ್ಕುವ ಅವಕಾಶವಿದೆ. ಅತ್ತ ಬಾಬರ್ಗೂ ಅವಕಾಶವಿದೆ. ಏಕೆಂದರೆ ಪಾಕ್ ತಂಡ ಕಿವೀಸ್ ವಿರುದ್ಧ ಸರಣಿ ಆಡುತ್ತಿದೆ. ಸದ್ಯಕ್ಕೆ ಉಭಯ ಆಟಗಾರರ ಮಧ್ಯೆ ತೀವ್ರ ಸ್ಪರ್ಧೆಯೊಂದು ಏರ್ಪಟ್ಟಿದೆ.
The king is back #BabarAzam #PAKvsNZ pic.twitter.com/fx635xxFzO
— Arshad Khan Tanoli (@Arshadkhan_ofcl) January 12, 2024
ಕೊಹ್ಲಿಗೆ ಅಗ್ರಸ್ಥಾನ
ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ 50 ಪ್ಲಸ್ ಗಳಿಸಿದ ದಾಖಲೆ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 38 ಬಾರಿ ಈ ಸಾಧನೆ ಮಾಡಿ ಅಗ್ರಸ್ಥಾನದಲ್ಲಿದ್ದಾರೆ. ಕಳೆದ 14 ತಿಂಗಳಿನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದಿದ್ದ ಕೊಹ್ಲಿ, ಜನವರಿ 14ರಂದು ನಡೆಯುವ ಅಫಘಾನಿಸ್ತಾನ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಮತ್ತೆ ಟಿ20ಗೆ ಕಮ್ಬ್ಯಾಕ್ ಮಾಡಿ ಹಲವು ದಾಖಲೆಯನ್ನು ತಮ್ಮ ಹೆಸರಿಗೆ ಬರೆಯುವ ಆತ್ಮವಿಶ್ವಾಸದಲ್ಲಿದ್ದಾರೆ.
ಪಂದ್ಯ ಸೋತ ಪಾಕ್
ಈ ಪಂದ್ಯದಲ್ಲಿ ಪಾಕಿಸ್ತಾನ 46 ರನ್ಗಳ ಸೋಲು ಕಂಡಿತು. ಆಕ್ಲೆಂಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್(57) ಮತ್ತು ಡೇರಿಯಲ್ ಮಿಚೆಲ್(61) ವಿಸ್ಫೋಟಕ ಬ್ಯಾಟಿಂಗ್ ನೆರೆವಿನಿಂದ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 226 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ 18 ಓವರ್ಗಳಲ್ಲಿ 180 ರನ್ಗಳಿಗೆ ಸರ್ವಪತನ ಕಂಡಿತು. ಪಾಕ್ ಪರ ಮಾಜಿ ನಾಯಕ ಬಾಬರ್ ಅಜಂ 57 ರನ್ ಗಳಿಸಿ ಮಿಂಚಿದರು.
24 ರನ್ ಬಿಟ್ಟುಕೊಟ್ಟ ಅಫ್ರಿದಿ
ತನ್ನ ಬೌಲಿಂಗ್ ದಾಳಿಯನ್ನು ಎದುರಿಸುವ ಬ್ಯಾಟರ್ ಯಾರು ಇಲ್ಲ ಎಂದು ಜಂಬ ಕೊಚ್ಚಿಕೊಳ್ಳುತ್ತಿದ್ದ ಶಾಹೀನ್ ಅಫ್ರಿದಿಗೆ ನ್ಯೂಜಿಲ್ಯಾಂಡ್ ಆರಂಭಿಕ ಆಟಗಾರ ಫಿನ್ ಅಲೆನ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಸರಿಯಾಗಿಯೇ ಉತ್ತರ ನೀಡಿದ್ದಾರೆ. ಮೊದಲ ಓವರ್ನಲ್ಲಿ ಕೇವಲ ಒಂದು ರನ್ ನೀಡಿ ವಿಕೆಟ್ ಪಡೆದಿದ್ದ ಅಫ್ರಿದಿ ತಮ್ಮ ದ್ವಿತೀಯ ಓವರ್ನಲ್ಲಿ ಬರೋಬ್ಬರಿ 24 ರನ್ ಬಿಟ್ಟುಕೊಟ್ಟು ದುಬಾರಿಯಾಗಿ ಪರಿಣಮಿಸಿದರು. ಫಿನ್ ಅಲೆನ್ ಅವರು ಅಫ್ರಿದಿಗೆ ಬಾರಿಸಿದ ಸಿಕ್ಸರ್ ಮತ್ತು ಬೌಂಡರಿ ಈ ರೀತಿ ಇದೆ. 6, 4, 4, 4, 6, 0.