ಮುಲ್ತಾನ್: ನೇಪಾಳ ವಿರುದ್ಧದ ಏಷ್ಯಾಕಪ್ ಟೂರ್ನಿಯ(Asia Cup 2023) ಬುಧವಾರದ ಪಂದ್ಯದಲ್ಲಿ ಪಾಕಿಸ್ತಾನ(Pakistan vs Nepal, 1st Match) ತಂಡ 238 ರನ್ಗಳ ಗೆಲುವು ಸಾಧಿಸಿ ಮೆರೆದಾಡಿದೆ. ಈ ಪಂದ್ಯದಲ್ಲಿ ಶತಕ ಬಾರಿಸಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ(Babar Azam) ಈ ಕೂಟದಲಿದ್ದ ಹಲವು ದಾಖಲೆಯನ್ನು ಮುರಿದಿದ್ದಾರೆ. ಅದರಲ್ಲಿ ಒಂದು ದಾಖಲೆ ಕಿಂಗ್ ಕೊಹ್ಲಿಯದ್ದಾಗಿದೆ. ಆದರೆ ಒಂದು ದಾಖಲೆ ಮಾತ್ರ ಇನ್ನೂ ಕೊಹ್ಲಿಯ(Virat Kohli) ಹೆಸರಿನಲ್ಲೇ ಮುಂದುವರಿದಿದೆ.
ಶತಕ ಬಾರಿಸಿದ ಮೂರನೇ ನಾಯಕ
ಏಷ್ಯಾಕಪ್ ಕ್ರಿಕೆಟ್ ಇತಿಹಾಸದಲ್ಲಿ(asia cup 2023 history) ಬಾಬರ್ ಅಜಂ ಬಾರಿಸಿದ ಮೊದಲ ಶತಕ ಇದಾಗಿದೆ. ಈ ಮೂಲಕ ಏಷ್ಯಾ ಕಪ್ ಟೂರ್ನಿಯಲ್ಲಿ ಶತಕ ಸಿಡಿಸಿದ ಪಾಕಿಸ್ತಾನದ ಮೂರನೇ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೆ ಬಾಬರ್ ಪಾತ್ರರಾದರು. ಇದಕ್ಕೂ ಮುನ್ನ ಪಾಕ್ ಪರ ನಾಯಕನಾಗಿ ಶಾಹಿದ್ ಅಫ್ರಿದಿ 2 ಶತಕ ಹಾಗೂ ಸಾನಿಯಾ ಮಿರ್ಜಾ ಗಂಡ ಶೋಯೆಬ್ ಮಲಿಕ್ 1 ಶತಕ ಬಾರಿಸಿದ್ದರು.
ನಾಯಕನಾಗಿ ಕೊಹ್ಲಿ ದಾಖಲೆ ಮುರಿದ ಬಾಬರ್
ನಾಯಕನಾಗಿ ಏಷ್ಯಾಕಪ್ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ದಾಖಲಿಸಿದ ಸಾಧಕರ ಪಟ್ಟಿಯಲ್ಲಿ ಬಾಬರ್ ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಧೋನಿ ಅನುಪಸ್ಥಿತಿಯಲ್ಲಿ 2014ರ ಏಷ್ಯಾ ಕಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಕೊಹ್ಲಿ, ಬಾಂಗ್ಲಾ ವಿರುದ್ಧ 136 ರನ್ ಬಾರಿಸಿದ್ದರು. ಇದು ಈ ವರೆಗಿನ ದಾಖಲೆಯಲಾಗಿತ್ತು. ಆದರೆ ಬಾಬರ್ ನೇಪಾಳ ವಿರುದ್ಧ 151 ರನ್ ಬಾರಿಸಿದ ವೇಳೆ ಕೊಹ್ಲಿ ದಾಖಲೆ ಪತನಗೊಂಡಿತು.
ಇದನ್ನೂ ಓದಿ Asia Cup 2023: ಲಂಕಾ-ಬಾಂಗ್ಲಾ ಮುಖಾಮುಖಿ; ಉಭಯ ತಂಡಗಳಿಗೂ ಗಾಯದ್ದೇ ಚಿಂತೆ
ಅತ್ಯಧಿಕ ವೈಯಕ್ತಿಕ ರನ್ ದಾಖಲೆ ಕೊಹ್ಲಿ ಹೆಸರಿನಲ್ಲಿದೆ
ಏಷ್ಯಾಕಪ್ ಟೂರ್ನಿಯಲ್ಲಿ ಪಂದ್ಯವೊಂದರಲ್ಲಿ ಅತ್ಯಧಿಕ ವೈಯಕ್ತಿಕ ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಸಾರಸ್ಯವೆಂದರೆ ಕಿಂಗ್ ಕೊಹ್ಲಿ 2012ರಲ್ಲಿ ಪಾಕಿಸ್ತಾನ ವಿರುದ್ಧವೇ 183ರನ್ ಬಾರಿಸಿದ್ದರು. ಈ ಸಾಧನೆಯ ಪಟ್ಟಿಯಲ್ಲಿ ಬಾಬರ್ಗೆ(151) ದ್ವಿತೀಯ ಸ್ಥಾನ. ಮೂರನೇ ಸ್ಥಾನ ಯೂನಿಸ್ ಖಾನ್(144), ನಾಲ್ಕನೇ ಸ್ಥಾನ ಬಾಂಗ್ಲಾದ ಮುಸ್ಫಿಕರ್ ರಹಿಂ(144) ಪಡೆದಿದ್ದಾರೆ.
19ನೇ ಶತಕ ಪೂರೈಸಿದ ಬಾಬರ್
ಗಾಯದ ಮಧ್ಯೆಯೂ ನೇಪಾಳ ವಿರುದ್ಧ 49 ಓವರ್ ತನಕ ಬ್ಯಾಟಿಂಗ್ ಕಾಯ್ದುಕೊಂಡ ಬಾಬರ್ ಅಜಂ 130 ಎಸೆತ ಎದುರಿಸಿ 151 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅವರ ಈ ಸೊಗಸಾದ ಇನಿಂಗ್ಸ್ನಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಯಿತು. ಬಾಬರ್ ಮತ್ತು ಇಫ್ತಿಕರ್ ಸೇರಿಕೊಂಡು 214 ರನ್ಗಳನ್ನು ರಾಶಿ ಹಾಕಿದರು. ಇದು ಏಕದಿನ ಕ್ರಿಕೆಟ್ನಲ್ಲಿ ಬಾಬರ್ ಬಾರಿಸಿದ 19ನೇ ಶತಕವಾಗಿದೆ.
ಪಂದ್ಯ ಗೆದ್ದ ಪಾಕ್
ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನಕ್ಕೆ ಉತ್ತಮ ಆರಂಭ ಸಿಗಲಿಲ್ಲ. 25 ರನ್ ಆಗುವಷ್ಟರಲ್ಲಿ ಆರಂಭಿಕರಿಬ್ಬರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ನಾಯಕ ನಾಯಕ ಬಾಬರ್ ಅಜಂ(151) ಮತ್ತು ಇಫ್ತಿಕರ್ ಅಹ್ಮದ್(109*) ಸೇರಿಕೊಂಡು ಶತಕ ಬಾರಿಸಿ ತಂಡಕ್ಕೆ ಆಸರೆಯಾದರು ಉಭಯ ಆಟಗಾರರ ಈ ಆಟದ ನೆರವಿನಿಂದ ಪಾಕ್ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 342 ರನ್ ಗಳಿಸಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ನೇಪಾಳ 23.4 ಓವರ್ಗಳಲ್ಲಿ 204 ರನ್ ಗಳಿಸಿ ಸೋಲು ಕಂಡಿತು.