Site icon Vistara News

Babar Azam: ಕೊಹ್ಲಿಯ ಸಂಭ್ರಮಾಚರಣೆಯನ್ನು ಕಾಪಿ ಮಾಡಿದ ಬಾಬರ್​ ಅಜಂ

Babar Azam-Virat Kohli

ಕರಾಚಿ: ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ(Virat Kohli) ಮತ್ತು ಪಾಕಿಸ್ತಾನ ತಂಡದ ಪ್ರಮುಖ ಆಟಗಾರ ಬಾಬರ್​ ಅಜಂ(Babar Azam) ಉತ್ತಮ ಸ್ನೇಹಿತರು. ಇವರಿಬ್ಬರ ಗೆಳೆತನ ಈಗಾಗಲೇ ಹಲವು ಬಾರಿ ಐಸಿಸಿ ಟೂರ್ನಿಗಳಲ್ಲಿ ಸಾಬೀತಾಗಿದೆ. ಇದೀಗ ಕೊಹ್ಲಿಯ ರೀತಿಯಲ್ಲೇ ಸಂಭ್ರಮಿಸಿ ಗಮನಸೆಳೆದಿದ್ದಾರೆ. ಈ ವಿಡಿಯೊ ವೈರಲ್(cricket viral video)​ ಆಗಿದೆ.

ಪ್ರಸಕ್ತ ಸಾಗುತ್ತಿರುವ ಪಾಕಿಸ್ತಾನ ಪ್ರೀಮಿಯರ್​ ಲೀಗ್​ನಲ್ಲಿ (ಪಿಎಸ್‌ಎಲ್‌) ಗರಿಷ್ಠ ಸ್ಕೋರರ್ ಆಗಿರುವ ಬಾಬರ್, ಶುಕ್ರವಾರ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಪೂರ್ತಿಗೊಂಡ ತಕ್ಷಣ ವಿರಾಟ್ ಕೊಹ್ಲಿಯಂತೆ ಸಂಭ್ರಮಾಚರಣೆ ಮಾಡಿದ್ದಾರೆ.

ಕೊಹ್ಲಿ ಶತಕ ಅಥವಾ ಅರ್ಧಶತಕ ಬಾರಿಸಿದ ಸಂದರ್ಭ ಕುತ್ತಿಗೆಯಿಂದ ಪೆಂಡೆಂಟ್ ತೆಗೆದು ಅದನ್ನು ಚುಂಬಿಸಿ ಸಂಭ್ರಮಿಸುತ್ತಾರೆ. ಬಾಬರ್​ ಕೂಡ ಇದೇ ರೀತಿ ಸಂಭ್ರಮಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನೆಟ್ಟಿಗರು ಈ ವಿಡಿಯೊಗೆ ವಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

ಕೊಹ್ಲಿ ಬಗ್ಗೆ ಅಪಾರ ಗೌರವ


ಬಾಬರ್​ ಅಜಂ ಅವರು ಕೊಹ್ಲಿಯ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಇದೇ ವಿಚಾರವಾಗಿ ಹಿಂದೊಮ್ಮೆ ಬಾಬರ್​ ಮುಕ್ತವಾಗಿ ಮಾತನಾಡಿದ್ದರು. “2019 ರ ವಿಶ್ವಕಪ್‌ನಲ್ಲಿ ನಾನು ವಿರಾಟ್​ ಕೊಹ್ಲಿಯನ್ನು ಮೊದಲ ಬಾರಿ ಭೇಟಿಯಾದೆ. ಆಗ ಅವರು ಉತ್ತುಂಗದ ಫಾರ್ಮ್​ನಲ್ಲಿದ್ದರು. ಈಗ ಕೂಡ ಇದ್ದಾರೆ. ನಾನು ಅವರಿಂದ ಕ್ರಿಕೆಟ್​ನಲ್ಲಿ ಕಲಿಯಬೇಕಿರುವುದು ತಂಬಾ ಇದೆ. ಅವರನ್ನು ಭೇಟಿಯಾದ ಪ್ರತಿ ಸಂದರ್ಭವೂ ಹಲವು ಸಲಹೆಯನ್ನು ಪಡೆದಿದ್ದೇನೆ. ಅವರ ಮೇಲೆ ಅಪಾರ ಗೌರವವಿದೆ” ಎಂದು ಹೇಳಿದ್ದರು.

ಇದನ್ನೂ ಓದಿ Babar Azam : ​ ಅಭಿಮಾನಿಗೆ ಬೆದರಿಕೆ ಒಡ್ಡಿದ ಪಾಕಿಸ್ತಾನದ ಸ್ಟಾರ್ ಆಟಗಾರ ಬಾಬರ್ ಅಜಂ, ವಿಡಿಯೊ ಇಲ್ಲಿದೆ

ಕಳೆದ ವರ್ಷ ಭಾರತದಲ್ಲೇ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಬಾಬರ್ ಅಜಂ ಅವರು ವಿರಾಟ್​ ಕೊಹ್ಲಿಯ ಜೆರ್ಸಿಯನ್ನು ಸ್ಮರಣಿಕೆಯಾಗಿ ಪಡೆದಿದ್ದರು. ವಿರಾಟ್ ತಮ್ಮ ಜೆರ್ಸಿಯನ್ನು ಆಟೋಗ್ರಾಫ್​ ಹಾಕಿ ಉಡುಗೊರೆಯಾಗಿ ನೀಡಿದ್ದರು. ಇದು ಹೃದಯಸ್ಪರ್ಶಿ ಕ್ಷಣಕ್ಕೆ ಸಾಕ್ಷಿಯಾಗಿತ್ತು.

ಪಾಕ್​ ತಂಡಕ್ಕೆ ಮತ್ತೆ ನಾಯಕನಾಗಲಿದ್ದಾರಾ ಬಾಬರ್ ಅಜಂ?


ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸೈಯದ್ ಮೊಹ್ಸಿನ್ ರಜಾ ನಖ್ವಿ(Syed Mohsin Naqvi) ಅವರನ್ನು ತಮ್ಮ ಹೊಸ ಅಧ್ಯಕ್ಷರನ್ನಾಗಿ ಘೋಷಿಸಿದ ಬೆನ್ನಲ್ಲೇ, ಬಾಬರ್ ಅಜಂ(Babar Azam) ಅವರನ್ನು ಮತ್ತೆ ತಂಡದ ನಾಯಕರನ್ನಾಗಿ ಮರು ನೇಮಕ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಭಾರತದ ಆತಿಥ್ಯದಲ್ಲಿ 2023ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ತೋರಿತ್ತು. ಬಾಬರ್​ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಆಡಿದ 9 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳನ್ನು ಮಾತ್ರ ಗೆಲುವು ಸಾಧಿಸಿ ಲೀಗ್​ ಹಂತದಲ್ಲೇ ಹೊರಬಿದ್ದಿತ್ತು. ಇದರ ಬೆನ್ನಲ್ಲೇ ಬಾಬರ್ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದರು

ಶಾಹೀನ್ ಅಫ್ರಿದಿ(Shaheen Afridi) ಮತ್ತು ಶಾನ್ ಮಸೂದ್(Shan Masood) ಅವರ ನಾಯಕತ್ವದಲ್ಲಿ ಪಾಕಿಸ್ತಾನ ಆಡಿದ ಎಲ್ಲ ಸರಣಿಯಲ್ಲೂ ಹೀನಾಯವಾಗಿ ಸೋಲು ಕಾಣುತ್ತಿದೆ. ಇದೇ ಕಾರಣಕ್ಕೆ ಪಿಸಿಬಿ ನೂತನ ಅಧ್ಯಕ್ಷ ನಖ್ವಿ ಅವರು ಮತ್ತೆ ಬಾಬರ್​ಗೆ ನಾಯಕ್ವ ನೀಡಲಿದೆ ಎಂದು ಪಾಕ್​ ಮಾಧ್ಯಮಗಳು ವರದಿ ಮಾಡಿದೆ. ಇನ್ನೊಂದು ಮೂಲಗಳ ಪ್ರಕಾರ ಬಾಬರ್​ ನಾಯಕತ್ವ ವಹಿಸಿಕೊಳ್ಳುವ ಆಸಕ್ತಿ ತೋರುತ್ತಿಲ್ಲ ಎಂದು ವರದಿಯಾಗಿದೆ.

Exit mobile version