Site icon Vistara News

Babar Azam | ವಿರಾಟ್‌ ಕೊಹ್ಲಿಯ ದಾಖಲೆ ಸರಿಗಟ್ಟಿದ ಬಾಬರ್‌ ಅಜಮ್‌, ಏನದು ಹೊಸ ಸಾಹಸ?

ಲಾಹೋರ್‌ : ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಜಮ್‌ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸುತ್ತಿದ್ದು, ಇದೀಗ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿಯ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಈ ಮೂಲಕ ಇನ್ನಷ್ಟು ದಾಖಲೆಗಳನ್ನು ತಮ್ಮೆಸರಿಗೆ ಬರೆಸಿಕೊಳ್ಳಲು ಮುಂದಾಗಿದ್ದಾರೆ. ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ ಸರಣಿಯ ಐದನೇ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಟಿ೨೦ ಸರಣಿಯ ಐದನೇ ಪಂದ್ಯದಲ್ಲಿ ಬಾಬರ್‌ ಅಜಮ್ ೫೯ ಎಸೆತಗಳಲ್ಲಿ ೮೭ ರನ್‌ ಬಾರಿಸಿದ್ದರೆ. ಇದೇ ವೇಳೆ ಅವರು ಟಿ೨೦ ಮಾದರಿಯಲ್ಲಿ ೩೦೦೦ ರನ್‌ಗಳ ಗರಿ ದಾಟಿದರು. ಅದಕ್ಕಾಗಿ ಅವರು ೮೧ ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದು, ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದರು. ವಿರಾಟ್‌ ಕೊಹ್ಲಿಯೂ ೮೧ ಇನಿಂಗ್ಸ್‌ಗಳಲ್ಲಿ ೩ ಸಾವಿರ ರನ್‌ಗಳ ಗಡಿ ದಾಟಿದ್ದರು.

ಬಾಬರ್‌ ಅಜಮ್‌ ಅವರ ಇದೇ ವೇಳೆ ಟಿ೨೦ ಮಾದರಿಯಲ್ಲಿ ೩ ಸಾವಿರ ರನ್ ಬಾರಿಸಿದ ವಿಶ್ವದ ಐದನೇ ಆಟಗಾರ ಎಂಬ ಖ್ಯಾತಿ ಪಡೆದುಕೊಂಡರು.

ವಿರಾಟ್‌ ಕೊಹ್ಲಿ (೮೧ ಇನಿಂಗ್ಸ್‌), ಬಾಬರ್‌ ಅಜಮ್‌ (೮೧ ಇನಿಂಗ್ಸ್‌), ಮಾರ್ಟಿನ್‌ ಗಪ್ಟಿಲ್‌ (೧೦೧ ಇನಿಂಗ್ಸ್‌), ರೋಹಿತ್‌ ಶರ್ಮ (೧೦೮ ಇನಿಂಗ್ಸ್‌), ಪಾಲ್‌ ಸ್ಟಿರ್ಲಿಂಗ್‌ (೧೧೩ ಇನಿಂಗ್ಸ್‌) ೩ ಸಾವಿರ ರನ್‌ ಬಾರಿಸಿದ ವಿಶ್ವದ ಕ್ರಿಕೆಟಿಗರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ತಂಡ ೨೦ ಓವರ್‌ಗಳಲ್ಲಿ ೬ ವಿಕೆಟ್‌ಗೆ ೧೬೯ ರನ್‌ ಬಾರಿಸಿದರೆ, ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ೧೪.೩ ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಜಯಶಾಲಿಯಾಯಿತು.

ಇದನ್ನೂ ಓದಿ | Team India | ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ ಗೆಲುವಿನ ಸಂಭ್ರಮಕ್ಕೆ ಅಭಿಮಾನಿಗಳ ಮೆಚ್ಚುಗೆ

Exit mobile version