Site icon Vistara News

Babar Azam: ಬೆಂಗಳೂರಿನಲ್ಲಿ ಹುಟ್ಟುಹಬ್ಬ ಆಚರಿಸಿದ ಪಾಕ್​ ನಾಯಕ ಬಾಬರ್​ ಅಜಂ

babar azam birthday

ಬೆಂಗಳೂರು: ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕ ಬಾಬರ್​ ಅಜಂ(Babar Azam) ಅವರು 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಈ ಹುಟ್ಟುಹಬ್ಬವನ್ನು(babar azam birthday) ಬೆಂಗಳೂರಿನಲ್ಲಿ ಆಚರಿಸಲಾಯಿತು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನಾಡಲು ಪಾಕ್​ ತಂಡ ಅಕ್ಟೋಬರ್​ 15ರಂದು ಬೆಂಗಳೂರು ತಲುಪಿದೆ. ಇದೇ ವೇಳೆ ಕೇಕ್​ ಕತ್ತರಿಸಿ ಬಾಬರ್​ ಹುಟ್ಟುಹಬ್ಬ ಮಾಡಲಾಯಿತು. ಈ ವೇಳೆ ಪಾಕ್​ ಆಟಗಾರರ ಜತೆಗಿದ್ದರು.

ಜನ್ಮದಿನಕ್ಕೂ ವಿಶ್ವಕಪ್​ಗೂ​ ಅವಿನಾಭಾವ ಸಂಬಂಧ

ಬಾಬರ್​ ಜನ್ಮದಿನಕ್ಕೂ ಮತ್ತು ಐಸಿಸಿ ವಿಶ್ವ ಕಪ್​ ಟೂರ್ನಿಗೂ ಅವಿನಾಭಾವ ಸಂಬಂಧವೊಂದು ಇದ್ದಂತೆ ತೋರುತ್ತಿದೆ. ಏಕೆಂದರೆ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದಿದ್ದ 20 ವಿಶ್ವ ಕಪ್​ ಟೂರ್ನಿಯ ಟ್ರೋಫಿ ಅನಾವರಣವೂ ಅವರ ಹುಟ್ಟುಹಬ್ಬದಂದೇ ಮಾಡಲಾಗಿತ್ತು. ಎಲ್ಲ ತಂಡಗಳ ನಾಯಕರು ಈ ಟ್ರೋಫಿ ಅನಾವರಣಗೊಳಿಸುವ ಮುನ್ನ ಅಜಂ ಅವರೊಂದಿಗೆ ಕೇಕ್​ ಕತ್ತರಿಸಿ ಅವರಿಗೆ ಶುಭ ಕೋರಿದ್ದರು. ಅಚ್ಚರಿ ಎಂದರೆ ಆ ಟೂರ್ನಿಯಲ್ಲಿ ಪಾಕ್​ ಆರಂಭಿಕ ಹಂತದಲ್ಲಿ ಕಳಪೆ ಪ್ರದರ್ಶನ ತೋರಿ ಬಳಿಕ ಯಾರೂ ಊಹಿಸದ ರೀತಿಯಲ್ಲಿ ಫೈನಲ್​ ಪ್ರವೇಶಿಸಿತ್ತು.

ಇದೀಗ ಏಕದಿನ ವಿಶ್ವ ಕಪ್​ ಕೂಡ ಅವರ ಹುಟ್ಟುಹಬ್ಬದಂದೇ ಬಂದಿದೆ. ಈ ಬಾರಿಯೂ ಪಾಕ್​ ಫೈನಲ್​ ಪ್ರವೇಶ ಪಡೆಯಲಿದೆಯಾ ಎಂದು ಕಾದು ನೋಡಬೇಕಿದೆ.​ ಸದ್ಯ ಪಾಕ್​ ಆಡಿದ ಮೂರು ಪಂದ್ಯಗಳಲ್ಲಿ 2 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಬಾಬರ್​ ಅವರು ಪಾಕ್​ ಪರ 49 ಟೆಸ್ಟ್, 111 ಏಕದಿನ ಮತ್ತು 104 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಕ್ರಮವಾಗಿ 3772, 5474 ಮತ್ತು 3485 ರನ್ ಕಲೆ ಹಾಕಿದ್ದಾರೆ.

ನಾಯಕತ್ವಕ್ಕೆ ರಾಜೀನಾಮೆ ನೀಡಲಿ

ಭಾರತ ವಿರುದ್ಧ ಹೀನಾಯ ಸೋಲು ಕಂಡ ಕಾರಣ ತಂಡದ ನಾಯಕತ್ವಕ್ಕೆ ಬಾಬರ್​ ರಾಜೀನಾಮೆ ನೀಡಬೇಕು ಎಂದು ಪಾಕ್​ ತಂಡದ ಮಾಜಿ ನಾಯಕ ಶೋಯೆಬ್​ ಮಲಿಕ್​ ಆಗ್ರಹಿಸಿದ್ದಾರೆ. ಕ್ರೀಡಾ ಸಂದರ್ಶನದಲ್ಲಿ ಮಾತನಾಡಿದ ಮಲಿಕ್​, ಹೋರಾಡಿ ಸೋಲು ಕಂಡರೂ ಬೇಸರವಿರಲಿಲ್ಲ. ಆದರೆ ಇದೊಂದು ಹೀನಾಯ ಸೋಲು. ತಂಡವನ್ನು ಒತ್ತಡದಲ್ಲಿ ಹೇಗೆ ಮುನ್ನಡೆಸಬೇಕು ಎನ್ನುವುದು ಬಾಬರ್​ಗೆ ತಿಳಿದಿಲ್ಲ. ಅವರ ತಕ್ಷಣ ನಾಯಕತ್ವಕ್ಕೆ ರಾಜೀನಾಮೆ ನೀಡಿದರೆ ಸೂಕ್ತ ಎಂದು ಹೇಳಿದರು.

“ನನ್ನ ಪ್ರಾಮಾಣಿಕ ಅಭಿಪ್ರಾಯದ ಪ್ರಕಾರ, ಬಾಬರ್ ಅಜಂ ನಾಯಕತ್ವವನ್ನು ತೊರೆಯಬೇಕು. ನಾನು ಈ ಮಾತನ್ನು ಈಗಾಗಲೇ ಹಿಂದಿನ ಸಂದರ್ಶನಗಳಲ್ಲಿ ಹೇಳಿದ್ದೇ. ಇದೀಗ ಮತ್ತೆ ಮರುಕಳಿಸುತ್ತೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಓರ್ವ ನಾಯಕನಾಗಿ ಬಾಬರ್ ತಂಡದ ಬಗ್ಗೆ ಯೋಚಿಸುತ್ತಿಲ್ಲ. ತನ್ನ ಪಾಡಿಗೆ ತಾನು ಆಡಿ ಹೋಗುತ್ತಿದ್ದಾರೆ. ಇದನ್ನು ಎಲ್ಲರು ಮಾಡಲು ಸಾಧ್ಯ. ಸಂಘಟಿತ ಹೋರಾಟದ ಕೊರತೆಯೇ ಭಾರತ ವಿರುದ್ಧದ ಸೋಲಿಗೆ ಕಾರಣ. ಸೋಲಿಗೆ ಬಾಬರ್​ ಅವರ ಕಳಪೆ ನಾಯಕತ್ವವೇ ಕಾರಣ” ಎಂದು ಹೇಳಿದರು.

Exit mobile version