Site icon Vistara News

Babar Azam: ಮತ್ತೆ ಪಾಕಿಸ್ತಾನ ತಂಡದ ನಾಯಕನಾಗಲಿದ್ದಾರೆ ಬಾಬರ್ ಅಜಂ!

Babar Azam

ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ(PCB) ಬಾಬರ್ ಅಜಂ(Babar Azam) ಅವರನ್ನು ಮತ್ತೆ ತಂಡದ ನಾಯಕರನ್ನಾಗಿ ಮರು ನೇಮಕ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಅದು ಕೂಡ ಮೂರು ಸ್ವರೂಪದ ಕ್ರಿಕೆಟ್​ಗೆ ಎನ್ನಲಾಗಿದೆ.

ಭಾರತದ ಆತಿಥ್ಯದಲ್ಲಿ 2023ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ತೋರಿತ್ತು. ಬಾಬರ್​ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಆಡಿದ 9 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳನ್ನು ಮಾತ್ರ ಗೆಲುವು ಸಾಧಿಸಿ ಲೀಗ್​ ಹಂತದಲ್ಲೇ ಹೊರಬಿದ್ದಿತ್ತು. ಹೀಗಾಗಿ ಬಾಬರ್​ ವಿರುದ್ಧ ಪಾಕ್​ ತಂಡದ ಮಾಜಿ ಆಟಗಾರರು ಸೇರಿ ಹಲವರು ಭಾರೀ ಟೀಕೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಾಬರ್ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದರು. ಬಾಬರ್ ಕೆಳಗಿಳಿದ ಬಳಿಕ ಪಿಸಿಬಿ ಶಾನ್ ಮಸೂದ್ ಅವರನ್ನು ಟೆಸ್ಟ್ ನಾಯಕರನ್ನಾಗಿ ನೇಮಿಸಿದರೆ, ಶಾಹೀನ್ ಅಫ್ರಿದಿಗೆ ಟಿ20 ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಯಿತು. ಆದರೆ ಇವರ ನಾಯಕತ್ವದಲ್ಲಿ ಪಾಕಿಸ್ತಾನ ಹಿಂದೆಂದು ಕಾಣದ ವೈಫಲ್ಯ ಕಂಡಿದೆ. ಆಡಿದ ಹಲವು ಸರಣಿಗಳಲ್ಲಿ ಹೀನಾಯ ಸೋಲು ಕಂಡಿದೆ.

ಇದನ್ನೂ ಓದಿ Babar Azam: ಕೊಹ್ಲಿಯ ಸಂಭ್ರಮಾಚರಣೆಯನ್ನು ಕಾಪಿ ಮಾಡಿದ ಬಾಬರ್​ ಅಜಂ

ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಸೈಯದ್ ಮೊಹ್ಸಿನ್ ರಜಾ ನಖ್ವಿ(Syed Mohsin Naqvi) ಅವರು ಬಾಬರ್​ ಅಜಂ ಅವರಿಗೆ ಮತ್ತೆ ತಂಡದ ನಾಯಕತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಬಾಬರ್​ ನಾಯಕತ್ವ ವಹಿಸಿಕೊಳ್ಳುವ ಆಸಕ್ತಿ ತೋರುತ್ತಿಲ್ಲ ಎಂದು ವರದಿಯಾಗಿದೆ.

ಬಾಬರ್​ ನಾಯಕತ್ವದ ಸಾಧನೆ


ಬಾಬರ್ ಅಜಮ್ ಪಾಕಿಸ್ತಾನದ ನಾಯಕನಾಗಿ 133 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 78 ಪಂದ್ಯಗಳು ಗೆದ್ದರೆ, 43 ಪಂದ್ಯಗಳಲ್ಲಿ ಸೋತಿದ್ದಾರೆ. ಒಂದು ಟೈ ಮತ್ತು ನಾಲ್ಕು ಪಂದ್ಯ ಡ್ರಾಗೊಂಡಿದೆ. ಏಕದಿನ ವಿಶ್ವಕಪ್​ ಟೂರ್ನಿ ಹೊರತುಪಡಿಸಿ ಉಳಿದ ಎಲ್ಲ ಸರಣಿಯಲ್ಲೂ ಬಾಬರ್​ ಸಾರಥ್ಯದಲ್ಲಿ ತಂಡ ಉತ್ತಮ ಪ್ರದರ್ಶನ ತೋರಿತ್ತು. ಇದೀಗ ನೆಲ ಕಚ್ಚಿರುವ ಪಾಕ್​ ತಂಡವನ್ನು ಗೆಲುವಿನ ಟ್ರ್ಯಾಕ್​ಗೆ ಮರಳಿ ತರುವ ನಿಟ್ಟಿನಲ್ಲಿ ಮತ್ತೆ ಬಾಬರ್​ಗೆ ನಾಯಕನ ಪಟ್ಟ ಕಟ್ಟಲು ಪಿಸಿಬಿ ಮುಂದಾಗಿದೆ. ಇದೇ ವರ್ಷ ಟಿ20 ವಿಶ್ವಕಪ್ ಕೂಡ ನಡೆಯಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ.

Exit mobile version