ಕೊಲೊಂಬೊ: ಬಾಬರ್ ಅಜಮ್ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯನ್ನು ಮೂರನೇ ಬಾರಿಗೆ ಪಡೆದುಕೊಂಡಿದ್ದು, ಆಗಸ್ಟ್ 2023ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರೆ. ಎಂಆರ್ಎಫ್ ಟೈರ್ಸ್ ಐಸಿಸಿ ಪುರುಷರ ಏಕದಿನ ಆಟಗಾರರ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಬಾಬರ್ ಅಜಮ್ ಕಳೆದ ತಿಂಗಳು ತಮ್ಮ ಅಸಾಧಾರಣ ಫಾರ್ಮ್ ಮೂಲಕ ಪ್ರಭಾವ ಬೀರುತ್ತಿದ್ದಾರೆ. ಆಗಸ್ಟ್ 2023 ರ ಐಸಿಸಿ ಪುರುಷರ ಆಟಗಾರ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ
ಬಾಬರ್ ಅಜಮ್ ಅವರು ತಮ್ಮದೇ ತಂಡದ ಸಹ ಆಟಗಾರ ಶದಾಬ್ ಖಾನ್ ಮತ್ತು ವೆಸ್ಟ್ ಇಂಡೀಸ್ ಹಾರ್ಡ್ ಹಿಟ್ಟರ್ ನಿಕೋಲಸ್ ಪೂರನ್ ಅವರನ್ನು ಸೋಲಿಸಿ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡರು. ಪಾಕಿಸ್ತಾನ ನಾಯಕ ಈ ಗೌರವವನ್ನು ಸ್ವೀಕರಿಸಲು ರೋಮಾಂಚಿತರಾಗಿದ್ದಾರೆ. ಆಗಸ್ಟ್ 2023 ರ ಐಸಿಸಿ ತಿಂಗಳ ಆಟಗಾರನಾಗಿ ಆಯ್ಕೆಯಾಗಲು ನನಗೆ ಸಂತೋಷವಾಗಿದೆ ಎಂದು ಬಾಬರ್ ಅಜಮ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ತಿಂಗಳು ನನಗೆ ಮತ್ತು ನನ್ನ ತಂಡಕ್ಕೆ ಉತ್ತಮ ಫಲಿತಾಂಶ ದೊರಕಿದೆ. ಏಕೆಂದರೆ ನಾವು ಕೆಲವು ಅದ್ಭುತ ಪ್ರದರ್ಶನಗಳನ್ನು ನೀಡಿದ್ದೇವೆ. ಇಷ್ಟು ದೀರ್ಘ ಸಮಯದ ನಂತರ ಏಷ್ಯಾಕಪ್ ಪಾಕಿಸ್ತಾನಕ್ಕೆ ಬಂದಿದೆ. ಮುಲ್ತಾನ್ ಮತ್ತು ಲಾಹೋರ್ನಲ್ಲಿ ಕ್ರಿಕೆಟ್ ಪ್ರಿಯ ಪ್ರೇಕ್ಷಕರ ಮುಂದೆ ಆಡುವುದು ಅಧ್ಬುತವಾಗಿತ್ತು. ಮುಲ್ತಾನ್ ನಲ್ಲಿ ನನ್ನ ದಶದ ಜನರ ಮುಂದೆ ಶತಕಗಳನ್ನು ಬಾರಿಸಿದ್ದು ಸಂತೋಷ ನೀಡಿತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ‘ಭಾರತದಿಂದ ಉತ್ತಮ ಉಡುಗೊರೆ ಸಿಕ್ಕಿದೆ’; ಕಳಪೆ ಪ್ರದರ್ಶನಕ್ಕೆ ಪಾಕ್ ಕೋಚ್ ಅಸಮಾಧಾನ
ಏಷ್ಯಾಕಪ್ ನಡೆಯುತ್ತಿದ್ದು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸಮೀಪಿಸುತ್ತಿದೆ. ಈ ಮೂಲಕ ನಾವು ಕ್ರಿಕೆಟ್ನ ರೋಮಾಂಚಕಾರಿ ಹಂತಕ್ಕೆ ಸಾಗುತ್ತಿದ್ದೇವೆ. ನಾನು ನನ್ನ ಸಾಮರ್ಥ್ಯವನ್ನು ಬಳಸಿಕೊಳ್ಳಲು ಎದುರು ನೋಡುತ್ತಿದ್ದೇನೆ. ನನ್ನ ತಂಡ ಮತ್ತು ಲಕ್ಷಾಂತರ ಪಾಕಿಸ್ತಾನಿ ಅಭಿಮಾನಿಗಳಿಗೆ ಸಂತೋಷ ತರಲು ಉತ್ಸುಕರಾಗಿದ್ದೇವೆ ಎಂದು ಅಜಮ್ ಹೇಳಿದ್ದಾರೆ.
ಪಾಕಿಸ್ತಾನ ತಂಡದ ನಾಯಕ ಹಲವಾರು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ್ದಾರೆ ಕ್ರಿಕೆಟ್ ಇತಿಹಾಸದಲ್ಲಿ 19 ಏಕದಿನ ಶತಕಗಳನ್ನು ತಲುಪಿದ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗದ್ದಾರೆ. ಕ್ರಿಕೆಟ್ನ ಎಲ್ಲಾ ಸ್ವರೂಪಗಳಲ್ಲಿ ಅವರು 31 ನೇ ಶತಕವನ್ನು ಬಾರಿಸಿದ್ದಾರೆ. ಪಾಕ್ ದಂತಕಥೆಗಳಾದ ಜಾವೇದ್ ಮಿಯಾಂದಾದ್ ಮತ್ತು ಸಯೀದ್ ಅನ್ವರ್ ಅವರ ದಾಖಲೆ ಮುರಿದಿದ್ದಾರೆ. ಪಾಕಿಸ್ತಾನದ ಪರ ಶತಕಗಳ ವಿಷಯದಲ್ಲಿ ಯೂನಿಸ್ ಖಾನ್ (41), ಮೊಹಮ್ಮದ್ ಯೂಸುಫ್ (39) ಮತ್ತು ಇಂಜಮಾಮ್-ಉಲ್-ಹಕ್ (35) ನಂತರದ ಸ್ಥಾನದಲ್ಲಿದ್ದಾರೆ.