ನವ ದೆಹಲಿ: ಫಾರ್ಮ್ ಕಳೆದುಕೊಂಡು ಪೇಚಾಟಕ್ಕೆ ಸಿಲುಕಿರುವ ವಿರಾಟ್ ಕೊಹ್ಲಿಗೆ (Virat kohli) ಸಮಾಧಾನ ಹೇಳಿ ವಿಶ್ವ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್, ವಿರಾಟ್ ಸೃಷ್ಟಿಸಿದ್ದ ಒಂದೊಂದೇ ದಾಖಲೆಗಳನ್ನು ತಮ್ಮೆಸರಿಗೆ ಬರೆದುಕೊಳ್ಳುತ್ತಿದ್ದಾರೆ.
ಅಂತೆಯೇ ಭಾನುವಾರ ಅವರು ಇದುವರೆಗೆ ವಿರಾಟ್ ಕೊಹ್ಲಿ ಹೆಸರಲ್ಲಿದ್ದ ಅತಿ ವೇಗದ ೧೦ ಸಾವಿರ ಅಂತಾರಾಷ್ಟ್ರೀಯ ರನ್‌ಗಳ ದಾಖಲೆಯನ್ನು ಮುರಿದಿದ್ದಾರೆ.
ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ವೇಳೆ ಬಾಬರ್ ಅಜಮ್ ಈ ಸಾಧನೆ ಮಾಡಿದ್ದಾರೆ. ಅವರು ಅರ್ಧ ಶತಕ ದಾಖಲಿಸುತ್ತಿದ್ದಂತೆ ಅತಿ ವೇಗದಲ್ಲಿ ೧೦ ಸಾವಿರ ರನ್ ಪೇರಿಸಿದ ಏಷ್ಯಾದ ಆಟಗಾರ ಎಂಬ ವಿರಾಟ್ ಕೊಹ್ಲಿಯ ದಾಖಲೆ ಮುರಿದರು.
ವಿರಾಟ್ ಕೊಹ್ಲಿ ೨೩೨ ಇನಿಂಗ್ಸ್‌ಗಳಲ್ಲಿ ೧೦ ಸಾವಿರ ಅಂತಾರಾಷ್ಟ್ರೀಯ ರನ್‌ಗಳ ಗಡಿ ದಾಡಿದ್ದರು. ಇದೀಗ ಬಾಬರ್ ಅಜಮ್ ೨೨೮ ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಏಷ್ಯಾದ ಬ್ಯಾಟರ್ ಎನಿಸಿಕೊಂಡರು.
ವೆಸ್ಟ್ ಇಂಡೀಸ್‌ನ ಮಾಜಿ ಬ್ಯಾಟರ್ ವವಿವಿಯನ್ ರಿಚರ್ಡ್ಸ್ (೨೦೬ ಇನಿಂಗ್ಸ್), ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್ ಹಾಶೀಮ್ ಆಮ್ಲಾ (೨೧೭), ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾ (೨೨೦), ಇಂಗ್ಲೆಂಡ್‌ನ ಜೋ ರೂಟ್ (೨೨೨) ವಿಶ್ವದ ಬ್ಯಾಟರ್‌ಗಳ ಪಟ್ಟಿಯಲ್ಲಿ ಬಾಬರ್ ಅವರಿಗಿಂತ ಮುಂದಿದ್ದಾರೆ. ಕೊಹ್ಲಿ ಹಾಗೂ ಸ್ಟೀವ್ ಸ್ಮಿತ್ (೨೩೨ ಇನಿಂಗ್ಸ್) ಪಟ್ಟಿಯಲ್ಲಿ ಸಮಾನ ಸ್ಥಾನ ಹೊಂದಿದ್ದಾರೆ.
ಅಜಮ್ ಅವರು ಈ ಸಾಧನೆ ಮಾಡಿರುವ ಏಷ್ಯಾದ ಮೊದಲ ಕ್ರಿಕೆಟಿಗರೂ ಹೌದು. ಅತಿ ವೇಗದಲ್ಲಿ ೧೦ ಸಾವಿರ ರನ್ ಪೂರೈಸಿದ ಏಷ್ಯಾದ ಐದು ಆಟಗಾರ ಪಟ್ಟಿ ಇಂತಿದೆ.
೧) ಬಾಬರ್ ಅಜಮ್ -೨೨೮ ಇನಿಂಗ್ಸ್
೨) ವಿರಾಟ್ ಕೊಹ್ಲಿ-೨೩೨ ಇನಿಂಗ್ಸ್̳̳̳
೩) ಸುನೀಲ್ ಗವಾಸ್ಕರ್- ೨೪೩ ಇನಿಂಗ್ಸ್
೪) ಜಾವೆದ್ ಮಿಯಾಂದಾದ್- ೨೪೮ ಇನಿಂಗ್ಸ್
೫) ಸೌರವ್ ಗಂಗೂಲಿ- ೨೫೩ ಇನಿಂಗ್ಸ್
ಇದನ್ನೂ ಓದಿ | ಈ ಕ್ಷಣವೂ ಕಳೆದು ಹೋಗುತ್ತದೆ ಎಂದು ಕೊಹ್ಲಿಗೆ (Virat Kohli) ಸಮಾಧಾನ ಹೇಳಿದ ಅಜಮ್