Site icon Vistara News

Babar Azam: ಸಹ ಆಟಗಾರನನ್ನು ಘೇಂಡಾಮೃಗಕ್ಕೆ ಹೋಲಿಸಿದ ಬಾಬರ್​ ಅಜಂ; ವಿಡಿಯೊ ವೈರಲ್

Babar Azam

Babar Azam: Trouble In Pakistan Camp Ahead Of T20 World Cup? Babar Azam Body-Shamed Azam Khan? Viral Video

ನ್ಯೂಯಾರ್ಕ್​: ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ(Babar Azam) ಅವರು ಸಹ ಆಟಗಾರ ಆಝಂ ಖಾನ್ ಅವರನ್ನು ಘೇಂಡಾ (ಘೇಂಡಾಮೃಗ) ಎಂದು ಕರೆಯುವ ಮೂಲಕ(Babar Azam Body-Shamed) ಭಾರೀ ಟೀಕೆಗೆ ಒಳಗಾಗಿದ್ದಾರೆ. ಪಾಕಿಸ್ತಾನ ತಂಡದ ಆಟಗಾರರು ಅಭ್ಯಾಸ ನಡೆಸುವ ವೇಳೆ ಬಾಬರ್​ ಅವರು ಆಝಂ ಖಾನ್​ಗೆ(Azam Khan) ಈ ರೀತಿ ಹೇಳಿದ್ದಾರೆ. ಈ ವಿಡಿಯೊ ವೈರಲ್(Viral Video)​ ಆಗಿದೆ.

ದಢೂತಿ ದೇಹ ಹೊಂದಿರುವ ಕಾರಣ ಆಝಂ ಖಾನ್ ಅವರನ್ನು ಬಾಬರ್ ಘೇಂಡಾಮೃಗಕ್ಕೆ ಹೋಲಿಸಿದ್ದಾರೆ. ಘೇಂಡಾ ಎಂದು ಕರೆದಾಗ ಸಿಟ್ಟುಗೊಂಡ ಆಝಂ ಖಾನ್ ಕೂಡ ಬಾಬರ್​ ಜತೆ ಮಾತಿನ ಚಕಮಕಿ ನಡೆಸಿದ್ದಾರೆ. ಬಾಬರ್​ ವರ್ತನೆಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಹವನ್ನು ನೋಡಿ ಈ ರೀತಿ ಒಬ್ಬ ವ್ಯಕ್ತಿಯನ್ನು ಹೀಯಾಳಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ನೀವು ಕೂಡ ಇದೇ ರೀತಿ ದಢೂತಿ ದೇಹ ಹೊಂದಿದ್ದು ನಿಮ್ಮನ್ನು ಘೇಂಡಾ ಎಂದು ಕರೆದಾಗ ನಿಮಗೆ ಎಷ್ಟು ಬೇಸರವಾದೀತು ಎಂದು ಪ್ರಶ್ನೆ ಮಾಡಿದ್ದಾರೆ.

ಭಾರತ ವಿರುದ್ಧ ಶಾಂತ ಚಿತ್ತರಾಗಿ ಆಡಿ


ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಟಿ20 ವಿಶ್ವಕಪ್(t20 world cup 2024)​ ಪಂದ್ಯ ಭಾನುವಾರ(ಜೂನ್​ 9) ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಪಾಕ್(pakistan cricket team)​ ತಂಡದ ನಾಯಕ ಬಾಬರ್​ ಅಜಂ(Babar Azam) ಅವರು ತಂಡದ ಸಹ ಆಟಗಾರರರಿಗೆ ಮಹತ್ವದ ಸಲೆಯೊಂದನ್ನು ನೀಡಿದ್ದಾರೆ. ಎಲ್ಲರು ಶಾಂತ ಚಿತ್ತರಾಗಿ ಆಡಬೇಕು ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಬಾಬರ್​, ಭಾರತ ಮತ್ತು ಪಾಕಿಸ್ತಾನ ಪಂದ್ಯಗಳಿಗೆ ಇರುವ ಅತಿಯಾದ ಪ್ರಚಾರ, ನಿರೀಕ್ಷೆ ಮತ್ತು ಒತ್ತಡಗಳು ಆಟಗಾರರಲ್ಲಿ ಸಹಜವಾಗಿಯೇ ಒತ್ತಡ ಉಂಟುಮಾಡುತ್ತದೆ. ತಮ್ಮ ತಂಡದ ಆಟಗಾರರು ಶಾಂತಚಿತ್ತರಾಗಿದ್ದುಕೊಂಡು, ಆಟದ ಮೂಲಭೂತ ಅಂಶಗಳ ಕಡೆಗಷ್ಟೇ ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ.

2021ರಲ್ಲಿ ದುಬೈನಲ್ಲಿ ನಡೆದಿದ್ದ ವಿಶ್ವಕಪ್‌ ಟೂರ್ನಿಯಲ್ಲಿ ನಾವು ಭಾರತ ವಿರುದ್ಧ 10 ವಿಕೆಟ್​ಗಳಿಂದ ಗೆಲುವು ಸಾಧಿಸಿದ್ದೆವು. ಈ ಗೆಲುವಿನ ಮಂತ್ರ, ನಾವು ಭಾರತೀಯ ಆಟಗಾರರನ್ನು ಕೆಣಕದೆ ಶಾಂತ ರೀತಿಯಲ್ಲಿ ಆಡಿದ್ದು. ಗೆಲುವಿನ ಬಳಿಕವೂ ದೊಡ್ಡ ಸಂಭ್ರಮಾಚರಣೆ ಮಾಡಿಲ್ಲ. ಈ ಬಾರಿಯೂ ನಾವು ಎಷ್ಟು ತಾಳ್ಮೆಯಿಂದ ಕ್ರಿಕೆಟ್​ ಆಡುತ್ತೇವೊ ಅಷ್ಟು ಉತ್ತಮ. ಇದು ನಮ್ಮ ಗೆಲುವಿಗೆ ಸಹಾಯ ಮಾಡುತ್ತದೆ. ಹೀಗಾಗಿ ಎಲ್ಲ ಆಟಗಾರರು ಈ ವಿಚಾರವನ್ನು ಗಮನದಲ್ಲಿರಿಸಬೇಕು ಎಂದರು.

ಪಾಕಿಸ್ತಾನ ಟಿ20 ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ತೋರಿದೆ. 2009ರಲ್ಲಿ ಚಾಂಪಿಯನ್ ಆಗಿದ್ದ ತಂಡ, 2007 ಮತ್ತು 2022ರಲ್ಲಿ ರನ್ನರ್ ಅಪ್ ಆಗಿತ್ತು. ಒಟ್ಟು ಎಂಟು ಆವೃತ್ತಿಗಳಲ್ಲಿ ಆರು ಬಾರಿ ಸೆಮಿಫೈನಲ್ ತಲುಪಿದೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ಮಣಿದಿತ್ತು. ಭಾರತ ವಿರುದ್ಧ ಆಡುವಾಗ ಯಾವಾಗಲು ಕೂಡ ಆಟಗಾರರಲ್ಲಿ ಸಹಜವಾಗಿಯೇ ಒತ್ತಡವಿರುತ್ತದೆ. ಇದನ್ನು ಬದಿಗಿಟ್ಟು ಆಡಿದರೆ ಗೆಲುವು ಖಚಿತ ಎಂದು ಬಾಬರ್​ ಅಭಿಪ್ರಾಯಪಟ್ಟರು.

Exit mobile version