Site icon Vistara News

Shakib Al Hasan: ‘ನಾವು ಯುದ್ಧದಲ್ಲಿದ್ದೆವು’ ಟೀಕಿಸಿದವರಿಗೆ ತಿರುಗೇಟು ನೀಡಿದ ಶಕೀಬ್‌

shakib al hasan

ನವದೆಹಲಿ: ಶ್ರೀಲಂಕಾದ ಆಟಗಾರ ಏಂಜೆಕೊ ಮ್ಯಾಥ್ಯೂಸ್‌(angelo mathews) ಅವರನ್ನು ಟೈಮ್ಡ್‌ ಔಟ್‌(timed out) ಮಾಡಿ ಎಲ್ಲಡೆ ಟೀಕೆಗೆ ಗುರಿಯಾಗಿರುವ ಶಕೀಬ್‌ ಅಲ್‌-ಹಸನ್‌(Shakib Al Hasan) ತಮ್ಮ ಈ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ಒಂದು ಯುದ್ಧದಲ್ಲಿ ಏನು ಮಾಡಬೇಕಿತ್ತೋ ಅದನ್ನು ನಾನು ಮಾಡಿದೆ’ ಎಂದು ಪಂದ್ಯ ಮುಗಿದ ಬಳಿಕ ಹೇಳಿದರು.

ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮ್ಯಾಥ್ಯೂಸ್ ಅವರು ಕ್ರೀಸ್‌ಗಿಳಿದ ವೇಳೆ ಹೆಲ್ಮೆಟ್‌ ಬದಲಿಸಲು ಸಮಯ ತೆಗೆದುಕೊಕೋಮಡ ಕಾರಣ ಅವರು ಟೌಮ್ಡ್​ ಔಟ್​ ಆದರು. ಈ ಔಟ್​ ಮನವಿ ಮಾಡಿ ಶಕೀಬ್​ ವಿರುದ್ಧ ಕ್ರೀಡಾಸ್ಫೂರ್ತಿಯ ವಿಚಾರವಾಗಿ ಅನೇಕ ಮಾಜಿ ಮತ್ತು ಹಾಲಿ ಆಟಗಾರರು ಟೀಕೆ ವ್ಯಕ್ತಪಡಿಸಿದ್ದರು. ಇದಕ್ಕೆ ಶಕೀಬ್​ ಅವರು ಸಮರ್ಥನೆಯನ್ನು ನೀಡಿದ್ದಾರೆ.

‘ನಮ್ಮ ತಂಡದ ಫೀಲ್ಡರ್‌ ಒಬ್ಬರು ನನ್ನ ಬಳಿ ಬಂದು. ಮ್ಯಾಥ್ಯೂಸ್‌​ ಅವರು ನಿಗದಿತ ಸಮಯ ಕಳೆದರೂ ಇನ್ನೂ ಬ್ಯಾಟಿಂಗ್​ ನಡೆಸುತ್ತಿಲ್ಲ. ಐಸಿಸಿ ನಿಯಮ ಪ್ರಕಾರ ಇದನ್ನು ಅಂಪೈರ್​ಗೆ ಅಫೀಲ್​ ಮಾಡಬಹುದಲ್ಲವೇ ಎಂದು ಕೇಳಿದರು. ಆಗ ನಾನು ಔಟ್‌ಗೆ ಮನವಿ ಸಲ್ಲಿಸಿದೆ. ಹೀಗಾಗಿ ಮ್ಯಾಥ್ಯೂಸ್‌ ಹೊರನಡೆಯಬೇಕಾಯಿತು” ಎಂದರು.

ಇದನ್ನೂ ಓದಿ ಬಹಿರಂಗವಾಗಿಯೇ ಶಕೀಬ್​, ಬಾಂಗ್ಲಾ ತಂಡಕ್ಕೆ ಜಾಡಿಸಿದ ಏಂಜೆಲೊ ಮ್ಯಾಥ್ಯೂಸ್‌

ನಮ್ಮ ತಪ್ಪೇನಿಲ್ಲ

“ನಾವು ನಿಯಮದಲ್ಲಿ ಏನಿದೆಯೋ ಅದನ್ನು ಮಾಡಿದ್ದೇವೆ. ಅಂಪೈರ್‌ಗಳು ನಮ್ಮ ಮನವಿ ವಳೆಗೆ ನಿಜಕ್ಕೂ ಔಟ್‌ಗೆ ಮನವಿ ಸಲ್ಲಿಸುತ್ತಿದ್ದೀರಾ ಎಂದು ಕೇಳಿದರು. ಆಗ ನಾನು ಹೌದು ಎಂದು ಹೇಳಿದೆ” ಏಕೆಂದರೆ ಇದು ನಿಯದಲ್ಲಿ ಮಾನ್ಯವಾಗಿದೆ. ಒಂದೊಮ್ಮೆ ಈ ನಿಯಮ ಅಧಿಕೃತವಾಗಿ ಕ್ರಿಕೆಟ್​ನಲ್ಲಿ ಇರದೇ ಹೋಗಿದ್ದರೆ ನಾನು ಮತ್ತು ನಮ್ಮ ತಂಡ ಮಾಡಿದ್ದು ತಪ್ಪು. ಆದರೆ ಇಲ್ಲಿ ನಿಯಮವೇ ಹೀಗಿರುವಾಗ ಇದನ್ನು ಬಳಸುವುದರಲ್ಲಿ ತಪ್ಪೇನಿದೆ”ಎಂದು ತಮ್ಮ ವಿರುದ್ಧ ಟೀಕೆ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ.

ನಿಯಮ ಬದಲಿಸಿ

‘ಕ್ರೀಡಾಸ್ಫೂರ್ತಿ ವಿಚಾರವಾಗಿ ಮಾತನಾಡುವ ಕೆಲವರಿಗೆ ನಾನು ಸಲಹೆ ನೀಡುವುದೇನೆಂದರೆ. ಇದು ಕ್ರೀಡಾಸ್ಫೂತಿಗೆ ವಿರೋಧವಾಗಿದ್ದರೆ ನಿಯವನ್ನು ಬದಲಿಸುವಂತೆ ಐಸಿಸಿಗೆ ಮನವಿ ಸಲ್ಲಿಸಿ. ಒಬ್ಬ ಕ್ರಿಕೆಟ್​ ಆಟಗಾರನಾಗಿ ಇದರಲ್ಲಿರುವ ನಿಯವನ್ನು ಸರಿಯಾಗಿ ತಿಳಿದುಕೊಳ್ಳದೆ ಇದ್ದರೆ ಆತ ಕ್ರಿಕೆಟ್​ ಆಡುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾವುದೇ ಕೆಲಸದಲ್ಲಿಯೂ ಕೆಲವು ನಿಯಮ ಚೌಕಟ್ಟು ಇರುತ್ತದೆ. ಅದಕ್ಕೆ ಬದ್ಧನಾಗಿ ನಾವು ಕೆಲಸ ಮಾಡುತ್ತೇವೆ. ಮ್ಯಾಥ್ಯೂಸ್​ ವಿಚಾರದಲ್ಲಿಯೂ ಇದೇ ಸಂಭವಿಸಿದೆ” ಎಂದು ಶಕೀಬ್​​ ಹೇಳಿದರು.

ನಮ್ಮ ತಂಡಕ್ಕೆ ಲಾಭವಾಯಿತು

‘ನಾನು ಮಾಡಿದ್ದು ಸರಿಯೋ, ತಪ್ಪೋ ನನಗೆ ಗೊತ್ತಿಲ್ಲ. ಆದರೆ ಮ್ಯಾಥ್ಯೂಸ್‌ ಅವರನ್ನು ಔಟ್‌ ಮಾಡಿದ್ದರಿಂದ ನಮ್ಮ ತಮಡಕ್ಕೆ ಲಾಭವಾಗಿದ್ದು ನಿಜ. ಅದರ ಬಗ್ಗೆ ಯಾರು ಏನೇ ಚರ್ಚೆ ಮಾಡಿಕೊಳ್ಳಲಿ. ನಾವು ಯುದ್ಧದ್ದಲ್ಲಿದ್ದೆವು ಎಂದು ನನಗೆ ಅನಿಸಿತು. ಹೀಗಾಗಿ ಏನು ಮಾಡಬೇಕಿತ್ತೋ ಅದನ್ನು ಮಾಡಿದೆ ಅಷ್ಟೇ’ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಅಂಡರ್​-19 ವಿಶ್ವಕಪ್​ನಿಂದ ಜತೆಯಾಗಿ ಆಡಿದ್ದೇವೆ

“ನಾನು ಮತ್ತು ಮ್ಯಾಥ್ಯೂಸ್​ 19 ವರ್ಷದೊಳಗಿನವರ ವಿಶ್ವಕಪ್​ನಿಂದ ಹಿಡಿದು ಟಿ20 ಮತ್ತು ಏಕದಿನ ವಿಶ್ವಕಪ್​ನಲ್ಲಿ ಜತೆಯಾಗಿ ಆಡಿದ್ದೇವೆ. 2006 ರಿಂದ ನಾನು ಮ್ಯಾಥ್ಯೂಸ್​ ಪರಿಚಿತರು. ಅವರ ಬಗ್ಗೆ ನಾನು ಬಹಳ ತಿಳಿದಿದ್ದೇನೆ. ಆದರೆ ನಿಯಮ ಪ್ರಕಾರ ಅವರನ್ನು ಔಟ್​ ಮಾಡುವ ಹಕ್ಕು ನನೂ ಇದೆ. ಅವರು ನನ್ನ ಬಗ್ಗೆ ಏನೇ ಟೀಕೆ ಮಾಡಿದರೂ ನಾನು ಅವರನ್ನು ಟೀಕೆ ಮಾಡುವುದಿಲ್ಲ. ಏಕೆಂದರೆ ಅವರಿಗೆ ಈ ನಿಯಮದ ಬಗ್ಗೆ ತಿಳಿದಿರುತ್ತದೆ ಎಂದು ಭಾವಿಸುತ್ತೇನೆ” ಎಂದು ಶಕೀಬ್​ ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version