Site icon Vistara News

Rohit Sharma : ಟೀಮ್​ ಇಂಡಿಯಾ ನಾಯಕನಿಗೆ ಬೇಸರದ ಸುದ್ದಿ, ವಿಂಡೀಸ್ ಟೂರ್​ನಿಂದ ಔಟ್​!

Rohit Sharma

#image_title

ನವ ದೆಹಲಿ: ಜುಲೈ 12ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ (Rohit Sharma) ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​ನ (ಡಬ್ಲ್ಯುಟಿಸಿ) 2023-25ರ ಋತುವಿನ ಮೊದಲ ಸರಣಿ ವೆಸ್ಟ್​ ಇಂಡೀಸ್​ನಲ್ಲಿ ನಡೆಯಲಿದೆ. ಅದೇ ರೀತಿ ವಿಂಡೀಸ್ ವಿರುದ್ಧ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳಲ್ಲೂ ಭಾರತ ತಂಡ ಪಾಲ್ಗೊಳ್ಳಲಿದೆ. ಆದರೆ ಈ ಪ್ರವಾಸದಿಂದ ರೋಹಿತ್​ ಶರ್ಮಾ ವಿಶ್ರಾಂತಿ ಪಡೆಯಬಹುದು ಎಂದು ಮೂಲಗಳು ತಿಳಿಸಿವೆ.

ಲಂಡನ್​​ನ ಓವಲ್​ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಡಬ್ಲ್ಯುಟಿಸಿ 2021-23 ರ ಫೈನಲ್​ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಅನುಭವಿಸಿತ್ತು. 209 ರನ್​ಗಳ ಸೋಲಿನ ಜತೆಗೆ ಟ್ರೋಫಿ ಕಳೆದುಕೊಂಡಿದ್ದ ರೋಹಿತ್​ ಶರ್ಮಾ ನೇತೃತ್ವದ ತಂಡದ ಬಗ್ಗೆ ಕ್ರಿಕೆಟ್​ ಅಭಿಮಾನಿಗಳು ಟೀಕೆಗಳನ್ನು ವ್ಯಕ್ತಪಡಿಸಿದ್ದರು.

ಎಲ್ಲಾ ಮಾದರಿಯ ಕ್ರಿಕೆಟ್​ ತಂಡ ಜವಾಬ್ದಾರಿಗಳನ್ನು ಹೊತ್ತುಕೊಂಡ ಬಳಿಕ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಒತ್ತಡದ ಎದುರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ಐಪಿಎಲ್ 2023ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಕೂಡ ಮುನ್ನಡೆಸಿದ್ದರು. ಇದು ಕೂಡ ಅವರ ಕಾರ್ಯದೊತ್ತಡ ಹೆಚ್ಚಿಸಿದೆ ಎನ್ನಲಾಗಿದೆ. ಡಬ್ಲ್ಯುಟಿಸಿ ಫೈನಲ್​ ಮೊದಲು ಐಪಿಎಲ್​ನಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ್ದರು.

ಸೀಮಿತ ಓವರ್​ಗಳ ಸರಣಿಗೆ ವಿಶ್ರಾಂತಿ

ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ರೋಹಿತ್​​ಗೆ ಕೆಲವು ಪಂದ್ಯಗಳಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಟೆಸ್ಟ್ ಅಥವಾ ಎಂಟು ಸೀಮಿತ ಓವರ್​​​ಗಳ ಸರಣಿಗೂ ವಿಶ್ರಾಂತಿ ದೊರೆಯುವ ಸಾಧ್ಯತೆಗಳಿವೆ ಎಂದು ಹತ್ತಿರದ ಮೂಲಗಳು ತಿಳಿಸಿವೆ.

ಇದನ್ನೂ ಓದಿ : Rohit Sharma : ಟೀಕೆಗಳ ನಡುವೆಯೂ ಪತ್ನಿ ಜತೆ ಜಾಲಿ ಟ್ರಿಪ್ ಮಾಡುತ್ತಿರುವ ರೋಹಿತ್​ ಶರ್ಮಾ!

ಇಂಗ್ಲೆಂಡ್​​ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​ ಫೈನಲ್​​ನಲ್ಲಿ ರೋಹಿತ್ ಶರ್ಮಾ ಸ್ವಲ್ಪ ಬೇಸರಗೊಂಡಂತೆ ಕಾಣುತ್ತಿದ್ದರು. ಹೀಗಾಗಿ ವೆಸ್ಟ್ ಇಂಡೀಸ್ ಪ್ರವಾಸದ ಕೆಲವು ಭಾಗಕ್ಕೆ ಅವರು ವಿಶ್ರಾಂತಿ ಪಡೆಯಬೇಕೆಂದು ಆಯ್ಕೆದಾರರು ಬಯಸಿದ್ದಾರೆ. ಅವರು ಟೆಸ್ಟ್ ಅಥವಾ ಎಂಟು ಪಂದ್ಯಗಳ ಸೀಮಿತ ಓವರ್​​ಗಳ ಸರಣಿಯಿಂದ (ಮೂರು ಏಕದಿನ ಮತ್ತು ಐದು ಟಿ 20 ಪಂದ್ಯಗಳು) ಹೊರಗುಳಿಯುವ ಸಾಧ್ಯತೆಯಿದೆ. ಆಯ್ಕೆದಾರರು ರೋಹಿತ್ ಅವರೊಂದಿಗೆ ಮಾತನಾಡಿದ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ವಿಶೇಷವೆಂದರೆ, ಆಸೀಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ 15 ಮತ್ತು 43 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು . ಐಪಿಎಲ್​​ನಲ್ಲಿಯೂ ರೋಹಿತ್ 16 ಪಂದ್ಯಗಳಲ್ಲಿ 20.75 ಸರಾಸರಿಯಲ್ಲಿ 332 ರನ್ ಗಳಿಸಿದ್ದರು.

Exit mobile version