Site icon Vistara News

PAK vs SA: ಅಂಪೈರ್ಸ್ ಕಾಲ್ ವಿಚಾರದಲ್ಲಿ ಕಿತ್ತಾಟ ನಡೆಸಿದ ಹರ್ಭಜನ್‌-ಸ್ಮಿತ್‌; ಪೋಸ್ಟ್‌ ವೈರಲ್‌

Umpire's Call

ಚೆನ್ನೈ: ಶುಕ್ರವಾರ ನಡೆದ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ(PAK vs SA) ನಡುವಣ ವಿಶ್ವಕಪ್​ ಪಂದ್ಯ ಹಲವು ವಿವಾದಕ್ಕೆ ಕಾರಣವಾಗಿದೆ. ಪಂದ್ಯದಲ್ಲಿ ಅಂಪೈರ್​ ತೆಗೆದುಕೊಂಡ ಕೆಲ ನಿರ್ಧಾರಗಳು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದೇ ವಿಚಾರದಲ್ಲಿ ಮಾಜಿ ಆಟಗಾರರು ಪರ ಮತ್ತು ವಿರೋಧ ವ್ಯಕ್ತಪಡಿಸಿ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಕಿತ್ತಾಡುತ್ತಿದ್ದಾರೆ.

ಏನಿದು ಘಟನೆ?

ದಕ್ಷಿಣ ಆಫ್ರಿಕಾ ತಂಡ ಚೇಸಿಂಗ್​ ವೇಳೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. 46ನೇ ಓವರ್‌ನಲ್ಲಿ ಹ್ಯಾರಿಸ್ ರವೂಫ್ ಅವರು ಎನ್​ಗಿಡಿ ವಿಕೆಟ್​ ಕಿತ್ತು. ಪಂದ್ಯವನ್ನು ಮತ್ತಷ್ಟು ಪೈಪೋಟಿಗೆ ತಂದರು. ಅಂತಿಮ ವಿಕೆಟ್​ಗೆ ಆಡಲಿಳಿದ ತಬ್ರೇಜ್ ಶಮ್ಸಿ ಅವರು ರವೂಫ್​ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಆದರು. ಆದರೆ ಫೀಲ್ಡ್​ ಅಂಪೈರ್​ ಇದನ್ನು ಔಟ್​ ನೀಡಲಿಲ್ಲ. ಪಾಕ್‌ ಆಟಗಾರರು ರಿವ್ಯೂ ಪಡೆದರು. ಮೂರನೇ ಅಂಪೈರ್‌ ಇದನ್ನು ಪರೀಕ್ಷಿಸುವಾಗ ಪಿಚಿಂಗ್‌ ಔಟ್‌ಸೈಡ್‌ ಇದ್ದರೂ ಚೆಂಡು ವಿಕೆಟ್‌ಗೆ ಬಡಿದಿರುವ ಕಂಡು ಬಂತು. ಆದರೆ ಅಂಪೈರ್ಸ್ ಕಾಲ್ ಆದ ಕಾರಣ ಇದನ್ನು ನಾಟ್‌ಔಟ್‌ ಎಂದು ಪರಿಗಣಿಸಲಾಯಿತು.

ಒಂದೊಮ್ಮೆ ಅಂಪೈರ್‌ ಮೊದಲೆ ಔಟ್‌ ನೀಡುತ್ತಿದ್ದರೆ, ದಕ್ಷಿಣ ಆಫ್ರಿಕಾ ತಂಡ ರಿವ್ಯೂ ಪಡೆದರೂ ಪ್ರಯೋಜನವಾಗುತ್ತಿರಲಿಲ್ಲ. ತಂಡ ಆಲೌಟ್‌ ಆಗಿ ಪಾಕಿಸ್ತಾನ ಜಯಭೇರಿ ಬಾರಿಸುತ್ತಿತ್ತು. ಆದರೆ ಅದೃಷ್ಟ ತನ್ನ ಕಡೆ ಇದ್ದ ಕಾರಣ ಪಂದ್ಯವನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆಯಿತು. ಇದಕ್ಕೂ ಮುನ್ನ ಅಂಪೈರ್‌ ವೈಡ್‌ ಇಲ್ಲದ ಚೆಂಡನ್ನು ವೈಡ್‌ ಎಂದು ಪರಿಗಣಿಸಿ ತೀಪು ನೀಡಿದ್ದರು. ಇದು ಕೂಡ ಪಾಕ್‌ಗೆ ಒಂದು ರನ್‌ನ ಹಿನ್ನಡೆಯಾಗಿತು. ಅಂಪೈರ್‌ ಅವರ ಈ ಕೆಟ್ಟ ನಿರ್ಧಾರದ ಬಗ್ಗೆ ಟೀಮ್‌ ಇಂಡಿಯಾದ ಮಾಜಿ ಆಟಗಾರ ಹರ್ಭಜನ್‌ ಸಿಂಗ್‌ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಟ್ವೀಟ್ವರ್‌ ಎಕ್ಸ್‌ ಖಾತೆಯಲ್ಲಿ ಕಿತ್ತಾಡಿಕೊಂಡಿದ್ದಾರೆ.

ಇದನ್ನೂ ಓದಿ PAK vs SA: ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನದ ದಾಖಲೆ ಹೇಗಿದೆ?

ಅಂಪೈರ್‌ ಕೆಟ್ಟ ನಿರ್ಧಾರಕ್ಕೆ ಪಾಕ್‌ಗೆ ಸೋಲು; ಹರ್ಭಜನ್‌

ಕಳಪೆ ಅಂಪೈರಿಂಗ್‌ನಿಂದಾಗಿ ಪಾಕಿಸ್ತಾನ ಗೆಲ್ಲುವ ಪಂದ್ಯವನ್ನು ಸೋಲುವಂತಾಯಿತು. ಇಂತಹ ನಿರ್ಧಾರಗಳ ಬಗ್ಗೆ ಐಸಿಸಿ ಗಂಭೀರವಾಗಿ ಗಮನಹರಿಸಬೇಕು. ರೀಪ್ಲೇಯಲ್ಲಿ ಚೆಂಡು ವಿಕೆಟ್‌ಗೆ ಬಡಿದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಹೀಗಾಗಿ ಮೂರನೇ ಅಂಪೈರ್, ಆನ್-ಫೀಲ್ಡ್ ಅಂಪೈರ್ ಅವರ ತೀರ್ಮಾನವನ್ನು ಪರಿಗಣಗೆ ತೆಗೆದುಕೊಳ್ಳಬಾರದು. ಇದರಿಂದ ಒಂದು ತಂಡ ಅನಾವಶ್ಯಕವಾಗಿ ಸೋಲು ಕಾಣುವಂತಾಗುತ್ತದೆ. ಇದಕ್ಕೆ ಈ ಪಂದ್ಯವೇ ಸಾಕ್ಷಿ ಎಂದು ಪಾಕ್‌ಗೆ ಬೆಂಬಲ ಸೂಚಿಸಿದ್ದಾರೆ.

ಹರ್ಭಜನ್‌ಗೆ ಪ್ರಶ್ನೆ ಮಾಡಿದ ಸ್ಮಿತ್‌

ಹರ್ಭಜನ್‌ ಸಿಂಗ್‌ ಅವರ ಈ ಹೇಳಿಕೆಗೆ ಕೆರಳಿದ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್‌ ಸ್ಮಿತ್‌, “ಪಂದ್ಯದಲ್ಲಿ ಇದೊಂದೆ ತಪ್ಪು ನಡೆದಿರುವುದಲ್ಲ, ಹಲವು ತಪ್ಪುಗಳು ನಡೆದಿವೆ. ಶಮ್ಸಿ ವಿಕೆಟ್ ಘಟನೆಗೂ ಮುನ್ನ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ರಾಸ್ಸಿ ವ್ಯಾನ್ ಡರ್ ಡಸ್ಸೆನ್ ಅವರು ಕೂಡ ಅಂಪೈರ್ ಕಾಲ್​ನಿಂದ ವಿಕೆಟ್ ಒಪ್ಪಿಸಬೇಕಾಯಿತು. ಡಸ್ಸೆನ್ ವಿಚಾರದಲ್ಲೂ ಇದೇ ರೀತಿ ಹೇಳುತ್ತೀರಾ? ಎಂದು ಹರ್ಭಜನ್‌ಗೆ ಪ್ರಶ್ನೆ ಮಾಡಿದ್ದಾರೆ. ಉಭಯ ಮಾಜಿ ಆಟಗಾರರ ಈ ಟ್ವೀಟ್‌ ಸಮರ ವೈರಲ್‌ ಆಗಿದೆ.

Exit mobile version