ನವದೆಹಲಿ: ದುಬೈನಲ್ಲಿ ನಡೆಯಲಿರುವ ಪ್ರತಿಷ್ಠಿತ ಏಷ್ಯಾ ಮಿಶ್ರ ತಂಡಗಳ ಬ್ಯಾಡ್ಮಿಂಟನ್(Badminton) ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವನ್ನು ಒಪಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಹಾಗೂ ಎಚ್.ಎಸ್.ಪ್ರಣಯ್ ಅವರು ಮುನ್ನಡೆಸಲಿದ್ದಾರೆ. ಫೆ. 14ರಿಂದ 19ರವರೆಗೆ ಈ ಟೂರ್ನಿ ನಡೆಯಲಿದೆ.
ಈಗಾಗಲೇ ಈ ಟೂರ್ನಿಗಾಗಿ ಟ್ರಯಲ್ಸ್ ಕೂಡ ಮುಕ್ತಾಯಗೊಂಡಿದೆ. ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್.ಪ್ರಣಯ್ ಜತೆ ಲಕ್ಷ್ಯ ಸೇನ್ ತಂಡದಲ್ಲಿರುವ ಮತ್ತೋರ್ವ ಪ್ರಮುಖ ಆಟಗಾರನಾಗಿದ್ದಾರೆ. ಇಬ್ಬರ ಮೇಲು ಪದಕ ಭರವಸೆ ಇರಿಸಲಾಗಿದೆ. ಮಹಿಳಾ ಸಿಂಗಲ್ಸ್‌ನಲ್ಲಿ ಸಿಂಧು ಅವರಿಗೆ ಆಕರ್ಷಿ ಕಶ್ಯಪ್ ಜತೆಯಾಗಲಿದ್ದಾರೆ.ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಕೃಷ್ಣ ಪ್ರಸಾದ್ ಜಿ.- ವಿಷ್ಣುವರ್ಧನ್ ಗೌಡ್ ಕಣಕ್ಕಿಳಿಯಲಿದ್ದಾರೆ.
ಮಹಿಳಾ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್- ತ್ರಿಶಾ ಜೋಲಿ, ಮಿಶ್ರ ಡಬಲ್ಸ್‌ನಲ್ಲಿ ಇಶಾನ್ ಭಟ್ನಾಗರ್- ತನಿಶಾ ಕ್ರಾಸ್ಟೊ ಜತೆಯಾಗಿ ಆಡಲಿದ್ದಾರೆ. ವರ್ಷಾರಂಭದಲ್ಲಿ ನಡೆಯುವ ಈ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಆಟಗಾರರು ಉತ್ತಮ ಪ್ರದರ್ಶನ ತೋರುವ ನಿರೀಕ್ಷೆ ಇದೆ.
ಇದನ್ನೂ ಓದಿ | Saina Nehwal | ಏಷ್ಯನ್ ಮಿಶ್ರ ತಂಡ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್; ಟ್ರಯಲ್ಸ್‌ನಿಂದ ಹಿಂದೆ ಸರಿದ ಸೈನಾ, ಮಾಳವಿಕಾ