ಚೆಂಗ್ಡು (ಚೀನಾ): ಥಾಮಸ್ ಕಪ್(Thomas Cup 2024) ಟೂರ್ನಿಯಲ್ಲಿ ಈಗಾಗಗಲೇ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಹಾಲಿ ಚಾಂಪಿಯನ್ ಭಾರತ(Indian men’s Badminton team) ತಂಡ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ 14 ಬಾರಿಯ ಚಾಂಪಿಯನ್ ಇಂಡೊನೇಷ್ಯಾ ವಿರುದ್ಧ 1-4 ಅಂತರದಿಂದ ಸೋಲನುಭವಿಸಿದೆ. ಭಾರತ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೀನಾದ ಸವಾಲು ಎದುರಿಸಲಿದೆ. ಇಂಡೊನೇಷ್ಯಾ ತಂಡ ಕೊರಿಯಾ ವಿರುದ್ಧ ಆಡಲಿದೆ.
ಬುಧವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಭಾರತ ಮೊದಲು ಗೆಲುವಿನಿ ಖಾತೆ ತೆರೆದರೂ ಕೂಡ ಆ ಬಳಿಕದ ಪಂದ್ಯಗಳಲ್ಲಿ ಇದೇ ಲಯವನ್ನು ಮುಂದುವರಿಸುವಲ್ಲಿ ವಿಫವಾಗಿ ಸೋಲನುಭವಿಸಿತು. ಇಂಡೊನೇಷ್ಯಾ ಲೀಗ್ನಲ್ಲಿ ಆಡಿದ ಎಲ್ಲ ಮೂರೂ ಪಂದ್ಯ ಗೆದ್ದು ಅಗ್ರಸ್ಥಾನ ಪಡೆಯಿತು. ಭಾರತ ಎರಡು ಗೆಲುವಿನೊಂದಿಗೆ ಎರಡನೇ ಸ್ಥಾನ ಪಡೆಯಿತು.
We finish as Runners-Up of Group C.
— BAI Media (@BAI_Media) May 1, 2024
📸: @badmintonphoto#ThomasUberCupFinals#ThomasCup#TeamIndia#IndiaontheRise#Badminton pic.twitter.com/XSRtb8UHgZ
ಸೇಡು ತೀರಿಸಿಕೊಂಡ ಇಂಡೊನೇಷ್ಯಾ
ಈ ಹಿಂದಿನ ಆವೃತ್ತಿಯ ಫೈನಲ್‌ನಲ್ಲಿ ಭಾರತ 3-0 ಅಂತರದಿಂದ ಇಂಡೊನೇಷ್ಯಾಗೆ ಹೀನಾಯವಾಗಿ ಸೋಲುಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದಿತ್ತು. ಆ ಸೋಲಿಗೆ ಈ ಬಾರಿಯ ಟೂರ್ನಿಯಲ್ಲಿ ಇಂಡೊನೇಷ್ಯಾ ಸೇಡು ತೀರಿಸಿಕೊಂಡಿತು. ಸಿಂಗಲ್ಸ್ನಲ್ಲಿ ಕಣಕ್ಕಿಳಿದ ಅನುಭವಿ ಎಚ್.ಎಸ್.ಪ್ರಣಯ್ 13-21, 21-12, 21-12 ಮೂರು ಗೇಮ್ಗಳ ತೀವ್ರ ಹೋರಾಟದಿಂದ ಅಂಥೋನಿ ಜಿಂಟಿಂಗ್ ಅವರನ್ನು ಸೋಲಿಸಿ ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿದ್ದರು. ಆದರೆ ಡಬಲ್ಸ್‌ನಲ್ಲಿ ಬರವಸೆಯ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ 24-22, 22-24, 19-21 ಗೇಮ್ಗಳ ಅಂತರದಲ್ಲಿ ಮುಹಮ್ಮದ್ ಶೊಹಿನುಲ್ ಫಿಕ್ರಿ- ಬಗಾಸ್ ಮೌಲಾನಾ ಎದುರು ಶರಣಾದರು.
THOMAS CUP 2024 DRAWS OUT 🚨🚨
— The Bridge (@the_bridge_in) May 1, 2024
Defending champions India to face mighty China in the quarterfinals! 🇮🇳🇨🇳#ThomasUberCup2024 pic.twitter.com/WSB1VUHYpq
1-1 ಸಮಬಲಗೊಂಡ ವೇಳೆ ಮೂರನೇ ಪಂದ್ಯದಲ್ಲಿ ಆಡಲಿಳಿದ 22 ವರ್ಷದ ಲಕ್ಷ್ಯ ಸೇನ್ 18-21, 21-16, 17-21ರಲ್ಲಿ ಆಲ್ ಇಂಗ್ಲೆಂಡ್ ಸಿಂಗಲ್ಸ್ ಚಾಂಪಿಯನ್ ಜೊನಾಥನ್ ಕ್ರಿಸ್ಟಿ ವಿರುದ್ಧ ಸೋಲು ಕಂಡರು. ಎದುರಾಳಿ ಇಂಡೊನೇಷ್ಯಾ 2-1 ಅಂತರದ ಮುನ್ನಡೆ ಸಾಧಿಸಿತು. ನಾಲ್ಕನೇ ಪಂದ್ಯದಲ್ಲಿ ಧ್ರುವ್ ಕಪಿಲ- ಸಾಯಿ ಪ್ರತೀಕ್ ಜೋಡಿ 20-22, 11-21ರಲ್ಲಿ ಲಿಯೊ ರೋಲಿ ಕರ್ನಾಲ್ಡೊ – ಡೇನಿಯಲ್ ಮಾರ್ಟಿನ್ ಅವರಿಗೆ ನೇರ ಗೇಮ್‌ಗಳಲ್ಲಿ ಮಣಿದರು. ಅಂತಿಮ ಸಿಂಗಲ್ಸ್ ಪಂದ್ಯದಲ್ಲಿ ಕಿದಂಬಿ ಶ್ರೀಕಾಂತ್ 21-19, 22-24, 14-21ರಲ್ಲಿ ಚಿಕೊ ಆರೊ ದ್ವಿ ವಾರ್ಡೊಯೊ ಎದುರು ಸೋಲು ಕಾಣುವ ಮೂಲಕ ಭಾರತದ ಸವಾಲು ಅಂತ್ಯಗೊಂಡಿತು.
ಇದನ್ನೂ ಓದಿ Thomas Cup 2024: ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟ ಹಾಲಿ ಚಾಂಪಿಯನ್ ಭಾರತ
ಸೋಮವಾರ ನಡೆದಿದ್ದ ‘ಸಿ’ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 5-0 ಅಂತರದಿಂದ ಭರ್ಜರಿ ಗೆಲುವು ಸಾಧಿಸಿತ್ತು. ಮೊದಲ ಪಂದ್ಯದಲ್ಲಿ ಭಾರತ 4-1 ಅಂತರದಿಂದ ಥಾಯ್ಲೆಂಡ್ ತಂಡವನ್ನು ಸೋಲಿಸಿತ್ತು.
ಉಬೆರ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯ “ಎ’ ವಿಭಾಗದ ಕೊನೆಯ ಸುತ್ತಿನ ಪಂದ್ಯದಲ್ಲಿ ಭಾರತದ ಮಹಿಳೆಯರು ಆತಿಥೇಯ ಚೀನಕ್ಕೆ 5-0 ಅಂತರದಿಂದ ಸೋಲು ಕಂಡಿದ್ದರು.