ಮುಂಬಯಿ: ಬಹುನಿರೀಕ್ಷಿತ ಮಹಿಳೆಯರ ಕ್ರಿಕೆಟ್(WPL 2023) ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಪಂದ್ಯಾವಳಿಯ ಹರಾಜು ಪ್ರಕ್ರಿಯೆ ಮತ್ತು ವೇಳಾಪಟ್ಟಿ ಈಗಾಗಲೇ ಬಿಡುಗಡೆಗೊಂಡಿದೆ. ಈ ಟೂರ್ನಿ ಮಾರ್ಚ್ 4ರಿಂದ 26ರ ತನಕ ನಡೆಯಲಿದೆ.
ತೀವ್ರ ಕುತೂಹಲ ಮೂಡಿಸಿದ ಚೊಚ್ಚಲ ವನಿತೆಯರ ಪ್ರೀಮಿಯರ್ ಲೀಗ್ ಆಟಗಾರ್ತಿಯರ ಹರಾಜು ಪ್ರಕ್ರಿಯೆಯಲ್ಲಿ ಭಾರತ ತಂಡದ ಪೂಜಾ ವಸ್ತ್ರಾಕರ್ ಅವರು 1.90 ಕೋಟಿ ರೂ. ಮೊತ್ತಕ್ಕೆ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದಾರೆ. ಪೂಜಾ ವಸ್ತ್ರಾಕರ್(Pooja Vastrakar) ಅವರಿಗೆ ಇಷ್ಟು ದೊಡ್ಡ ಮೊತ್ತ ಸಿಗುತ್ತಿದಂತೆ ಅವರ ತಂದೆ ಬಂಧನ್ ರಾಮ್ ಮಗಳ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ.
ಪೂಜಾ ವಸ್ತ್ರಾಕರ್ ಅವರು ಬಡ ಕುಟುಂಬದಿಂದ ಬಂದವರಾದರೂ ಅವರ ಕೈಗೆ ಹಣ ಸಿಗುತ್ತಿದ್ದಂತೆ ಅನಾವಶ್ಯಕವಾಗಿ ಖರ್ಚುಮಾಡುತ್ತಾರೆ. ಇದೇ ಕಾರಣಕ್ಕೆ ಅವರ ತಂದೆ ಈ ಹಣವನ್ನು ತಮ್ಮ ಮಗಳ ಭವಿಷ್ಯದ ಜೀವನೋಪಾಯಕ್ಕಾಗಿ ಬ್ಯಾಂಕ್ನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಲು ಎಲ್ಲ ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ WPL 2023: ಆರ್ಸಿಬಿ ತಂಡಕ್ಕೆ ಸಾನಿಯಾ ಮಿರ್ಜಾ ಮೆಂಟರ್
ಪೂಜಾ ವಸ್ತ್ರಾಕರ್ ಚೊಚ್ಚಲ ಆವೃತ್ತಿಯ ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಇಷ್ಟು ದೊಡ್ಡದ ಮೊತ್ತಕ್ಕೆ ಮುಂಬೈ ಇಂಡಿಯನ್ಸ್ ಸೇರಿದಕ್ಕೆ ಅವರ ತಂದೆ ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಅವಳ ಕೈಗೆ ಈ ಹಣ ಸಿಗದಂತೆ ನೋಡಿಕೊಳ್ಳಬೇಕಿದೆ. ಏಕೆಂದರೆ ಅವಳು ಸಿಕ್ಕಾಪಟ್ಟೆ ಹಣವನ್ನು ದುಂದುವೆಚ್ಚ ಮಾಡುತ್ತಾಳೆ. ಇದೇ ಕಾರಣಕ್ಕೆ ನಾನು ಅವಳ ಹೆಸರಿನಲ್ಲಿ ಈ ಹಣವನ್ನು ಫಿಕ್ಸೆಡ್ ಡೆಪಾಸಿಟ್ ಇಡಲು ಬಯಸಿದ್ದೇನೆ ಎಂದು ಅವರು ಹೇಳಿದ್ದಾರೆ. ಪೂಜಾ ಅವರ ತಂದೆ ಮಾಜಿ ಬಿಎಸ್ಎನ್ಎಲ್ ಉದ್ಯೋಗಿಯಾಗಿದ್ದಾರೆ.