Site icon Vistara News

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಲು ವಿಫಲವಾದ ರವಿ ದಹಿಯಾ, ಬಜರಂಗ್ ಪುನಿಯಾ

Bajrang Punia, Ravi Dahiya

ನವದೆಹಲಿ: ಟೋಕಿಯೊ ಒಲಿಂಪಿಕ್ಸ್​ ಪದಕ ವಿಜೇತ ಕುಸ್ತಿಪಟುಗಳಾದ ಬಜರಂಗ್‌ ಪೂನಿಯ(Bajrang Punia) ಮತ್ತು ರವಿ ದಹಿಯಾ(Ravi Dahiya) ಈ ವರ್ಷದ ಪ್ಯಾರಿಸ್‌ ಒಲಿಂಪಿಕ್ಸ್‌(Paris Olympics 2024) ಟಿಕೆಟ್‌ ಸಂಪಾದಿಸುವಲ್ಲಿ ವಿಫ‌ಲರಾಗಿದ್ದಾರೆ. ರಾಷ್ಟ್ರೀಯ ತಂಡಕ್ಕಾಗಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ(Wrestling national trials) ಸೋಲು ಕಂಡ ಕಾರಣ ಇಬ್ಬರಿಗೂ ಭಾರೀ ಹಿನ್ನಡೆಯಾಗಿದೆ.

ಭಾನುವಾರ ನಡೆದ 65 ಕೆಜಿ ವಿಭಾಗದ ಫ್ರೀಸ್ಟೈಲ್‌ ಸೆಮಿಫೈನಲ್‌ ಕಾದಾಟದಲ್ಲಿ ಬಜರಂಗ್‌ ಪೂನಿಯ ಅವರು ರೋಹಿತ್‌ ಕುಮಾರ್‌ ಎದುರು 9-1 ಅಂತರದಿಂದ ಪರಾಭವಗೊಂಡರು. 57 ಕೆಜಿ ವಿಭಾಗದಲ್ಲಿ ಅಮಾನ್‌ ಸೆಹ್ರಾವತ್‌ 14-13ರಿಂದ ರವಿ ದಹಿಯಾ ಅವರನ್ನು ಮಣಿಸಿದರು. ಭಾರತವು ಇದೀಗ ಪ್ಯಾರಿಸ್ ಗೇಮ್ಸ್‌ಗೆ ಕೇವಲ ಒಂದು ಕೋಟಾ ಸ್ಥಾನವನ್ನು ಮಾತ್ರ ಗಳಿಸಿದೆ. ಮಹಿಳೆಯರ 53 ಕೆಜಿ ವಿಭಾಗದಲ್ಲಿ ಅಂತಿಮ್ ಪಾಂಘಾಲ್ ಮಾತ್ರ ಅರ್ಹತೆ ಪಡೆದಿದ್ದಾರೆ.

ಜುಲೈ 26ಕ್ಕೆ ಒಲಿಂಪಿಕ್ಸ್​ ಆರಂಭ

ಮಹತ್ವದ ಕ್ರೀಡಾಕೂಡವಾದ ಪ್ಯಾರಿಸ್ ಒಲಿಂಪಿಕ್ಸ್‌ನ(Paris Olympics 2024) ಉದ್ಘಾಟನಾ ಸಮಾರಂಭಕ್ಕೆ(paris olympics 2024 opening ceremony) ದಿನಾಂಕ ನಿಗದಿಯಾಗಿದೆ. ಜುಲೈ 26ರಂದು ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮ ನೆರವೇರಲಿದೆ.

ಒಲಿಂಪಿಕ್ಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

ಹಾಕಿ ವೇಳಾಪಟ್ಟಿ ಪಕ್ರಟ


ಒಲಿಂಪಿಕ್ಸ್‌ ಟೂರ್ನಿಯ(Paris Olympics 2024) ಹಾಕಿ ಪಂದ್ಯಾವಳಿಯ ವೇಳಾಪಟ್ಟಿ(Paris 2024 Olympics Hockey schedule) ಕಳೆದ ವಾರ ಪ್ರಕಟಗೊಂಡಿತ್ತು. ಭಾರತೀಯ ಪುರುಷರ ತಂಡ(Indian Men’s Hockey Team) ತನ್ನ ಮೊದಲ ಪಂದ್ಯವನ್ನು ಜುಲೈ 27ರಂದು ನ್ಯೂಜಿಲ್ಯಾಂಡ್​ ವಿರುದ್ಧ ಆಡಲಿದೆ.

ಇದನ್ನೂ ಓದಿ Rahul Gandhi: ಬಜರಂಗ್‌ ಪೂನಿಯಾ ಜತೆ ರಾಹುಲ್‌ ಗಾಂಧಿ ಕುಸ್ತಿ; ಗೆದ್ದಿದ್ದು ಯಾರು?

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ಈ ಸಲ ‘ಬಿ’ ಗುಂಪಿನಲ್ಲಿದೆ ಕಾಣಿಸಿಕೊಂಡಿದೆ. ಒಲಿಂಪಿಕ್ಸ್‌ ಇತಿಹಾಸವನ್ನೊಮ್ಮೆ ಕೆದಕಿದರೆ ಪುರುಷರ ಹಾಕಿಯಲ್ಲಿ 8 ಬಾರಿ ಸ್ವರ್ಣ ಗೆದ್ದ ಏಕೈಕ ತಂಡವೆಂಬ ಹೆಗ್ಗಳಿಕೆ ಭಾರತ ಉಳಿಸಿಕೊಂಡಿದೆ. ಭಾರತ ತಂಡ ಜುಲೈ 29ರಂದು ಅರ್ಜೆಂಟೀನಾ, 30ರಂದು ಐರ್ಲೆಂಡ್‌, ಆಗಸ್ಟ್ 1ರಂದು ಬೆಲ್ಜಿಯಂ, ಆಗಸ್ಟ್​ 2ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. 

ಕಳೆದ ಬಾರಿ ಕಂಚು ಗೆದ್ದ ಭಾರತ ಈ ಬಾರಿ ಚಿನ್ನದ ಪದಕ್ಕೆ ಕೊರಳೊಡ್ಡಲಿ ಎನ್ನುವುದು ಭಾರತೀಯರ ಆಶಯ. ‘ಎ’ ಗುಂಪಿನಲ್ಲಿ ನೆದರ್ಲೆಂಡ್ಸ್‌, ಸ್ಪೇನ್‌, ಜರ್ಮನಿ, ಫ್ರಾನ್ಸ್, ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ. ಕ್ವಾರ್ಟರ್‌ಫೈನಲ್ ಪಂದ್ಯಗಳು ಆಗಸ್ಟ್​ 4ರಂದು ಮತ್ತು ಸೆಮಿಫೈನಲ್ ಪಂದ್ಯಗಳು ಆಗಸ್ಟ್​ 6 ರಂದು ನಡೆಯಲಿವೆ. ಕಂಚಿನ ಪದಕದ ಮತ್ತು ಫೈನಲ್ ಪಂದ್ಯ ಆಗಸ್ಟ್​ 8ರಂದು ನಡೆಯಲಿವೆ.

Exit mobile version