Site icon Vistara News

ಬಜರಂಗ್,ವಿನೇಶ್​ ಏಷ್ಯನ್​ ಗೇಮ್ಸ್​ಗೆ ನೇರ ಪ್ರವೇಶ; ಕೋಚ್​ಗಳಿಂದ ಕೋರ್ಟ್ ಮೆಟ್ಟಿಲೇರುವ ಎಚ್ಚರಿಕೆ

Vinesh and Bajrang

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ(WFI) ನಿರ್ಗಮಿತ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್​ಭೂಷಣ್​ ಶರಣ್​ ಸಿಂಗ್​(Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಪ್ರತಿಭಟನೆ ನಡೆಸಿದ್ದ, ಬಜರಂಗ್ ಪೂನಿಯಾ(Bajrang Punia) ಮತ್ತು ವಿನೇಶ್ ಫೋಗಟ್(Vinesh Phogat) ಅವರಿಗೆ ಮುಂಬರುವ ಏಷ್ಯನ್​ ಗೇಮ್ಸ್(Asian Games 2023)​ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ನೇರ ಪ್ರವೇಶ ನೀಡಲಾಗಿದೆ. ಇದೀಗ ಭಾರತೀಯ ಒಲಿಂಪಿಕ್ ಸಂಸ್ಥೆಯ(IOA) ತಾತ್ಕಾಲಿಕ ಸಮಿತಿಯ ಈ ನಿರ್ಧಾರ ಹಲವು ಕುಸ್ತಿಪಟುಗಳು ಮತ್ತು ಕೋಚ್‌ಗಳನ್ನು ಕೆರಳಿಸುವಂತೆ ಮಾಡಿದೆ.

ಮಂಗಳವಾರ ಭಾರತೀಯ ಒಲಿಂಪಿಕ್ ಸಂಸ್ಥೆಯ (ಐಒಎ) ತಾತ್ಕಾಲಿಕ ಸಮಿತಿಯು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಮತ್ತು ಎರಡು ಬಾರಿ ವಿಶ್ವ ಚಾಂಪಿಯನ್​ ವಿಜೇತೆ ವಿನೇಶ್ ಫೋಗಟ್ ಅವರಿಗೆ ಟ್ರಯಲ್ಸ್​ಗೆ ಒಳಗಾಗದೆ ಏಷ್ಯನ್​ ಗೇಮ್ಸ್​ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ನೇರ ಪ್ರವೇಶ ನೀಡಿತ್ತು. ಆದರೆ ಪ್ರತಿಭಟನೆಯಲ್ಲಿ ತೊಡಗಿದ್ದ ಉಳಿದ ನಾಲ್ವರು ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಸತ್ಯವರ್ತ್ ಕಡಿಯಾನ್, ಸಂಗೀತಾ ಫೋಗಟ್ ಮತ್ತು ಜಿತೇಂದ್ರ ಕಿನ್ಹಾ ಅವರಿಗೆ ನೇರ ಪ್ರವೇಶವನ್ನು ನೀಡಿರಲಿಲ್ಲ. ಇದು ಈಗ ಬಾರಿ ಚರ್ಚೆಗೆ ಕಾರಣವಾಗಿದ್ದು ಕುಸ್ತಿಪಟುಗಳ ಮಧ್ಯೆಯೇ ಗುದ್ದಾಟ ಆರಂಭವಾಗಿದೆ.

ತಾತ್ಕಾಲಿಕ ಸಮಿತಿಯ ಈ ನಿರ್ಧಾರಕ್ಕೆ ವಿರೋಧ ವ್ಯಕ್ರವಾಗಿದ್ದು ಹಲವು ಕುಸ್ತಿಪಟುಗಳು, ಕೋಚ್‌ಗಳು ಈ ನಿರ್ಧಾರವನ್ನು ಪ್ರಶ್ನಿಸಿ ಕೋರ್ಟ್​ ಮೆಟ್ಟಿಲೇರುವುದಾಗಿ ಎಚ್ಚರಿಸಿದ್ದಾರೆ. 65 ಕೆ.ಜಿ. ಹಾಗೂ 53 ಕೆ.ಜಿ. ವಿಭಾಗಗಳಲ್ಲಿ ಆಯ್ಕೆ ನಿರೀಕ್ಷೆಯಲ್ಲಿದ್ದ ಕುಸ್ತಿಪಟುಗಳ ಪೋಷಕರು ಮತ್ತು ಕೋಚ್‌ಗಳು ತಾತ್ಕಾಲಿಕ ಸಮಿತಿಯ ಈ ನಿರ್ಧಾರದಿಂದ ಅಮಾಯಕ ಕುಸ್ತಿಪಟುಗಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದಿದ್ದಾರೆ. ಸುಮಾರು ಒಂದು ವರ್ಷಗಳಿಂದ ಪಟ್ಟ ಪರಿಶ್ರಮಕ್ಕೆ ನ್ಯಾಯ ಸಿಗಲೇ ಬೇಕು ಇಲ್ಲವಾದಲ್ಲಿ ಕೋರ್ಟ್​ ಮೊರೆ ಹೊಗಲಿದ್ದೇವೆ ಎಂದು ಕೋಚ್​ ಒಬ್ಬರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ CWG- 2022 | ಬಜರಂಗ್‌ ಪೂನಿಯಾಗೆ ಬಂಗಾರ, ಚಾಂಪಿಯನ್‌ ಪಟ್ಟ ಉಳಿಸಿಕೊಂಡ ಕುಸ್ತಿಪಟು

ಪ್ರತಿಭಟನೆಯಲ್ಲಿ ತೊಡಗಿದ್ದ ಉಳಿದ ನಾಲ್ವರು ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಸತ್ಯವರ್ತ್ ಕಡಿಯಾನ್, ಸಂಗೀತಾ ಫೋಗಟ್ ಮತ್ತು ಜಿತೇಂದ್ರ ಕಿನ್ಹಾ ಕೂಡ ತಾತ್ಕಾಲಿಕ ಸಮಿತಿಯ ಈ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಗುರುವಾರ ಬ್ರಿಜ್‌ಭೂಷಣ್‌ ಬೇಲ್‌ ಅರ್ಜಿ ವಿಚಾರಣೆ

ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್‌ಭೂಷಣ್‌ ಸಿಂಗ್‌ಗೆ ದೆಹಲಿ ನ್ಯಾಯಾಲಯ ಮಂಗಳವಾರ ಮಧ್ಯಂತರ ಜಾಮೀನು ನೀಡಿದೆ. 2 ದಿನಗಳ ಮಟ್ಟಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಲಯವು, ರೆಗ್ಯುಲರ್‌ ಬೇಲ್‌ ಅರ್ಜಿಯ ವಿಚಾರಣೆಯನ್ನು ಗುರುವಾರ (ಜು.20)ಗೆ ನಿಗದಿಪಡಿಸಿದೆ. ಜೂನ್​ 15ರಂದು ದೆಹಲಿ ಪೊಲೀಸರು, ಐಪಿಸಿ ಸೆಕ್ಷನ್‌ 354(ಮಹಿಳೆಯರ ಮೇಲೆ ಹಲ್ಲೆ), 354ಎ(ಲೈಂಗಿಕ ಕಿರುಕುಳ), 354ಡಿ(ಹಿಂಬಾಲಿಸುವಿಕೆ), 506(ಬೆದರಿಕೆ) ಅಡಿಯಲ್ಲಿ ಬ್ರಿಜ್‌ಭೂಷಣ್‌ ವಿರುದ್ಧ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Exit mobile version