ಬೆಂಗಳೂರು: ಆಲ್ ಇಂಡಿಯಾ ಓಪನ್ ಮಾಸ್ಟರ್ಸ್ ಬ್ಯಾಡ್ಮಿಂಟನ್(ALL INDIA OPEN MASTERS BADMINTON) ಟೂರ್ನಿಗೆ ಬೆಂಗಳೂರು ಆತಿಥ್ಯ ವಹಿಸಿಕೊಂಡಿದೆ. ಈ ಟೂರ್ನಿ ಮೇ 27ರಿಂದ 28ರ ವರೆಗೆ ಬೆಂಗಳೂರಿನ ಪಡುಕೋಣೆ ದ್ರಾವಿಡ್(PADUKONE DRAVID) ಸೆಂಟರ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಈ ಟೂರ್ನಿಯನ್ನು ವಯಸ್ಸಿಗೆ ಅನುಗುಣವಾಗಿ ವಿಂಗಡಿಸಲಾಗಿದೆ. 17 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರು ಮತ್ತು ಹುಡುಗಿಯರು ಹಾಗೂ 70 ಪ್ಲಸ್ ವರ್ಷ ವಯಸ್ಸಿನ ಪುರುಷ ಮತ್ತು ಮಹಿಳೆಯರಿಗೆ ಸಿಂಗಲ್ಸ್, ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಪಂದ್ಯಾಟಗಳು ನಡೆಯಲಿದೆ.
ಇದನ್ನೂ ಓದಿ All England Badminton: ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್; ಸಿಂಧು, ಸೈನಾ ಕಣದಲ್ಲಿ
ದೇಶಾದ್ಯಂತ ಇರುವ ಬ್ಯಾಡ್ಮಿಂಟನ್ ಆಟಗಾರರು ಈ ಟೂರ್ನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಸಾಧ್ಯತೆ ಇದ್ದು, ಎಲ್ಲ ವಿಭಾಗದ ವಿಜೇತರು ಮತ್ತು ರನ್ನರ್ ಅಪ್ಗೆ ಟ್ರೋಫಿಗಳ ಜತೆಗೆ ಉತ್ತಮ ನಗದು ಬಹುಮಾನವನ್ನೂ ನೀಡಲಾಗುವುದು ಎಂದು ಟೂರ್ನಿಯ ಸಂಘಟಕರು ತಿಳಿಸಿಸಿದ್ದಾರೆ. ಮೇ 10 ಹೆಸರು ನೊಂದಾಯಿಸಲು ಕೊನೆಯ ದಿನಾಂಕವಾಗಿರಲಿದೆ.