Site icon Vistara News

‘ಬೆಂಗಳೂರು ನನಗೆ ಎರಡನೇ ತವರು’; ಕರುನಾಡ ಜನರ ಬಗ್ಗೆ ಕೊಹ್ಲಿ ಮನದಾಳದ ಮಾತು

Virat Kohli

ಬೆಂಗಳೂರು: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(virat kohli) ಅವರು ಬೆಂಗಳೂರು (Bangalore) ಮತ್ತು ಇಲ್ಲಿನ ಜನರ ಪ್ರೀತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಭಾರತ ತಂಡ ತನ್ನ ವಿಶ್ವಕಪ್​ನ ಕೊನೆಯ ಪಂದ್ಯವನ್ನು ಭಾನುವಾರ ನೆದರ್ಲೆಂಡ್ಸ್​ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(m chinnaswamy stadium) ಆಡಲಿದೆ. ಈ ಪಂದ್ಯಕ್ಕೂ ಮುನ್ನ ನಡೆದ ಸ್ಟಾರ್​ ಸ್ಪೋರ್ಟ್ಸ್​ ಸಂದರ್ಶನದಲ್ಲಿ ಕೊಹ್ಲಿ ಅವರು ಬೆಂಗಳೂರಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕೊಹ್ಲಿ ಮತ್ತು ಬೆಂಗಳೂರಿಗೂ ಇರುವ ಸ್ಪೆಷಲ್ ಕನೆಕ್ಷನ್ ಏನೆಂದರೆ ಅದು ಐಪಿಎಲ್​ ಟೂರ್ನಿ. ಕೊಹ್ಲಿ ಅವರು ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು(Royal Challengers Bangalore) ತಂಡದ ಆಟಗಾರನಾಗಿದ್ದಾರೆ. ಹೀಗಾಗಿ ಅವರಿಗೆ ಕರ್ನಾಟಕದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಹೀಗಾಗಿ ಕೊಹ್ಲಿಗೆ ಬೆಂಗಳೂರು ಮತ್ತು ಇಲ್ಲಿನ ಜನರೆಂದರೆ ಅಚ್ಚುಮೆಚ್ಚು.

2ನೇ ತವರು ಮನೆ

ಅಂಡರ್​​​-19 ವಿಶ್ವಕಪ್​​​​​​​​​​ನಿಂದಲೇ ಬೆಂಗಳೂರಿಗೂ ನನಗೂ ವಿಶೇಷ ಬಾಂಧವ್ಯ ಆರಂಭವಾಯಿತು. 2008 ರ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ಮೊದಲು ನನ್ನನ್ನ ಬಿಡ್ ಮಾಡಿತ್ತು. ಬಳಿಕ ನನ್ನನ್ನು ಕೈ ಬಿಟ್ಟು ಪ್ರದೀಪ್​ ಸಾಂಗ್ವಾರನ್ನು ಖರೀದಿಸಿತು. ಆರ್​ಸಿಬಿ ಎರಡನೇ ತಂಡವಾಗಿ ನನ್ನನ್ನು ಬಿಡ್​ ಮಾಡಿತು. ಕೊನೆಗೆ ಆರ್​ಸಿಬಿ ಪಾಲಾದೆ. ಅಲ್ಲಿಂದ ಇಲ್ಲಿ ತನಕ ನಾನು ಆರ್​ಸಿಬಿ ತಂಡದ ಪರವೇ ಆಡುತ್ತಿದ್ದೇನೆ. ಇಂತಹ ಫ್ರಾಂಚೈಸಿಯನ್ನ ನಾನು ಇದುವರೆಗೆ ನೋಡಿಲ್ಲ. ಹಲವು ವರ್ಷಗಳಿಂದ ಫ್ಯಾನ್ಸ್ ಸಾಕಷ್ಟು ಪ್ರೀತಿ, ಸಹಕಾರ ನೀಡುತ್ತಿದ್ದಾರೆ. ಇಂತಹ ಪ್ರೀತಿ ಪಡೆದಿರುವ ನಾನು ನಿಜಕ್ಕೂ ಧನ್ಯ. ಬೆಂಗಳೂರಿನ ಸಿಟಿ ಎಂದರೆ ನನಗೆ ತುಂಬಾ ಇಷ್ಟ ಇಲ್ಲಿನ ಜನರೂ ಕೂಡ ಅಷ್ಟೇ ಪ್ರೀತಿ ಪಾತ್ರರು ಎಂದು ಹೇಳಿದರು.

ಇದನ್ನೂ ಓದಿ ಒತ್ತಡಕ್ಕೆ ಮಣಿದು ರೋಹಿತ್‌ ನಾಯಕತ್ವ ವಹಿಸಿಕೊಂಡರು; ಗಂಗೂಲಿ ಅಚ್ಚರಿಯ ಹೇಳಿಕೆ

ನಾನು ಹೆದಲಿಯಲ್ಲಿ ಜನಿಸಿದರೂ ಬೆಂಗಳೂರಿನಲ್ಲಿ ವಿಶೇಷ ಬಾಂಧವ್ಯ ಹೊಂದಿದ್ದೇನೆ. ನನಗೆ ಇಲ್ಲಿ ತವರಿನ ಅನುಭವ ನೀಡುತ್ತದೆ. ಹೀಗಾಗಿ ಬೆಂಗಳೂರು ನನ್ನ ಎರಡನೇ ತವರು ಕೂಡ ಆಗಿದೆ. ಬೆಂಗಳೂರಿಗರ ಪ್ರೀತಿ, ಬೆಂಬಲ ನಿಜಕ್ಕೂ ಅದ್ಭುತ. ಪ್ರತಿ ಐಪಿಎಲ್​ ಸೀಸನ್ ವೇಳೆ ಅದನ್ನು ನಾನು ನೋಡುತ್ತಿದ್ದೇನೆ. ನನಗೆ ಎಲ್ಲವನ್ನು ನೀಡಿದ ಆರ್​ಸಿಬಿ ಮತ್ತು ಕನ್ನಡಿಗರನ್ನು ಎಷ್ಟೇ ಹೊಗಳಿದರು ಸಾಲದು. ಕಡೆಯ ವರೆಗೂ ಆರ್​ಸಿಬಿ ಪರ ಆಡುವೆ ಎಂದು ಕೊಹ್ಲಿ ಮನದಾಳದ ಮಾತುಗಳನ್ನಾಡಿದರು. ಈ ವಿಡಿಯೊವನ್ನು ಆರ್​ಸಿಬಿ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

ಜಾಗತಿಕ ಶ್ರೇಷ್ಠ ಕ್ರೀಡಾಪಟುಗಳ ಪಟ್ಟಿಯಲ್ಲೂ ಕೊಹ್ಲಿ ಹವಾ

ವಿರಾಟ್ ಕೊಹ್ಲಿಯ ಜನಪ್ರಿಯತೆಗೆ ಭಾರತದಲ್ಲಿ ಯಾರೂ ಸರಿಸಮಾನರಲ್ಲ. ಅವರಿಗೆ ಅಷ್ಟೊಂದು ಅಭಿಮಾನಿಗಳಿದ್ದಾರೆ. ಅವರು ಇತ್ತೀಚೆಗೆ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು (49) ಶತಕಗಳನ್ನು ಗಳಿಸಿದ ಸಚಿನ್​ ತಂಡೂಲ್ಕರ್ ಅವರ ಸಾಧನೆಯನ್ನು ಮೀರಿಸಿದ್ದಾರೆ. ಇದೀಗ ಅವರ ಸಾಧನೆಗಳ ಕಿರೀಟಕ್ಕೆ ಹೊಸ ಗರಿಯೊಂದು ಸೇರ್ಪಡೆಯಾಗಿದೆ. ಸ್ಟಾರ್ ಬ್ಯಾಟರ್​ ಕ್ರೀಡಾ ಇತಿಹಾಸದಲ್ಲಿ ಸಾರ್ವಕಾಲಿಕ ಅಗ್ರ 10 ಶ್ರೇಷ್ಠ ಕ್ರೀಡಾಪಟುಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮುಹಮ್ಮದ್ ಅಲಿ, ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೋನೆಲ್ ಮೆಸ್ಸಿ, ಮೈಕ್ ಟೈಸನ್, ಉಸೇನ್ ಬೋಲ್ಟ್ ಮತ್ತು ಸೆರೆನಾ ವಿಲಿಯಮ್ಸ್ ಅವರಂತಹ ಕ್ರೀಡಾಪಟುಗಳು ಈ ಪಟ್ಟಿಯಲ್ಲಿದ್ದಾರೆ. ಕೊಹ್ಲಿ ಈ ಪಟ್ಟಿಯಲ್ಲಿರುವ ಅಥ್ಲೀಟ್​ಗಳ ಪೈಕಿ ಏಕೈಕ ಕ್ರಿಕೆಟರ್​.

ಲಿಸ್ಟ್​​ನಲ್ಲಿ ಕ್ರಿಕೆಟ್ ಶ್ರೇಷ್ಠ 5 ನೇ ಸ್ಥಾನದಲ್ಲಿದ್ದಾರೆ. ಆಘಾತಕಾರಿ ವಿಷಯವೆಂದರೆ ವಿರಾಟ್ ಕೊಹ್ಲಿ ಆಯಾ ಕ್ರೀಡೆಗಳ ಗೋಟ್​ (greatest of all time) ಪಟ್ಟಿಯಲ್ಲಿ ಮುಂಚೂಣಿ ಸ್ಥಾನದಲ್ಲಿದ್ದಾರೆ. ಉಸೇನ್ ಬೋಲ್ಟ್ (ಸಾರ್ವಕಾಲಿಕ ಶ್ರೇಷ್ಠ ವೇಗದ ಓಟಗಾರ ) , ಮೈಕ್​ ಟೈಸನ್​​ ((ಸಾರ್ವಕಾಲಿಕ ಅತ್ಯುತ್ತಮ ಹೆವಿವೇಯ್ಟ್ ಬಾಕ್ಸರ್)) ಲೆಬ್ರಾನ್ ಜೇಮ್ಸ್ (ಅತ್ಯಂತ ನಿಪುಣ ಬ್ಯಾಸ್ಕೆಟ್ಬಾಲ್ ಆಟಗಾರ), ಸೆರೆನಾ ವಿಲಿಯಮ್ಸ್ (ಓಪನ್ ಯುಗದ ಅತ್ಯಂತ ಯಶಸ್ವಿ ಟೆನಿಸ್ ಆಟಗಾರ್ತಿ) ಮತ್ತು ಮೈಕೆಲ್ ಫೆಲ್ಪ್ಸ್ (ಸಾರ್ವಕಾಲಿಕ ಅತ್ಯಂತ ಯಶಸ್ವಿ ಒಲಿಂಪಿಕ್ ಈಜುಪಟು) ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ ಎಂಬುದೇ ಅಚ್ಚರಿ.

Exit mobile version