Site icon Vistara News

ಎಫ್‌ಐಎಮ್‌ ಮಿನಿ ಜಿಪಿ ವರ್ಲ್ಡ್‌ ಸೀರಿಸ್‌ ಫೈನಲ್‌ಗೇರಿದ ಬೆಂಗಳೂರಿನ ಶ್ರೇಯಸ್‌ ಹರೀಶ್‌

bike race

ಬೆಂಗಳೂರು : ಬೆಂಗಳೂರಿನ ರೇಸ್‌ ಪ್ರತಿಭೆ ಶ್ರೇಯಸ್‌ ಹರೀಶ್‌, ಎಫ್‌ಐಎಮ್‌ ಮಿನಿಜಿಪಿ ವರ್ಲ್ಡ್‌ ಸೀರಿಸ್‌ನ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ೧೫ ದೇಶಗಳಲ್ಲಿ ನಡೆದಿರುವ ಈ ರೇಸ್‌ಗಳ ವಿಜೇತರ ಜತೆ ಅವರು ವಿಶ್ವ ಚಾಂಪಿಯನ್‌ ಪಟ್ಟಕ್ಕಾಗಿ ಸ್ಪರ್ಧೆ ನಡೆಸಲಿದ್ದಾರೆ. ಒಟ್ಟಾರೆ ಐದು ರೇಸ್‌ಗಳಲ್ಲಿ ನಾಲ್ಕರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಅವರು ಒಟ್ಟಾರೆ ೨೨೦ ಅಂಕಗಳನ್ನು ಸಂಪಾದಿಸಿ ಜಾಗತಿಕ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದ್ದಾರೆ.

ನಾಲ್ಕನೇ ಸುತ್ತಿನ ಸ್ಪರ್ಧೆಯಲ್ಲಿ ಶ್ರೇಯಸ್‌ ೧೬ ನಿಮಿಷ ೦೮ ಸೆಕೆಂಡ್‌ ಹಾಗೂ ೦೯೦ ಮಿಲಿ ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವ ಮೂಲಕ ಅವರು ಜಾಗತಿಕ ಸ್ಪರ್ಧೆಗೆ ಟಿಕೆಟ್‌ ಪಡೆದುಕೊಂಡರು. ಈ ಜಯದ ಕುರಿತು ಮಾತನಾಡಿದ ಅವರು “ಈ ಗೆಲುವಿನಿಂದ ನನಗೆ ತುಂಬಾ ಖುಷಿಯಾಗಿದೆ. ಆದರೆ, ವಿಶ್ವ ಚಾಂಪಿಯನ್‌ಷಿಪ್‌ ಸ್ಪರ್ಧೆ ಸರಳವಲ್ಲ. ಜಯದೊಂದಿಗೆ ನನ್ನ ಪರಿಶ್ರಮ ಇನ್ನಷ್ಟು ಹೆಚ್ಚಾಗಲಿದೆ, ” ಎಂದು ಹೇಳಿದ್ದಾರೆ.

ಬೆಳೆಯುವ ಸಿರಿ

೨೦೧೦ ಜುಲೈ ೨೬ರಂದು ಜನಿಸಿದ್ದ ಶ್ರೇಯಸ್‌ ಹರೀಶ್‌, ರೇಸ್‌ ಟ್ರ್ಯಾಕ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಕೌಶಲ ಹೊಂದಿದ್ದಾರೆ. ಐದು ವರ್ಷವಿರುವಾಗಲೇ ಸೈಕಲ್‌ ಮೂಲಕ ಬ್ಯಾಲೆನ್ಸ್ ಕಲಿಯುತ್ತಿದ್ದ ಶ್ರೇಯಸ್‌, ೮ನೇ ವರ್ಷದಲ್ಲಿ ಕವಾಸಕಿ ಕೆಎಲ್‌ಎಕ್ಸ್‌೧೦ ಮೋಟಾರ್‌ ಸೈಕಲ್‌ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು. ೯ ನೇ ವರ್ಷದಲ್ಲಿ ಸ್ಥಳೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆರಂಭಿಸಿದ ಶ್ರೇಯಸ್‌, ಹಾಸನದ ಆದಿಚುಂಚನಗಿರಿ ಮಠದಲ್ಲಿ ನಡೆದ ತನ್ನ ಮೊದಲ ರೇಸ್‌ನಲ್ಲಿಯೇ ಚಾಂಪಿಯನ್‌ ಪಟ್ಟ ಗಿಟ್ಟಿಸಿಕೊಂಡಿದ್ದರು.

ಮೊಟೊ ಜಿಪಿ ಮಾಜಿ ಚಾಂಪಿಯನ್‌ ಮಾರ್ಕ್‌ ಮಾರ್ಕ್ವೆಜ್‌ ಅವರ ಅಪ್ಪಟ ಅಭಿಮಾನಿಯಾಗಿರುವ ಶ್ರೇಯಸ್‌ ಅವರು, ಎಫ್‌ಎಸ್‌ಸಿಐ ಪರವಾನಗಿ ಪಡೆದ ಬಳಿಕ ರೇಸ್‌ ಟ್ರ್ಯಾಕ್‌ನಲ್ಲಿ ಹಲವು ಸಾಧನೆ ಮಾಡಿದ್ದಾರೆ.

Exit mobile version