Site icon Vistara News

INDvsBAN | ಭಾರತ ವಿರುದ್ಧದ ಒಡಿಐ ಸರಣಿಗೆ ಹೊಸ ನಾಯಕನನ್ನು ಘೋಷಿಸಿದ ಬಾಂಗ್ಲಾದೇಶ ತಂಡ

ಢಾಕಾ : ಕಾಯಂ ನಾಯಕ ತಮಿಮ್‌ ಇಕ್ಬಾಲ್‌ ಗಾಯಗೊಂಡಿರುವ ಕಾರಣ ಸ್ಫೋಟಕ ಬ್ಯಾಟರ್‌ ಲಿಟನ್ ದಾಸ್‌ಗೆ ಭಾರತ ವಿರುದ್ಧದ ಏಕ ದಿನ ಸರಣಿಗೆ ಬಾಂಗ್ಲಾದೇಶ ತಂಡದ ನಾಯಕತ್ವ ವಹಿಸಲಾಗಿದೆ. ಶುಕ್ರವಾರ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ಈ ಮಾಹಿತಿ ಪ್ರಕಟಿಸಿದೆ.

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೂರು ಪಂದ್ಯಗಳ ಏಕ ದಿನ ಸರಣಿಯ ಭಾನುವಾರ (ಡಿಸೆಂಬರ್‌೪ರಂದು) ಆರಂಭವಾಗಲಿದೆ. ಶುಕ್ರವಾರ ಬೆಳಗ್ಗೆ ನಾಯಕ ತಮಿಮ್ ಇಕ್ಬಾಲ್‌ ಗಾಯಗೊಂಡಿರುವ ಮಾಹಿತಿ ಪ್ರಕಟವಾಗಿತ್ತು. ಅಂತೆಯೇ ಸಂಜೆಯ ವೇಳೆಗೆ ಲಿಟನ್‌ ದಾಸ್ ಅವರನ್ನು ನೂತನ ನಾಯಕರನ್ನಾಗಿ ಘೋಷಿಸಲಾಯಿತು.

ಲಿಟನ್‌ ದಾಸ್‌ ೨೦೧೫ರಲ್ಲಿ ಪದಾರ್ಪಣೆ ಮಾಡಿದ ಬಳಿಕ ಬಾಂಗ್ಲಾದೇಶ ತಂಡದ ಕಾಯಂ ಸದಸ್ಯರಾಗಿದ್ದರು. ಅಲ್ಲಿಂದ ಅವರು ತಂಡದ ಪ್ರಮುಖ ಸದಸ್ಯರೆನಿಸಿಕೊಂಡಿದ್ದರು. ಆದರೆ, ಒಡಿಐ ಮಾದರಿಯಲ್ಲಿ ಬಾಂಗ್ಲಾದೇಶ ತಂಡದ ನಾಯಕತ್ವ ವಹಿಸಿರಲಿಲ್ಲ. ಇದೀಗ ಅವರಿಗೆ ಆ ಅವಕಾಶ ಒದಗಿ ಬಂದಿದೆ.

ಇದನ್ನೂ ಓದಿ | IND VS BANGLA | ಭಾರತ ವಿರುದ್ಧದ ಸರಣಿಯಿಂದ ಬಾಂಗ್ಲಾ ನಾಯಕ ತಮೀಮ್‌ ಇಕ್ಬಾಲ್‌ ಔಟ್​!

Exit mobile version