ಪುಣೆ: ಭಾರತ ಮತ್ತು ಬಾಂಗ್ಲಾದೇಶ(India vs Bangladesh) ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಅಂಪೈರ್ ರಿಚರ್ಡ್ ಕೆಟಲ್‌ಬರೋ(Richard Ketlleborough) ಕೈಗೊಂಡ ಒಂದು ತೀರ್ಪು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಅಂಪೈರ್ ನಿರ್ಧಾರವನ್ನು ವಿರೋಧಿಸಿದರೆ, ಇನ್ನು ಕೆಲವರು ಕೊಹ್ಲಿಯ(Virat Kohli) ಶತಕ ಪೂರ್ತಿಗೊಳ್ಳಲು ನಿಮ್ಮದು ದೊಡ್ಡ ಪಾಲಿದೆ ಎಂದು ಹೇಳಿದ್ದಾರೆ. ಆದರೆ ಐಸಿಸಿ ನಿಯಮದ ಪ್ರಕಾರ ಅಂಪೈರ್ ಅವರ ಈ ನಿರ್ಧಾರ ಸರಿಯೇ ಆಗಿದೆ.
ಕಳೆದ ವರ್ಷ ಐಸಿಸಿ ಕ್ರಿಕೆಟ್ನ್ಲಿ ಕೆಲ ನಿಯಮಗಳನ್ನು ಬದಲಾವಣೆ ಮಾಡಿತ್ತು. ಈ ನಿಯಮದಲ್ಲಿ ವೈಡ್ ನಿಯಮವೂ ಸೇರಿತ್ತು. ಇದೇ ನಿಯಮದ ಅನ್ವಯ ರಿಚರ್ಡ್ ಕೆಟಲ್‌ಬರೋ ಸರಿಯಾದ ನಿರ್ಧಾರ ಕೈಗೊಂಡಂತಿದೆ ಎಂದು ಹಲವು ಕ್ರಿಕೆಟ್ ಪಂಡಿತರು ಹೇಳಿದ್ದಾರೆ.
ವೈಡ್ ಬಾಲ್ ನಿಯಮದಲ್ಲೇನಿದೆ?
ಮೊದಲು ಒಬ್ಬ ಬ್ಯಾಟರ್ನ ಹಿಂದಿನಿಂದ ವಿಕೆಟ್ಗೆ ತಾಗದೇ ಬೌಲ್ ಹಿಂದೆ ಸಾಗಿದರೆ ಅದನ್ನು ವೈಡ್ ಎಂದು ನಿರ್ಧರಿಸಲಾಗುತ್ತಿತ್ತು. ಆದರೆ ಈ ಚೆಂಡು ವಿಕೆಟ್ನಿಂದ ಹೊರಬಾಗದಲ್ಲಿ ಇರಬೇಕಿತ್ತು. ಹೊಸ ವೈಡ್ ಬಾಲ್ ನಿಯಮ 22.1.2 ರ ಪ್ರಕಾರ, ಚೆಂಡು ಬ್ಯಾಟರ್ನ ವ್ಯಾಪ್ತಿಯಿಂದ ಹೊರಗಿದ್ದರೆ ಇದನ್ನು ವೈಡ್ ಎಂದು ಘೋಷಿಸಲಾಗುತ್ತದೆ. ಬ್ಯಾಟ್ಸ್‌ಮನ್ ಒಬ್ಬ ಚೆಂಡನ್ನು ಹೊಡೆಯಲು ಚಲನೆ ಮಾಡಿ ಆ ಬಳಿಕ ಚೆಂಡನ್ನು ಬಿಟ್ಟರೆ ಇದನ್ನು ವೈಡ್ ಎಂದು ಪರಿಗಣಿಸಲಾಗುವುದಿಲ್ಲ. ಒಂದೆಮ್ಮೆ ಯಾವುದೇ ಚನಲೆ ಇಲ್ಲದೆ ಬೆಂಡನ್ನು ಹಿಂದೆ ಬಿಟ್ಟರೆ ಆಗ ಇದು ವೈಡ್ ಎಂದು ನಿರ್ಧರಿಸಲಾಗುತ್ತದೆ. ಇದು ಫೀಲ್ಡ್ ಅಂಪೈರ್ ಅವರ ತೀರ್ಮಾನಕ್ಕೆ ಬಿಟ್ಟಿರುವುದಾಗಿತ್ತದೆ.
ಕೊಹ್ಲಿಯ ವಿಚಾರದಲ್ಲಿಯೂ ಇದೇ ನಡೆದಿದೆ. ಮೊದಲು ಕೊಹ್ಲಿ ಚೆಂಡು ಬಾರಿಸಲು ಕ್ರೀಸ್ನಿಂದ ಚಲಿಸಿದ್ದಾರೆ, ಆ ಬಳಿಕ ಸಾಮಾನ್ಯ ಹೊಡೆತ ಬಾರಿಸಲು ಅವರಿಂದ ಸಾಧ್ಯವಾಗದಿದ್ದಾಗ ಚೆಂಡನ್ನು ಹಿಂದೆ ಬಿಟ್ಟಿದ್ದಾರೆ. ಈ ಚೆಂಡು ವಿಕೆಟ್ನ ಸ್ವಲ ಅಂತರದಲ್ಲಿಯೇ ಸಾಗಿತ್ತು. ಹೀಗಾಗಿ ಅಂಪೈರ್ ಇದನ್ನು ವೈಡ್ ಎಂದು ಮಾನ್ಯ ಮಾಡಲಿಲ್ಲ. ಆದರೆ ಇದನ್ನು ಕೆಲವರು ಕೊಹ್ಲಿಗೆ ಶತಕ ಬಾರಿಸಲೆಂದೇ ಅಂಪೈರ್ ವೈಡ್ ನೀಡಿಲ್ಲ ಎಂದು ತಪ್ಪಾಗಿ ಅಥೈಸಿಕೊಂಡಿದ್ದಾರೆ.
ಇದನ್ನೂ ಓದಿ Virat Kohli: ಪಂದ್ಯದ ಬಳಿಕ ಜಡೇಜಾಗೆ ಕ್ಷಮೆ ಕೇಳಿದ ವಿರಾಟ್ ಕೊಹ್ಲಿ
Umpire doesn't give wide to virat
— Saurabh Raj (@sraj57454) October 19, 2023
Best moment of match. 🤣🔥🔥#INDvsBAN #ViratKohli pic.twitter.com/L621N4ciur
ಕ್ರಿಕೆಟ್ನಲ್ಲಿ ಬದಲಾದ ಪ್ರಮುಖ ನಿಯಮಗಳು
ಮಂಕಡಿಂಗ್ ಔಟ್ಗೆ ಅವಕಾಶ
ವಿವಾದಿತ ಮಂಕಡ್ ಔಟನ್ನು ನ್ಯಾಯಯುತ ರನೌಟ್ ಎಂದು ತೀರ್ಮಾನಿಸಲಾಗಿದೆ. ನಾನ್ ಸ್ಟ್ರೈಕ್ ನಲ್ಲಿದ್ದ ಆಟಗಾರ ಕ್ರೀಸ್ ಬಿಟ್ಟು ಹೋದಾಗ ಬೌಲರ್ ಔಟ್ ಮಾಡಿದರೆ ಅದನ್ನು ರನೌಟ್ ಎಂದು ಪರಿಗಣಿಸಲಾಗುತ್ತಿದೆ. ಮತ್ತು ಅದು ನ್ಯಾಯಯುತ ಆಟ ಎಂದು ಮಾನ್ಯ ಮಾಡಲಾಗಿದೆ. ಈ ಹಿಂದೆ ಮಂಕಡಿಂಗ್ಗೆ ಅವಕಾಶ ಇದ್ದರೂ ಇದನ್ನು ಮಾಡಿದ ಆಟಗಾರನ್ನು ವಿಲನ್ ರೀತಿಯಲ್ಲಿ ನೋಡಲಾಗುತ್ತಿತ್ತು. ಮತ್ತು ಕ್ರೀಡಾಸ್ಫೂರ್ತಿ ತೋರಿಲ್ಲ ಎಂದು ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಆದರೆ ಈಗ ಈ ನಿಯಯ ಅಧಿಕೃತವಾಗಿ ಚಾಲ್ತಿಯಲ್ಲಿದೆ.
ಹೊಸ ಆಟಗಾರ ಸ್ಟ್ರೈಕ್ಗೆ
ಕ್ಯಾಚ್ ನೀಡಿ ಔಟಾದ ಸಮಯದಲ್ಲಿ ಹೊಸ ಆಟಗಾರ ನೇರ ಸ್ಟ್ರೈಕ್ಗೆ ಬರಬೇಕು. ಆತನೇ ಮುಂದಿನ ಎಸೆತ ಎದುರಿಸಬೇಕು. ಈ ಹಿಂದೆ ಕ್ಯಾಚ್ ಪಡೆಯುವ ಮೊದಲು ನಾನ್ ಸ್ಟ್ರೈಕರ್ ಕ್ರಾಸ್ ಆಗಿದ್ದರೆ ಆತ ಮುಂದಿನ ಎಸೆತ ಎದುರಿಸುತ್ತಿದ್ದ.
5 ಪೆನಾಲ್ಟಿ ರನ್
ಬೌಲಿಂಗ್ ವೇಳೆ ಫೀಲ್ಡಿಂಗ್ ತಂಡದ ಸದಸ್ಯ ಅಸಮರ್ಪಕ ಚಲನೆ ಮಾಡಿದರೆ ಅದನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಹೊಸ ನಿಯಮದ ಪ್ರಕಾರ ಫೀಲ್ಡರ್ನ ಅಸಮರ್ಪಕ ಚಲನೆಯು ಬ್ಯಾಟಿಂಗ್ ತಂಡಕ್ಕೆ 5 ಪೆನಾಲ್ಟಿ ರನ್ಗಳನ್ನು ನೀಡಲಾಗುತ್ತದೆ.