ಶಾರ್ಜಾ : ಏಷ್ಯಾ ಕಪ್ನ ಬಿ ಗುಂಪಿನಲ್ಲಿರುವ ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ತಂಡಗಳ ನಡುವಿನ ಪಂದ್ಯದಲ್ಲಿ ಟಾಸ್ ಜಯಿಸಿದ ಬಾಂಗ್ಲಾ ತಂಡದ ನಾಯಕ ಶಕಿಬ್ ಅಲ್ ಹಸನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಶಕಿಬ್ ಅಲ್ ಹಸನ್ ಅವರಿಗೆ ನೂರನೇ ಟಿ20 ಪಂದ್ಯವಾಗಿದ್ದು, ವಿಶ್ವ ಕ್ರಿಕೆಟ್ನಲ್ಲಿ ವಿಶೇಷ ಮೈಲುಗಲ್ಲು ತಲುಪಿಸಿದ್ದಾರೆ. ಭಾನುವಾರ ನಡೆದ ಪಾಕಿಸ್ತಾನ ಹಾಗೂ ಭಾರತ ತಂಡಗಳ ನಡುವಿನ ಪಂದ್ಯದ ವೇಳೆ ಟೀಮ್ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ 100ನೇ ಪಂದ್ಯವಾಡಿದ್ದರು.
ಶಾರ್ಜಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಇತ್ತೀಚಿನ ದಿನಗಳಲ್ಲಿ ಯಾವುದೇ ಕ್ರಿಕೆಟ್ ಪಂದ್ಯಗಳು ನಡೆದಿಲ್ಲ. ಆದರೆ, ಕಳೆದ ವರ್ಷ ನಡೆದ ಐಪಿಎಲ್ ಟೂರ್ನಿಯಲ್ಲಿ ಈ ಕ್ರೀಡಾಂಗಣವು ಬ್ಯಾಟಿಂಗ್ಗೆ ಹೆಚ್ಚು ನೆರವು ನೀಡುತ್ತಿತ್ತು. ಹೀಗಾಗಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಬಾಂಗ್ಲಾ ನಾಯಕ ದೊಡ್ಡ ಮೊತ್ತ ಪೇರಿಸಿ ಅಫಘಾನಿಸ್ತಾನ ತಂಡವನ್ನು ಕಟ್ಟಿ ಹಾಕುವ ಉದ್ದೇಶವನ್ನು ಹೊಂದಿದ್ದಾರೆ. ಅತ್ತ ಅಫಘಾನಿಸ್ತಾನ ತಂಡ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 8 ವಿಕೆಟ್ಗಳಿಂದ ಮಣಿಸಿತ್ತು.
ತಂಡಗಳು
ಬಾಂಗ್ಲಾದೇಶ : ಅನಾಮಲ್ ಹಕ್, ಮೊಹಮ್ಮದ್ ನಯೀಮ್, ಶಕಿಬ್ ಅಲ್ ಹಸನ್, ಆಸಿಫ್ ಹೊಸೈನ್, ಮಹಮದುಲ್ಲಾ ರಿಯಾನ್, ಮುಷ್ಫಿಕರ್ ರಹೀಮ್, ಮೊಸದೆಕ್ ಹೊಸೈನ್, ಮೆಹೆದಿ ಹಸನ್, ಮೊಹಮ್ಮದ್ ಸೈಫುದ್ದೀನ್, ಮುಸ್ತಾಫಿಜುರ್ ರಹ್ಮಾನ್, ಟಸ್ಕಿನ್ ಅಹಮದ್.
ಅಫಘಾನಿಸ್ತಾನ : ಹಜರುತುಲ್ಲಾ ಝಝೈ, ರಹಮನುಲ್ಲಾ ಗುರ್ಬಜ್, ಇಬ್ರಾಹಿಮ್ ಜದ್ರಾನ್, ನಜೀಬುಲ್ಲಾ ಜದ್ರಾನ್, ಕರೀಮ್ ಜನತ್, ಮೊಹಮ್ಮದ್ ನಬಿ, ರಶೀದ್ ಖಾನ್, ನವೀನ್ ಉಲ್ ಹಕ್, ಮುಜೀಬ್ ಉರ್ ರಹ್ಮಾನ್, ಅಜಮತುಲ್ಲಾ ಒಮರಾಜೈ, ಫಜಲ್ ಹಕ್ ಫರೂಕಿ.