Site icon Vistara News

Pakistan Cricket : ಪಾಕಿಸ್ತಾನ ಟಿ20 ತಂಡದಲ್ಲಿ ನಿಷೇಧಿತ ಆಟಗಾರನಿಗೂ ಸ್ಥಾನ!

usman Khan

ಇಸ್ಲಾಮಾಬಾದ್: ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ-20 ಸರಣಿಗೆ ಪಾಕಿಸ್ತಾನ ತಂಡದಲ್ಲಿ (Pakistan Cricket) ಅನ್​ಕ್ಯಾಪ್ಡ್​ ಉಸ್ಮಾನ್ ಖಾನ್ (Usaman Khan) ಅವರನ್ನು ಆಯ್ಕೆ ಮಾಡಿದೆ. ವಿಪರ್ಯಾಸ ಎಂದರೆ ಈ ಆಟಗಾರನಿಗೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಐದು ವರ್ಷಗಳ ಕಾಲ ನಿಷೇಧಿಸಿತ್ತು. ಆದರೆ ಆತ ದೇಶಕ್ಕಾಗಿ ಆಡಲು ಆಸಕ್ತಿ ತೋರಿದ ಕಾರಣಕ್ಕೆ ತಂಡದಲ್ಲಿ ಅವಕಾಶ ನೀಡಲಾಗಿದೆ.

28 ವರ್ಷದ ಖಾನ್ ಅವರು ತಮ್ಮ ಹುಟ್ಟಿದ ದೇಶಕ್ಕಾಗಿ ಆಡಲು ಆಸಕ್ತಿ ತೋರಿಸಿದ ನಂತರ ಮತ್ತು ಕಾಕುಲ್​ನ ಸೇನಾ ತರಬೇತಿ ಅಕಾಡೆಮಿಯಲ್ಲಿ ಪಾಕಿಸ್ತಾನ ಕ್ರಿಕೆಟಿಗರ ಶಿಬಿರದಲ್ಲಿ ಭಾಗವಹಿಸಿದ್ದರು. ಆದರೆ ಅದಕ್ಕಿಂತ ಒಂದು ವಾರ ಮೊದಲು ಈ ಆಟಗಾರನನ್ನು ಇಸಿಬಿ ನಿಷೇಧ ಮಾಡಿದೆ.

ಖಾನ್ ಅವರು “ಇಸಿಬಿ ಒದಗಿಸಿದ ಅವಕಾಶಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಅವರು ಇನ್ನು ಮುಂದೆ ಇಸಿಬಿಗಾಗಿ ಆಡಲು ಬಯಸುವುದಿಲ್ಲ. ಅರ್ಹತೆಯ ಮಾನದಂಡಗಳನ್ನು ಪೂರ್ಣಗೊಳಿಸಲು ಬಯಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ” ಎಂದು ಎಮಿರೇಟ್ಸ್​ ​ ಕ್ರಿಕೆಟ್​​ ಮಂಡಳಿ ಹೇಳಿದೆ.

ಕೆರಿಬಿಯನ್ ಮತ್ತು ಅಮೆರಿಕದಲ್ಲಿ ಮುಂದಿನ ಜೂನ್​ನಲ್ಲಿ ನಡೆಯಲಿರುವ ಟ್ವೆಂಟಿ -20 ವಿಶ್ವಕಪ್​ಗೆ ಮುಂಚಿತವಾಗಿ ಪಾಕಿಸ್ತಾನವು 11 ಟಿ 20 ಪಂದ್ಯಗಳನ್ನು ಆಡಲಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಪಾಕಿಸ್ತಾನದ 17 ಸದಸ್ಯರ ತಂಡದಲ್ಲಿ ಖಾನ್ ಅವರನ್ನು ಸೇರಿಸಿದೆ.

“ದೇಶವನ್ನು ಪ್ರತಿನಿಧಿಸಲು ಆಯ್ಕೆಯಾಗುವುದು ಯಾವುದೇ ಕ್ರೀಡಾಪಟುವಿನ ಅಂತಿಮ ಕನಸು ಮತ್ತು ಗುರಿಯಾಗಿದೆ” ಎಂದು ಟಿ 20 ವಿಶ್ವಕಪ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಖಾನ್ ಹೇಳಿದ್ದಾರೆ. “ಇಂದು, ನಾನು ಸಂಪೂರ್ಣವಾಗಿ ರೋಮಾಂಚನಗೊಂಡಿದ್ದೇನೆ ಮತ್ತು ಸಂತೋಷದಿಂದ ಇದ್ದೇನೆ ಎಂದು ಹೇಳಿದ್ದಾರೆ.

ಸರಣಿಯು ಏಪ್ರಿಲ್ 18 ರಂದು ರಾವಲ್ಪಿಂಡಿಯಲ್ಲಿ ಪ್ರಾರಂಭವಾಗುತ್ತದೆ. ಇದು ಏಪ್ರಿಲ್ 20 ಮತ್ತು 21 ರಂದು ಎರಡನೇ ಮತ್ತು ಮೂರನೇ ಪಂದ್ಯಗಳಿಗೆ ಆತಿಥ್ಯ ವಹಿಸುತ್ತದೆ. ಉಳಿದ ಎರಡು ಪಂದ್ಯಗಳು ಏಪ್ರಿಲ್ 25 ಮತ್ತು 27ರಂದು ಲಾಹೋರ್​ನಲ್ಲಿ ನಡೆಯಲಿವೆ.

ಬಾಬರ್ ಮತ್ತೆ ನಾಯಕ

ಈ ವರ್ಷದ ಆರಂಭದಲ್ಲಿ ಶಾಹೀನ್ ಶಾ ಅಫ್ರಿದಿ ನಾಯಕನಾಗಿ ತಮ್ಮ ಮೊದಲ ಸರಣಿಯಲ್ಲಿ ಆಡಿದ್ದರು. ನ್ಯೂಜಿಲೆಂಡ್ ವಿರುದ್ಧ ಆ ಸರಣಿಯಲ್ಲಿ ಪಾಕ್​ 4-1 ಅಂತರದಿಂದ ಸೋತಿತ್ತು. ಇದೀಗ ಬಾಬರ್ ಅಜಮ್ ಪಾಕಿಸ್ತಾನದ ವೈಟ್-ಬಾಲ್ ಕ್ರಿಕೆಟ್ ತಂಡದ ನಾಯಕರಾಗಿ ಮರಳಿದ್ದಾರೆ.

ಇದನ್ನೂ ಓದಿ: IPL 2024 : ವನಿಂದು ಬದಲಿಗೆ ಲಂಕಾ ಬೌಲರ್​​ನನ್ನೇ ಆಯ್ಕೆ ಮಾಡಿಕೊಂಡ ಎಸ್​ಆರ್​ಎಚ್​​​

ಖಾನ್ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ವಿದೇಶಿ ಆಟಗಾರನಾಗಿ ಮುಲ್ತಾನ್ ಸುಲ್ತಾನ್ಸ್ ಪರ ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಬಾರಿಸಿದ್ದರು. ಈ ತಂಡದ ಇಸ್ಲಾಮಾಬಾದ್ ಯುನೈಟೆಡ್ ವಿರುದ್ಧದ ರೋಮಾಂಚಕ ಫೈನಲ್​​ನಲ್ಲಿ ಸೋತಿತು.

ಪಾಕಿಸ್ತಾನದ ಪ್ರೀಮಿಯರ್ ಟಿ 20 ಲೀಗ್​ನಲ್ಲಿ ಉದಯೋನ್ಮುಖ ಆಟಗಾರ ಮತ್ತು ಅತ್ಯುತ್ತಮ ಫೀಲ್ಡರ್ ಪ್ರಶಸ್ತಿ ಪಡೆದ ನಂತರ ಬ್ಯಾಡರ್​ ಇರ್ಫಾನ್ ಖಾನ್ ಗೂ ಮೊದಲ ಕರೆ ಸಿಕ್ಕಿದೆ. ಫಿಟ್ನೆಸ್ ಸಮಸ್ಯೆಗಳಿಂದಾಗಿ ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್​ನಲ್ಲಿ ನಡೆದ ಟಿ 20 ಸರಣಿಯಿಂದ ಹೊರಗುಳಿದ ನಂತರ ಲೆಗ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವಕಾಶ ಪಡೆದಿ್ದಾರೆ.

ಆಲ್ರೌಂಡರ್ ಇಮಾದ್ ವಾಸಿಮ್ ಮತ್ತು ವೇಗದ ಬೌಲರ್ ಮೊಹಮ್ಮದ್ ಅಮೀರ್ ಕಳೆದ ತಿಂಗಳು ನಿವೃತ್ತಿಯಿಂದ ಹೊರಬಂದ ನಂತರ ತಂಡಕ್ಕೆ ಮರಳಲಿದ್ದಾರೆ. ಪಾಕಿಸ್ತಾನ ಪರ 50 ಟಿ 20 ಪಂದ್ಯಗಳಲ್ಲಿ 59 ವಿಕೆಟ್​​ ಪಡೆದಿರುವ ಅಮೀರ್, 2020 ರಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧ ಆಡಿದ್ದರು.

ಪಾಕಿಸ್ತಾನದ ಮಾಜಿ ಆಲ್ರೌಂಡರ್ ಅಜರ್ ಮಹಮೂದ್ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಮಹಮೂದ್ ಈ ಹಿಂದೆ 2016 ರಿಂದ 19 ರವರೆಗೆ ಪಾಕಿಸ್ತಾನ ತಂಡದ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುತ್ತಿರುವ ಕೇನ್ ವಿಲಿಯಮ್ಸನ್ ಮತ್ತು ಡ್ಯಾರಿಲ್ ಮಿಚೆಲ್ ಸೇರಿದಂತೆ ಹಲವಾರು ಪ್ರಮುಖ ಟಿ 20 ಆಟಗಾರರ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಡ್ ಆಡಲಿದೆ.

ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಅಬ್ರಾರ್ ಅಹ್ಮದ್, ಅಜಮ್ ಖಾನ್, ಫಖರ್ ಜಮಾನ್, ಇಫ್ತಿಖರ್ ಅಹ್ಮದ್, ಇಮಾದ್ ವಾಸಿಮ್, ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಅಮೀರ್, ಇರ್ಫಾನ್ ಖಾನ್, ನಸೀಮ್ ಶಾ, ಸೈಮ್ ಅಯೂಬ್, ಶದಾಬ್ ಖಾನ್, ಶಾಹೀನ್ ಶಾ ಅಫ್ರಿದಿ, ಉಸಾಮಾ ಮಿರ್, ಉಸ್ಮಾನ್ ಖಾನ್, ಜಮಾನ್ ಖಾನ್.

Exit mobile version