ಬೆಂಗಳೂರು: ಭಾರತ ವಿರುದ್ಧ ಇನ್ನೇನು ಕೆಲವೇ ಕ್ಷಣದಲ್ಲಿ ನೆದರ್ಲೆಂಡ್ಸ್ ತಂಡ ಕಣಕ್ಕಿಳಿಯಲಿದೆ. ಈ ಪಂದ್ಯದಕ್ಕೂ ಮುನ್ನ ನೆದೆರ್ಲೆಂಡ್ಸ್ ತಂಡದ ಯುವ ಆಲ್ ರೌಂಡರ್ ಬಾಸ್ ಡಿ ಲೀಡೆ(bas de leede) ಅವರು 2003ರ ವಿಶ್ವಕಪ್ನಲ್ಲಿ(2003 india vs netherlands) ತಮ್ಮ ತಂದೆ ಟಿಮ್ ಡಿ ಲೀಡೆ(v) ಅವರು ಭಾರತ ವಿರುದ್ಧ ತೋರಿದ ಪ್ರದರ್ಶನವನ್ನು ನೆನಪಿಸಿಕೊಂಡಿದ್ದಾರೆ.
ಚೆಂಡಿನಲ್ಲಿ ಆಟೋಗ್ರಾಫ್ ನೀಡಿದ್ದ ಸಚಿನ್
ಬಾಸ್ ಡಿ ಲೀಡೆ ಅವರು ತಮ್ಮ ತಂದೆ 2003ರ ವಿಶ್ವಕಪ್ನಲ್ಲಿ ಸಚಿನ್ ತೆಂಡೂಲ್ಕರ್(sachin tendulkar) ಅವರ ವಿಕೆಟ್ ಕಿತ್ತು ವಿಚಾರವನ್ನು ನೆನಪಿಸಿಕೊಂಡಿರುವ ವಿಡಿಯೊವನ್ನು ಐಸಿಸಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೊದಲ್ಲಿ ಬಾಸ್ ಡಿ ಲೀಡೆ ಅಂದು ತಮ್ಮ ತಂದೆ ಟಿಮ್ ಡಿ ಲೀಡೆ ಅವರು ಭಾರತ ವಿರುದ್ಧ ಶ್ರೇಷ್ಠ ಮಟ್ಟದ ಬೌಲಿಂಗ್ ನಡೆಸಿದ್ದರು. ಅದರಲ್ಲೂ ಅವರು ಸಚಿನ್ ತೆಂಡೂಲ್ಕರ್ ಅವರ ವಿಕೆಟ್ ಕಿತ್ತದ್ದು ಅವರ ಕ್ರಿಕೆಟ್ ಬದುಕಿನ ಶ್ರೇಷ್ಠ ಇನಿಂಗ್ಸ್ ಆಗಿತ್ತು. ಈ ವಿಚಾರವನ್ನು ಅವರೇ ನನಗೆ ಹೇಳಿದ್ದರು. ಅಲ್ಲದೆ ಸಚಿನ್ ಅವರು ನಮ್ಮ ತಂದೆಗೆ ಚೆಂಡಿನಲ್ಲಿ ಸಹಿ ಹಾಕಿ ಆಟೋಗ್ರಾಫ್ ನೀಡಿದ್ದರು. ಇದು ಈಗಲೂ ತಂದೆಯ ಜತೆ ಇದೆ ಎಂದು ಈ ವಿಡಿಯೊದಲ್ಲಿ ಹೇಳಿದ್ದಾರೆ. ಟಿಮ್ ಡಿ ಲೀಡೆ ಅವರು ಅಂದು ಸಚಿನ್ ಸಹಿ ಹಾಕಿ ನೀಡಿದ ಚೆಂಡನ್ನು ಕೂಡ ಈ ವಿಡಿಯೊದಲ್ಲಿ ತೋರಿಸಿದ್ದಾರೆ.
ಸಚಿನ್ ಅವರನ್ನು ನೋಡುವ ಭಾಗ್ಯ ನನಗೂ ಈ ಬಾರಿಯ ವಿಶ್ವಕಪ್ನಲ್ಲಿ ಸಿಕ್ಕಿದೆ. ಅವರನ್ನು ಕಂಡು ನಾನು ಸಂತಸಗೊಂಡಿದ್ದೇನೆ. ನನ್ನ ತಂದೆ ಹೇಳುತ್ತಿದ್ದರು. ಸಚಿನ್ ಅವರಂತೆ ಸವ್ಯಸಾಚಿ ಕ್ರಿಕೆಟಿಗ ಎಂದಿಗೂ ಸಿಗಲಾರರು ಎಂದು ಅದು ನೂರಕ್ಕೆ ನೂರರಷ್ಟು ನಿಜ. ವಿಕೆಟ್ ಕಿತ್ತರೂ ಅವರು ನನ್ನ ತಂದೆಗೆ ಆಟೋಗ್ರಾಫ್ ನೀಡಿದ್ದೇ ಇದಕ್ಕೆ ಉತ್ತಮ ನಿದರ್ಶನ. ಅಂದಿನ ಪಂದ್ಯದಲ್ಲಿ ಆಟಗಾರರಾಗಿದ್ದ ರಾಹುಲ್ ದ್ರಾವಿಡ್ ಸರ್ ಇಂದು ಭಾರತ ತಂಡದ ಕೋಚ್ ಆಗಿದ್ದಾರೆ. ಅವರನ್ನು ಬಹಳ ಹತ್ತಿರದಿಂದ ನೋಡುವ ಅವಕಾಶ ನನಗೆ ಸಿಕ್ಕಿತು ಎಂದು ಬಾಸ್ ಡಿ ಲೀಡೆ ಸಂತಸಗೊಂಡರು.
ಇದನ್ನೂ ಓದಿ IND vs NED: ಭಾರತ-ನೆದರ್ಲೆಂಡ್ಸ್ ಪಂದ್ಯ; ಬೆಂಗಳೂರಿನ ಹಲವೆಡೆ ವಾಹನ ನಿಲುಗಡೆ ನಿಷೇಧ
ಮೊದಲ ವಿಶ್ವಕಪ್ ಮುಖಾಮುಖಿಯಾಗಿತ್ತು…
ಭಾರತ ಮತ್ತು ನೆದರ್ಲೆಂಡ್ಸ್ ತಂಡಗಳು ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದು 2003ರಲ್ಲಿ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಸಚಿನ್ ತೆಂಡೂಲ್ಕರ್(52) ಅವರ ಅರ್ಧಶತಕ ಮತ್ತು ದಿನೇಶ್ ಮೊಂಗಿಯ(42) ಅವರ ಬ್ಯಾಟಿಂಗ್ ಸಾಹಸದಿಂದ 48.5 ಓವರ್ಗಳಲ್ಲಿ 204 ರನ್ಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ್ದ ನೆದರ್ಲೆಂಡ್ಸ್ ತಂಡ ವ್ಯಾನ್ ಬಂಗೆ(62) ಏಕಾಂಗಿ ಹೋರಾಟದ ಹೊರತಾಗಿಯೂ 48.1 ಓವರ್ಗಳಲ್ಲಿ 136 ರನ್ಗೆ ಸರ್ವಪತನ ಕಂಡಿತು. ಜಾವಗಲ್ ಶ್ರೀನಾಥ್ ಮತ್ತು ಅನಿಲ್ ಕುಂಬ್ಳೆ ತಲಾ ನಾಲ್ಕು ವಿಕೆಟ್ ಕಿತ್ತು ಡಚ್ಚರ ಸೊಕ್ಕಡಗಿಸಿದ್ದರು.
ಮಗನ ಪಂದ್ಯ ನೋಡಲು ಬಂದ ತಂದೆ
4 ವಿಕೆಟ್ ಕಿತ್ತ ಟಿಮ್ ಡಿ ಲೀಡೆ
ಟಿಮ್ ಡಿ ಲೀಡೆ ಅವರು ಈ ಪಂದ್ಯದಲ್ಲಿ 35 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಿತ್ತಿದ್ದರು. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಹರ್ಭಜನ್ ಸಿಂಗ್ ಮತ್ತು ಜಹೀರ್ ಖಾನ್ ಅವರ ವಿಕೆಟ್ ಉರುಳಿಸಿದ್ದರು. ಇದೀಗ ಇವರ ಮಗ ಬಾಸ್ ಡಿ ಲೀಡೆ ಇಂದು ಭಾರತ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಅವರೂ ಕೂಡ ತಂದೆಯಂತೆ ಪರಾಕ್ರಮ ತೋರಲಿದ್ದಾರಾ ಎಂದು ಕಾದು ನೋಡಬೇಕಿದೆ.