Site icon Vistara News

Mohammed Shami: ಪಾಕಿಸ್ತಾನವನ್ನು ನಿಂದಿಸುವುದು ನನ್ನ ರಕ್ತದಲ್ಲಿಯೇ ಬಂದಿದೆ ಎಂದ ಮೊಹಮ್ಮದ್​ ಶಮಿ

Mohammed Shami

ಬೆಂಗಳೂರು: ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ(Mohammed Shami) ಅವರು ಸಾದಾ ಜಗಳಕ್ಕೆ ಬರುವ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶವೊಂದನ್ನು ನೀಡಿದ್ದಾರೆ. ಕ್ರಿಕೆಟ್ ಮೈದಾನದಲ್ಲಾಗಲಿ, ಸಾಮಾಜಿಕ ಮಾಧ್ಯಮವಾಗಲಿ ಪಾಕಿಸ್ತಾನವನ್ನು ಎದುರಿಸಲು ಮತ್ತು ನಿಂದಿಸಲು ಎಂದಿಗೂ ಹಿಂಜರಿಯುವುದಿಲ್ಲ. ಇದು ನನ್ನ ರಕ್ತದಲ್ಲಿಯೇ ಬಂದಿದೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ನಿರೂಪಕರೊಬ್ಬರು, ನೀವು ಪಾಕಿಸ್ತಾನವನ್ನು ಹೆಚ್ಚು ನಿಂದಿಸುತ್ತೀರಿ ಎಂದು ಹೇಳಿದರು. ಇದಕ್ಕೆ ತಕ್ಷಣ ಉತ್ತರ ನೀಡಿದ ಶಮಿ, ಇದು ನನ್ನ ರಕ್ತದಲ್ಲಿದೆ(“ವೋ ತೋ ಖೂನ್ ಮೇ ಹೈ) ಎಂದು ಹೇಳಿದ್ದಾರೆ.

ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದ್ದ ಹಸನ್​ ರಾಝಾ ಅವರಿಗೆ ಶಮಿ ಅವರು ತಕ್ಕ ತಿರುಗೇಟು ನೀಡಿದ್ದರು. ಭಾರತ ತಂಡಕ್ಕೆ ಐಸಿಸಿ ಮತ್ತು ಬಿಸಿಸಿಐ(ICC And BCCI) ಸೇರಿಕೊಂಡು ವಿಶೇಷ ಚೆಂಡನ್ನು ನೀಡುತ್ತಿದೆ. ಹೀಗಾಗಿ ಶಮಿ ಮತ್ತು ಉಳಿದ ಬೌಲರ್​ಗಳು ವಿಕೆಟ್​ ಈ ರೀತಿ ವಿಕೆಟ್​ ಕೀಳುತ್ತಿದ್ದಾರೆ ಎಂದು ಹಸನ್​ ರಾಝಾ ಹೇಳಿದ್ದರು. ಇದಕ್ಕೆ ತಿರಿಗೇಟು ನೀಡಿದ್ದ ಶಮಿ, ‘ಇದು ಗಲ್ಲಿ ಕ್ರಿಕೆಟ್​ ಅಲ್ಲ. ವಿಶ್ವಕಪ್ ಟೂರ್ನಿ. ಇಲ್ಲಿ ಆಟಗಾರರಿಂದ ಇಂತಹ ಪ್ರದರ್ಶನಗಳೇ ಮೂಡಿ ಬರುವುದು” ಎಂದು ಶಮಿ ರಾಝಾಗೆ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದರು.

ಇದನ್ನೂ ಓದಿ Mohammed Shami: ನಿವೃತ್ತಿಯ ಕುರಿತು ಮಹತ್ವದ ಹೇಳಿಕೆ ನೀಡಿದ ಮೊಹಮ್ಮದ್​ ಶಮಿ!

ಅರ್ಜುನ ಪ್ರಶಸ್ತಿ ಪಡೆದ ಶಮಿ


ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ತೋರಿ ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ ಎನಿಸಿಕೊಂಡಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದರು.

ನಿವೃತ್ತಿಯ ಸುಳಿವು ಬಿಟ್ಟುಕೊಟ್ಟ ಶಮಿ


ಶಮಿ ಅವರು ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ನಿವೃತ್ತಿಯ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ ವೇಳೆ ಅವರು,”ನನಗೆ ಕ್ರಿಕೆಟ್​ ಬೇಸರವಾದಾಗ, ಸಾಕು ಎಂದು ಎನಿಸಿದಾಗ ಬೆಳಗ್ಗೆ ಎದ್ದು ನನ್ನ ನಿವೃತ್ತಿಯನ್ನು ಘೋಷಿಸುತ್ತೇನೆ. ಆ ದಿನ ಯಾವುದು ಎಂದು ನಾನು ಈಗಲೇ ನಿರ್ಧರಿಸಿಲ್ಲ. ನಾನು ಯಾವುದಕ್ಕೂ ಹೊರೆಯಾಗಲು ಬಯಸುವುದಿಲ್ಲ” ಎಂದು ಹೇಳಿದ್ದರು.

“ವೃತ್ತಿ ಅಥವಾ ಇತರ ಯಾವುದೇ ವಿಚಾರವನ್ನು ಚರ್ಚಿಸಲು ನನ್ನ ಜತೆ ಕುಟುಂಬದಲ್ಲಿ ಯಾರೂ ಇಲ್ಲ. ಹೀಗಾಗಿ ನಾನು ಮೈದಾನಕ್ಕೆ ಹೋಗಲು ಕಷ್ಟ ಎಂದು ನನ್ನ ಮನಸಲ್ಲಿ ಬಂದ ತಕ್ಷಣ ನಿವೃತ್ತಿಯಾಗುತ್ತಿದ್ದೇನೆ ಎಂದು ಟ್ವೀಟ್ ಮಾಡುತ್ತೇನೆ,” ಎಂದು ಶಮಿ ಹೇಳಿದ್ದರು

ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ. ಸದ್ಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಸರಣಿಯ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ಶಮಿ ಮೂರನೇ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆ ಇದೆ. ಏಕದಿನ ವಿಶ್ವಕಪ್​ ಬಳಿಕ ಶಮಿ ಭಾರತ ಪರ ಯಾವುದೇ ಸರಣಿ ಆಡಿಲ್ಲ.

Exit mobile version