Site icon Vistara News

18 ಕೋಟಿ ರೂಪಾಯಿಗೆ ಬಾಸ್ಕೆಟ್​ಬಾಲ್​ ದಿಗ್ಗಜನ ಶೂ ಹರಾಜು, ಯಾರು ಈ ಆಟಗಾರ?

Basketball legend's shoe auction for 18 crore rupees, who is this player?

#image_title

ನ್ಯೂಯಾರ್ಕ್​: ಬಾಸ್ಕೆಟ್​ಬಾಲ್​ ದಿಗ್ಗಜ ಅಮೆರಿಕದ ಮೈಕೆಲ್​ ಜೋರ್ಡನ್ (michael jordan)​ ಅವರು 1998ರ ಎನ್​ಬಿಎ (ನ್ಯಾಷನಲ್​ ಬಾಸ್ಕೆಟ್​ಬಾಲ್​ ಅಸೋಸಿಯೇಷನ್​) ಲೀಗ್​ನ ಫೈನಲ್​ ಪಂದ್ಯದಲ್ಲಿ ಧರಿಸಿದ್ದ ಶೂಗಳು 18 ಕೋಟಿ ರೂಪಾಯಿ ಬಾಚಿಕೊಂಡಿದೆ. ನ್ಯೂಯಾರ್ಕ್​ ಮೂಲದ ಸೋದೆಬಿಸ್​ ಸಂಸ್ಥೆಯು ಹರಾಜು ನಡೆಸಿದ್ದು ದೊಡ್ಡ ಮೊತ್ತ ಗಳಿಸಿದ್ದೇವೆ ಎಂದು ಮಾಹಿತಿ ನೀಡಿದೆ.

ಮೈಕೆಲ್​ ಜೋರ್ಡನ್ ಅವರು ಎನ್​ಬಿಎನಲ್ಲಿ ಆಡಿದ್ದ ಕೊನೇ ಪಂದ್ಯ ಅದಾಗಿತ್ತು. ಶಿಕಾಗೊ ಬುಲ್ಸ್ ತಂಡ ಪರವಾಗಿ ಆಡಿದ್ದ ಅವರು ಜೂಟಾ ಜಾಜ್​ ತಂಡದ ವಿರುದ್ಧದ ಫೈನಲ್​ ಹಣಾಹಣಿಯಲ್ಲಿ 37 ಅಂಕಗಳನ್ನು ಕಲೆ ಹಾಕಿದ್ದರು. ಈ ಪಂದ್ಯದಲ್ಲಿ ಶಿಕಾಗೊ ತಂಡ 93-88 ಅಂಕಗಳಿಂದ ತನ್ನದಾಗಿಸಿಕೊಂಡಿತ್ತು. ಅಂದು ಜೋರ್ಡನ್​ ಧರಿಸಿದ್ದ ಶೂ ಅವರನ್ನು ಸಂಗ್ರಹಿಸಿಡಲಾಗಿತ್ತು. ಅದನ್ನೀಗ ಹರಾಜಿನ ಮೂಲಕ ಮಾರಾಟ ಮಾಡಲಾಗಿದ್ದು ದೊಡ್ಡ ಮೊತ್ತ ಲಭಿಸಿದೆ.

ಜೋದೆಬಿಸ್​ ಸಂಸ್ಥೆ ಇದುವರೆಗೆ ನಡೆಸಿರುವ ಹರಾಜಿನಲ್ಲಿ ಅತ್ಯಧಿಕ ಮೊತ್ತವನ್ನು ಪಡೆದ ಶೂ ಇದಾಗಿದೆ. ಅಮೆರಿಕದ ಗಾಯಕ ಕಾನ್ಯೆ ವೆಸ್ಟ್​ ಅವರ ಶೂಗಳು 2021ರಲ್ಲಿ ನಡೆಸಲಾಧ ಹರಾಜಿನಲ್ಲಿ 14.74 ಲಕ್ಷ ರೂಪಾಯಿಗೆ ಹರಾಜಾಗಿತ್ತು. ಅದು ಇದುವರೆಗಿನ ಗರಿಷ್ಠ ಮೊತ್ತ ಎನಿಸಿಕೊಂಡಿತ್ತು.

ಇದನ್ನೂ ಓದಿ : Narendra Modi | ಮೋದಿ ಸ್ವೀಕರಿಸಿದ 1,200 ಉಡುಗೊರೆ ಸೆ.17ರಿಂದ ಹರಾಜು, ಹಣ ಯಾವುದಕ್ಕೆ ಬಳಕೆ?

ಅಂದ ಹಾಗೆ ಜೋರ್ಡನ್​ ಅವರು ಅದೇ ಫೈನಲ್​ ಪಂದ್ಯದಲ್ಲಿ ಧರಿಸಿದ್ದ ಜೆರ್ಸಿಯನ್ನೂ ಇತ್ತೀಚೆಗೆ ಹರಾಜಿಗೆ ಇಡಲಾಗಿತ್ತು. ಆ ವೇಳೆ 82 ಕೋಟಿ ರೂಪಾಯಿಗೆ ಅದು ಮಾರಾಟವಾಗಿತ್ತು.

122 ಕೋಟಿ ರೂಪಾಯಿಗೆ ಗಿನ್ನಿಸ್​ ದಾಖಲೆ ಸೃಷ್ಟಿಸಿದ ಫ್ಯಾನ್ಸಿ ನಂಬರ್​ ಪ್ಲೇಟ್ ಹರಾಜು!

ವಾಹನಗಳ ಫ್ಯಾನ್ಸಿ ನಂಬರ್ ಪ್ಲೇಟ್​ ಹರಾಜು ಪ್ರಕ್ರಿಯೆ ಆಗಾಗ ನಡೆಸುತ್ತಾರೆ. ಕೆಲವೊಂದು ಸೀರಿಸ್​ನ ಅತ್ಯಾಕರ್ಷಕ ನಂಬರ್​ಗಳಿಗೆ ಹೆಚ್ಚು ಬೇಡಿಕೆ ಬರುವ ಕಾರಣ ಹರಾಜು ಮಾಡುವುದು ಕೂಡ ಅನಿವಾರ್ಯ. ಈ ರೀತಿ ಆರ್​ಟಿಒ ಅಧಿಕಾರಿಗಳು ಹರಾಜು ಮಾಡುವ ವೇಳೆ ಪಡೆಯುವ ಒಟ್ಟು ಮೊತ್ತ ಲಕ್ಷಕ್ಕೆ ಸೀಮಿತವಾಗಿರುತ್ತದೆ. ಒಂದಿಷ್ಟು ಲಕ್ಷ ಗಳಿಸಿದ್ದೇವೆ ಎಂದು ಅಧಿಕಾರಿಗಳು ಕೂಡ ಮಾಹಿತಿ ನೀಡುತ್ತಾರೆ. ಆದರೆ, ದುಬೈನಲ್ಲಿ ನಡೆದ ಫ್ಯಾನ್ಸ್ ನಂಬರ್​ ಹರಾಜಿನಲ್ಲಿ ಸಂಖ್ಯೆಯೊಂದು ಇದುವರೆಗಿನ ಗರಿಷ್ಠ ಮೊತ್ತಕ್ಕೆ ಹರಾಜಾಗಿದೆ. ಇದರ ಮೂಲಕ ಹರಾಜು ಪ್ರಕ್ರಿಯೆ ಗಿನ್ನಿಸ್​ ಪುಸ್ತಕ ಸೇರಿದೆ.

P 7 ವಿಶ್ವದಲ್ಲಿಯೇ ಅತಿ ಹೆಚ್ಚು ಮೊತ್ತ ಪಡೆದ ಸಂಖ್ಯೆಯಾಗಿದೆ. 55 ದಶ ಲಕ್ಷ ದಿರ್ಹಾಮ್​ ಪಡೆದುಕೊಂಡಿದೆ ಈ ಸಂಖ್ಯೆ. ಅಂದರೆ ಭಾರತದ ರೂಪಾಯಿಯಲ್ಲಿ 122 ಕೋಟಿ. ಇಷ್ಟೊಂದು ಮೊತ್ತವನ್ನು ಕೊಟ್ಟು ನಂಬರ್​ ಪಡೆದುಕೊಂಡಿರುವ ವ್ಯಕ್ತಿ ತನ್ನ ಗುರುತನ್ನು ಹೇಳಿಕೊಳ್ಳುವುದಕ್ಕೆ ಇಚ್ಛೆ ಪಟ್ಟಿಲ್ಲ. ದತ್ತಿ ನಿಧಿ ಸಂಗ್ರಹದ ಉದ್ದೇಶದಿಂದ ಈ ಹರಾಜು ಪ್ರಕ್ರಿಯೆಯನ್ನು ನಡೆಸಲಾಗಿತ್ತು. ಸಂಗ್ರಹಗೊಂಡ ಮೊತ್ತವು ಕೋಟಿ ಊಟ (ಒನ್​ ಮಿಲಿಯನ್ ಮೀಲ್) ವಿತರಣೆ ಮಾಡುವ ಕಾರ್ಯಕ್ಕೆ ಹೋಗಲಿದೆ.

ದುಬೈನ ಪ್ರಧಾನ ಮಂತ್ರಿ ಶೇಖ್​ ಮೊಹಮ್ಮದ್​ ಬಿನ್​ ರಶೀದ್ ಅಲ್​ ಮಕ್ತೋಮ್​ ಅವರು ಒನ್​ ಬಿಲಿಯನ್​ ಮೀಲ್​ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದಾರೆ. ಈ ಯೋಜನೆ ಮೂಲಕ ರಂಜಾನ್​ ಹಬ್ಬದ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಒಂದು ಕೋಟಿ ಮಂದಿಗೆ ಊಟ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ಅದಕ್ಕಾಗಿ ಆಯೋಜಿಸಿದ್ದ ಹರಾಜಿನಲ್ಲಿ ಪಿ7 ಸಂಖ್ಯೆಗೆ 122 ಕೋಟಿ ರೂಪಾಯಿ ಲಭಿಸಿದೆ.

ಪಿ7 ಸಂಖ್ಯೆಯ ಜತೆಗೆ AA19, AA22, AA80, O71, X36, W78, H31, Z37, J57 ಮತ್ತ N41 ಎಂಬ ಸಂಖ್ಯೆಯೂ ಹರಾಜಾಗಿದೆ. Y900, Q22222, ಮತ್ತು Y6666 ಸಂಖ್ಯೆಗಳೂ ಹರಾಜಾಗಿವೆ. ಇದರಲ್ಲಿ AA19 ಸಂಖ್ಯೆ 10 ಕೋಟಿ ರೂಪಾಯಿಗೆ ಬಿಡ್​ ಆಗಿದೆ. o71 ಸಂಖ್ಯೆ 33 ಕೋಟಿ ರೂಪಾಯಿಗೆ ಹರಾಜಾಗಿದ್ದರೆ, Q22222 ಸಂಖ್ಯೆ 2 ಕೋಟಿ ರೂಪಾಯಿಗೆ ಹರಾಜಾಗಿದೆ.

ಫ್ಯಾನ್ಸಿ ನಂಬರ್​ಗಳ ಗರಿಷ್ಠ ಬಿಡ್ಡಿಂಗ್ ದಾಖಲೆ 2018ರಲ್ಲಿ ದಾಖಲಾಗಿತ್ತು. ಅ ಬಾರಿ 1 ಸಂಖ್ಯೆ 116.3 ಕೋಟಿ ರೂಪಾಯಿ ಪಡೆದುಕೊಂಡಿತ್ತು. ಈ ಬಿಡ್ಡಿಂಗ್​ನಲ್ಲಿ ಟೆಲಿಗ್ರಾಮ್​ ಸಂಸ್ಥಾಪಕ ಪಾವೆಲ್​ ಡುರೋವ್ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ.

ಫೋನ್​ ಸಂಖ್ಯೆಯೂ ಹರಾಜು

ಕಾರುಗಳ ನಂಬರ್ ಪ್ಲೇಟ್ ಜತೆಗೆ ಫೋನ್​ ನಂಬರ್​ಗಳ ಹರಾಜು ಪ್ರಕ್ರಿಯೆ ನಡೆಯಿತು. ಹರಾಜು ಪ್ರಕ್ರಿಯೆಲ್ಲಿ ಒಟ್ಟು 100 ಕೋಟಿ ರೂಪಾಯಿಗೂ ಅಧಿಕ ಮೊತ್ತ ದಾಖಲಾಗಿದೆ. 971583333333 ಸಂಖ್ಯೆ 4.4 ಕೋಟಿ ರೂಪಾಯಿ ಮೊತ್ತಕ್ಕೆ ಹರಾಜಾಗಿದೆ.

Exit mobile version