ಮುಂಬಯಿ : ತಮಿಳುನಾಡಿನ ವಿಕೆಟ್-ಕೀಪರ್ ಬ್ಯಾಟರ್ ನಾರಾಯಣ್ ಜಗದೀಶನ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ (Vijay Hazare Trophy) ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದು, ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅವರು ನಾಲ್ಕು ಶತಕಗಳನ್ನು ಬಾರಿಸಿ, ಲಿಸ್ಟ್ ಈ ಸಾಧನೆ ಮಾಡಿದ ಐದನೇ ಆಟಗಾರ ಎನಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ೨೦೦೮-೦೯ನೇ ಆವೃತ್ತಿಯಲ್ಲಿ (೧೦೨, ೧೧೯*, ೧೨೪*, ೧೧೪* )ನಾಲ್ಕು ಶತಕಗಳನ್ನು ಬಾರಿಸಿದ್ದರು. ಇದೀಗ ಜಗದೀಶನ್ ಅವರು ಅವರು ಅದೇ ಮಾದರಿಯ ಸಾಧನೆ ಮಾಡಿದ್ದಾರೆ. ಹಾಲಿ ಆವೃತ್ತಿಯ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಹರಿಯಾಣದ ವಿರುದ್ಧದ ಪಂದ್ಯದಲ್ಲಿ ೧೨೩ ಎಸೆತಗಳಿಗೆ ೧೨೮ ರನ್ ಬಾರಿಸಿದ ಜಗದೀಶನ್ ಅವರು ನಾಲ್ಕು ಶತಕಗಳು ಸಾಧನೆ ಮಾಡಿದ್ದಾರೆ. ಋತುರಾಜ್ ಗಾಯಕ್ವಾಡ್, ಪೃಥ್ವಿ ಶಾ ಹಾಗೂ ದೇವದತ್ ಪಡಿಕ್ಕಲ್ ಈ ಸಾಧನೆ ಮಾಡಿರುವ ಭಾರತದ ಇತರ ಬ್ಯಾಟರ್‌ಗಳು.
ಜಗದೀಶನ್ ಅವರು ಹರಿಯಾಣ ವಿರುದ್ಧ ಬಾರಿಸಿದ್ದ ಸತತ ನಾಲ್ಕನೇ ಶತಕ. ಈ ಮೂಲಕ ಅವರು ಶ್ರೀಲಂಕಾದ ಮಾಜಿ ಬ್ಯಾಟರ್ ಕುಮಾರ ಸಂಗಕ್ಕಾರ, ದಕ್ಷಿಣ ಆಫ್ರಿಕಾದ ಅಲ್ವಿರೊ ಪೀಟರ್ಸನ್, ಆರ್‌ಸಿಬಿ ಆಟಗಾರ ದೇವದತ್‌ಪಡಿಕ್ಕಲ್ ಅವರ ಸಾಲಿಗೆ ಸೇರಿಕೊಂಡಿದ್ದಾರೆ. ಇವರೆಲ್ಲರೂ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸತತ ನಾಲ್ಕು ಸೆಂಚುರಿ ಬಾರಿಸಿದ ಆಟಗಾರರು.
ಜಗದೀಶನ್ ಅವರು ೪೧ ಲಿಸ್ಟ್ ಎ ಪಂದ್ಯಗಳಲ್ಲಿ ಪಾಲ್ಗೊಂಡಿದ್ದು, ೧೭೮೨ ರನ್ ಬಾರಿಸಿದ್ದಾರೆ.
ಇದನ್ನೂ ಓದಿ | T20 World Cup | ವಿರಾಟ್ ಕೊಹ್ಲಿಯ ದಾಖಲೆ ಮುರಿದ ಇಂಗ್ಲೆಂಡ್ ತಂಡದ ವೇಗಿ ಸ್ಯಾಮ್ ಕರನ್