ಬೆಂಗಳೂರು : ಆಸ್ಟ್ರೇಲಿಯಾದಲ್ಲಿ ಟಿ೨೦ ವಿಶ್ವ ಕಪ್ ನಡೆಯುತ್ತಿದ್ದು, ಫೋರ್, ಸಿಕ್ಸರ್ಗಳು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಈ ರೀತಿಯಾಗಿ ಟಿ೨೦ ವಿಶ್ವ ಕಪ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಐದು ಆಟಗಾರರ ಪಟ್ಟಿ ಇಂತಿದೆ.
ಹಿಟ್ಮ್ಯಾನ್ ರೋಹಿತ್ ಶರ್ಮ ಅವರಿಗೆ ಸಿಕ್ಸರ್ ಎತ್ತುವುದು ಅತ್ಯಂತ ಸಲೀಸಾದ ಕೆಲಸ. ಟಿ೨೦ ವಿಶ್ವ ಕಪ್ನಲ್ಲಿ ಅವರು ಒಟ್ಟಾರೆ ೩೪ ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಈ ಮೂಲಕ ಯುವರಾಜ್ ಸಿಂಗ್ ಅವರು ಭಾರತ ಪರ ಸೃಷ್ಟಿಸಿದ್ದ ದಾಖಲೆ ಮುರಿದಿದ್ದಾರೆ.
೨೦೦೭ನೇ ಆವೃತ್ತಿಯ ವಿಶ್ವ ಕಪ್ನಲ್ಲಿ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್ನಲ್ಲಿ ಆರು ಸಿಕ್ಸರ್ ಬಾರಿಸಿದ್ದು ಸೇರಿದಂತೆ ಒಟ್ಟಾರೆ ೩೩ ಸಿಕ್ಸರ್ಗಳನ್ನು ಬಾರಿಸಿದ್ದಾರೆ ಯುವರಾಜ್ ಸಿಂಗ್.
ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಯುವರಾಜ್ ಸಿಂಗ್ ಟಿ೨೦ ವಿಶ್ವ ಕಪ್ನಲ್ಲಿ ಒಟ್ಟಾರೆ ೩೧ ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ ೧೪೦.೯೪
ಆಸ್ಟ್ರೇಲಿಯಾ ತಂಡದ ಸ್ಟಾರ್ ಓಪನರ್ ಡೇವಿಡ್ ವಾರ್ನರ್ ಅವರು ಒಟ್ಟು ೩೧ ಸಿಕ್ಸರ್ಗಳನ್ನು ಬಾರಿಸುವ ಮೂಲಕ ವಾಟ್ಸನ್ ಅವರೊಂದಿಗೆ ಈ ಪಟ್ಟಿಯಲ್ಲಿ ಸ್ಥಾನ ಹಂಚಿಕೊಂಡಿದ್ದಾರೆ.