ಪರ್ತ್: ವೆಸ್ಟರ್ನ್ ಆಸ್ಟ್ರೇಲಿಯಾ ಇಲೆವೆನ್ ತಂಡದ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ೩೬ ರನ್‌ಗಳ ಹೀನಾಯ ಸೋಲಿಗೆ ಒಳಗಾಗಿದೆ. ಕೆ. ಎಲ್ ರಾಹುಲ್ (೭೬) ಒಬ್ಬರನ್ನು ಬಿಟ್ಟು ಉಳಿದ ಎಲ್ಲ ಬ್ಯಾಟರ್‌ಗಳು ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಕಾರಣ ತಂಡಕ್ಕೆ ಸೋಲು ಎದುರಾಯಿತು.
ಪರ್ತ್‌ನ ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ವೆಸ್ಟರ್ನ್ ಆಸ್ಟ್ರೇಲಿಯಾ ತಂಡ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ೧೬೮ ರನ್ ಬಾರಿಸಿತು. ಪ್ರತಿಯಾಗಿ ಆಡಿದ ಭಾರತ ತನ್ನ ಪಾಲಿನ ಓವರ್‌ಗಳು ಮುಕ್ತಾಯಗೊಂಡಾಗ ೮ ವಿಕೆಟ್ ನಷ್ಟಕ್ಕೆ ೧೩೨ ರನ್ ಮಾತ್ರ ಬಾರಿಸಲು ಶಕ್ತಗೊಂಡು ಸೋಲಿಗೊಳಗಾಯಿತು.
ಭಾರತ ಪರ ಕೆ. ಎಲ್ ರಾಹುಲ್ ಅರ್ಧ ಶತಕ ಬಾರಿಸಿದರೆ ಹಾರ್ದಿಕ್ ಪಾಂಡ್ಯ ೧೭ ರನ್ ಹಾಗೂ ದಿನೇಶ್ ಕಾರ್ತಿಕ್ ೧೦ ರನ್ ಗಳಿಸಿದರು. ನಾಯಕ ರೋಹಿತ್ ಶರ್ಮ ಬ್ಯಾಟಿಂಗ್ ಮಾಡಲಿಲ್ಲ. ರಿಷಭ್ ಪಂತ್ (೯), ದೀಪಕ್ ಹೂಡ (೬), ಅಕ್ಷರ್ ಪಟೇಲ್ (೨) ಬ್ಯಾಟಿಂಗ್ ವೈಫಲ್ಯ ಎದುರಿಸಿದರು.
ಮೊದಲು ಬ್ಯಾಟ್ ಮಾಡಿದ ವೆಸ್ಟರ್ನ್ ಆಸ್ಟ್ರೇಲಿಯಾ ತಂಡದ ಪರ ಡಿ ಅರ್ಕಿ ಶಾರ್ಟ್ (೫೨), ನಿಕ್ ಹಾಬ್ಸನ್ (೬೪) ಅರ್ಧ ಶತಕ ಬಾರಿಸಿದರು. ಭಾರತ ಪರ ಬೌಲಿಂಗ್‌ನಲ್ಲಿ ಆರ್ ಅಶ್ವಿನ್ ೩ ವಿಕೆಟ್ ಕಬಳಿಸಿದರು.
ಇದನ್ನೂ ಓದಿ | T20 World Cup | ವಿಶ್ವ ಕಪ್‌ಗೆ ಮೊದಲು ಭಾರತ ತಂಡಕ್ಕೆ ಸಾಲು ಸಾಲು ಅಭ್ಯಾಸ ಪಂದ್ಯಗಳು