Site icon Vistara News

BBL 2022 | ಕೇವಲ 15 ರನ್​ಗೆ ಸರ್ವಪತನ ಕಂಡು ಕೆಟ್ಟ ದಾಖಲೆ ಬರೆದ ಸಿಡ್ನಿ ಥಂಡರ್!

Sydney Thunder

ಸಿಡ್ನಿ: ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಶುಕ್ರವಾರದ ಬಿಗ್ ಬ್ಯಾಷ್ ಲೀಗ್‌ ಪಂದ್ಯದಲ್ಲಿ ಸಿಡ್ನಿ ಥಂಡರ್ ಕೇವಲ 15 ರನ್‌ಗಳಿಗೆ ಆಲೌಟ್ ಆಗುವ ಮೂಲಕ 124 ರನ್‌ ಹೀನಾಯ ಸೋಲು ಕಂಡಿದೆ. ಇದು ತಂಡವೊಂದು ಟಿ20 ಕ್ರಿಕೆಟ್​ ನಲ್ಲಿ ಗಳಿಸಿದ ಅತ್ಯಂತ ಕಡಿಮೆ ಸ್ಕೋರ್ ಆಗಿದೆ.

ಈ ಪಂದ್ಯದಲ್ಲಿ ಕೇವಲ 35 ಎಸೆತಗಳನ್ನು ಎದುರಿಸಿದ ಸಿಡ್ನಿ ಥಂಡರ್ ತಂಡ ಅಲೆಕ್ಸ್ ಹೇಲ್ಸ್, ದಕ್ಷಿಣ ಆಫ್ರಿಕಾದ ಹಾರ್ಡ್ ಹಿಟ್ಟರ್​ ರಿಲೆ ರುಸೊ ಅವರಂತಹ ಸ್ಟಾರ್​ ಬ್ಯಾಟ್ಸ್​ಮನ್​ಗಳ ಬಳಗವನ್ನೇ ಹೊಂದಿದ್ದರೂ ಮುಜುಗರ ಸೋಲಿಗೆ ತುತ್ತಾಗಿದೆ. ಇದು ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲಿ ತಂಡವೊಂದು ಗಳಿಸಿದ ಅತ್ಯಂತ ಕಡಿಮೆ ಸ್ಕೋರ್​ ಆಗಿದೆ. ಇದಕ್ಕೂ ಮೊದಲು 2015ರಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡ 57 ರನ್‌ಗಳಿಗೆ ಆಲೌಟ್ ಆಗಿತ್ತು.

ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಅಡಿಲೇಡ್ ಸ್ಟ್ರೈಕರ್ಸ್ ಕ್ರಿಸ್ ಲಿನ್ (33 ರನ್) ಹಾಗೂ ಕಾಲಿನ್ ಡಿ ಗ್ರಾಂಡ್​ಹೋಮ್​ (36 ರನ್) ಅವರ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 139 ರನ್ ಗಳಿಸಿತು. ಸುಲಭ ಗುರಿ ಬೆನ್ನಟ್ಟಿದ ಸಿಡ್ನಿ ಥಂಡರ್​ನ ಬ್ಯಾಟರ್​ಗಳು ತರಗೆಲೆಯಂತೆ ಉದುರಿದ ಪರಿಣಾಮ ಕೇವಲ 5.5 ಓವರ್​ಗಳಲ್ಲಿ 15 ರನ್​ಗಳಿಗೆ ಸರ್ವಪತನ ಕಂಡಿತು. ಅಡಿಲೇಡ್ ಸ್ಟ್ರೈಕರ್ಸ್ ಪರ ಹೆನ್ರಿ ಥಾರ್ಟನ್ ಐದು ವಿಕೆಟ್‌ ಕಿತ್ತು ಮಿಂಚಿದರು. ಉಳಿದಂತೆ ವೆಸ್ ಅಗರ್ 4, ಮ್ಯಾಥ್ಯೂ ಶಾರ್ಟ್ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ | INDvsBAN | ಗಿಲ್​, ಪೂಜಾರ ಶತಕ; ಬಾಂಗ್ಲಾ ವಿರುದ್ಧದ ಟೆಸ್ಟ್​​ನ 3ನೇ ದಿನ ಭಾರತಕ್ಕೆ 471 ರನ್​ ಭರ್ಜರಿ ಮುನ್ನಡೆ

Exit mobile version