ಢಾಕಾ : ಭಾರತ ತಂಡದ ಮಾಜಿ ಆಟಗಾರ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ತರಬೇತುದಾರ ಎಸ್ ಶ್ರೀರಾಮ್ ಅವರಿಗೆ ಬಾಂಗ್ಲಾದೇಶ ಸೀಮಿತ ಓವರ್‌ಗಳ ಪುರುಷರ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗುವ ಅವಕಾಶ ಒದಗಿ ಬಂದಿದೆ. ಮುಂದಿನ ಟಿ೨೦ ವಿಶ್ವ ಕಪ್‌ಗೆ ಅವರಿಗೆ ಕೋಚಿಂಗ್ ಜವಾಬ್ದಾರಿ ನೀಡಲು Bangladesh Cricket Board ಮುಂದಾಗಿದೆ.
ಎಸ್ ಶ್ರೀರಾಮ್ ಅವರು ೨೦೦೦ರಿಂದ ೨೦೦೪ರವೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದ ಅವರು ಕೋಚಿಂಗ್ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿದ್ದರು. ೪೬ ವರ್ಷದ ಅವರು ಅಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಹಾಗೂ ಸಹಾಯಕ ಕೋಚ್ ಅಗಿ ಕಾರ್ಯನಿರ್ವಹಿಸಿದ್ದರು. ಇದರ ಜತೆಗೆ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್‌ಸಿಬಿಗೆ ಹೆಚ್ಚು ಸಮಯ ಮೀಸಲಿಡುವ ಉದ್ದೇಶದಿಂದ ಅವರು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಹುದ್ದೆಗೆ ನಿವೃತ್ತಿ ಘೋಷಿಸಿದ್ದರು.
ಬಿಸಿಬಿ ನಿರ್ದೇಶಕರ ಹೇಳಿಕೆಯನ್ನು ಪತ್ರಿಕೆಯೊಂದು ವರದಿ ಮಾಡಿದೆ . “ಹೌದು ನಾವು ಮುಂದಿನ ೨೦೨೨ ವಿಶ್ವ ಕಪ್‌ಗಾಗಿ ಎಸ್ . ಶ್ರೀರಾಮ್ ಅವರನ್ನು ಹೆಡ್ ಕೋಚ್ ಆಗಿ ನೇಮಕ ಮಾಡಲು ಮುಂದಾಗಿದ್ದೇವೆ. ವಿಶ್ವ ಕಪ್ ಆಡಲು ಆಸ್ಟ್ರೇಲಿಯಾಗೆ ತೆರಳಬೇಕಾಗಿರುವ ನಾವು ಹೊಚ್ಚ ಹೊಸ ವ್ಯವಸ್ಥೆಯನ್ನು ಸೃಷ್ಟಿಸಬೇಕಾಗಿದೆ. ಅದಕ್ಕಾಗಿ ಶ್ರೀರಾಮ್ ಅವರನ್ನು ಅಯ್ಕೆ ಮಾಡಲು ಮುಂದಾಗಿದ್ದೇವೆ,” ಎಂಬ ಹೇಳಿಕೆಯನ್ನು ಪ್ರಕಟಿಸಿದೆ.
ವೆಸ್ಟ್ ಇಂಡೀಸ್ ಮಾಜಿ ಆಟಗಾರ ರಸೆಲ್ ಡೊಮೆಂಗೊ ಅವರು ಬಾಂಗ್ಲಾದೇಶ ಟೆಸ್ಟ್ ತಂಡದ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂಬುದಾಗಿಯೂ ಪತ್ರಿಕೆ ವರದಿ ಮಾಡಿದೆ.
ಇನ್ನೂ ಇದೆ | IPL 2023 | ಇಂಗ್ಲೆಂಡ್ ತಂಡದ ಮಾಜಿ ನಾಯಕನನ್ನು ಕೋಚಿಂಗ್ ವಿಭಾಗಕ್ಕೆ ಸೇರಿಲು ಪಂಜಾಬ್ ಉತ್ಸುಕ