ಪರ್ತ್ : ವಿರಾಟ್ ಕೊಹ್ಲಿ ಫೇಕ್ ಫೀಲ್ಡಿಂಗ್ ಪ್ರಸಂಗ ದೂರಿನ ಮಟ್ಟಕ್ಕೆ ತಿರುಗುವ ಸೂಚನೆ ಕೊಟ್ಟಿದೆ. ಟೀಮ್ ಇಂಡಿಯಾ ವಿರುದ್ಧ ಅಂಪೈರ್‌ಗಳು ಕ್ರಮ ಕೈಗೊಂಡಿಲ್ಲ ಎಂಬುದಾಗಿ ಐಸಿಸಿಗೆ ದೂರು ನೀಡಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಪ್ರಮುಖವಾಗಿ ಅಂಪೈರ್‌ಗಳ ಕ್ರಮಗಳ ಬಗ್ಗೆ ಬಾಂಗ್ಲಾದೇಶ ತಂಡ ಅಸಮಾಧಾನ ವ್ಯಕ್ತಪಡಿಸಿದೆ.
ಮಳೆಯಿಂದ ಬಾಧಿತವಾಗಿದ್ದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಐದು ರನ್‌ಗಳಿಂದ ಸೋಲು ಕಂಡಿತ್ತು. ಈ ಸೋಲಿಗೆ ಅಂಪೈರ್‌ಗಳೇ ಕಾರಣ ಎಂಬುದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಆರೋಪವಾಗಿದೆ. ವಿರಾಟ್ ಕೊಹ್ಲಿ ಇನಿಂಗ್ಸ್‌ನ ಏಳನೇ ಓವರ್‌ನಲ್ಲಿ ಫೇಕ್ ಫೀಲ್ಡಿಂಗ್ ಮಾಡಿದ್ದರು ಎಂದು ಬಾಂಗ್ಲಾದೇಶದ ಫೀಲ್ಡರ್ ನೂರುಲ್ ಹಸನ್ ಅರೋಪಿಸಿದ್ದರು.
ಐಸಿಸಿಯ ಹೊಸ ನಿಯಮದ ಪ್ರಕಾರ ಫೇಕ್ ನಿಯಮ ಸಾಬೀತಾದರೆ ಐದು ಪೆನಾಲ್ಟಿ ರನ್‌ಗಳನ್ನು ಅಂಪೈರ್‌ಗಳು ವಿಧಿಸಬೇಕು. ಅಂತೆಯೇ ವಿರಾಟ್ ಕೊಹ್ಲಿಯ ವರ್ತನೆಗಾಗಿ ಅಂಪೈರ್‌ಗಳು ಭಾರತ ತಂಡಕ್ಕೆ ಪೆನಾಲ್ಟಿ ವಿಧಿಸಬೇಕಿತ್ತು. ಆದರೆ ಅಂಪೈರ್‌ಗಳು ಭಾರತಕ್ಕೆ ದಂಡ ವಿಧಿಸಿಲ್ಲ. ನಾಯಕ ಶಕಿಬ್ ಅಲ್ ಹಸನ್ ಮಾಡಿದ ಮನವಿಯನ್ನೂ ಅಂಪೈರ್‌ಗಳು ತಿರಸ್ಕರಿಸಿದ್ದಾರೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಆರೋಪಿಸಿದೆ.
ಮಳೆ ಬಂದು ಮೈದಾನ ತೇವಗೊಂಡಿದ್ದ ಕಾರಣ ಪಂದ್ಯವನ್ನು ಇನ್ನಷ್ಟು ಹೊತ್ತು ತಡವಾಗಿ ಆರಂಭಿಸಲು ಶಕಿಬ್ ಮಾಡಿದ ಮನವಿಯನ್ನೂ ಅಂಪೈರ್‌ಗಳು ತಿರಸ್ಕರಿಸಿದ್ದರು ಎಂಬುದಾಗಿ ಬಿಸಿಬಿ ಆರೋಪಿಸಿದೆ.
ಇದನ್ನೂ ಓದಿ | ICC AWARD | ಐಸಿಸಿಯ ಅಕ್ಟೋಬರ್ ತಿಂಗಳ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ವಿರಾಟ್ ಕೊಹ್ಲಿ ನಾಮ ನಿರ್ದೇಶನ