Site icon Vistara News

BCCI AGM: ಅತಿಥಿ ಕ್ರಿಕೆಟ್ ಆಟಗಾರರಿಗೆ ಶಾಕ್​ ನೀಡಿದ ಬಿಸಿಸಿಐ

Indian domestic cricket players

ಮುಂಬಯಿ: ತವರು ರಾಜ್ಯ ಬಿಟ್ಟು ಬೇರೆ ರಾಜ್ಯ ತಂಡಗಳಿಗೆ ಆಡುವ ಅತಿಥಿ ಆಟಗಾರರಿಗೆ(Guest players) ಬಿಸಿಸಿಐ(BCCI) ದೊಡ್ಡ ಶಾಕ್​ ನೀಡಿದೆ. ಈ ರೀತಿ ಆಡುವ ಆಟಗಾರರಿಗೆ ಹೆಚ್ಚುವರಿ ವೇತನ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದೆ. ವಾರ್ಷಿಕ ಸಾಮಾನ್ಯ ಸಭೆಯಲ್ಲಿ(BCCI AGM) ಬಿಸಿಸಿಐ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಎಲ್ಲ ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಕೂಡ ಬಿಸಿಸಿಐಯ ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದೆ ಎಂದು ತಿಳಿದುಬಂದಿದೆ.

ನಿಯಮ ಜಾರಿ ಯಾವಾಗ?

ಈ ನಿಯಮವು ಸದ್ಯ ಇದೇ ವರ್ಷದಿಂದ ಜಾರಿಗೆ ಬರಲಿದೆಯಾ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ನಿಯಮದ ಪ್ರಕಾರ ಪ್ರತಿ ರಾಜ್ಯ ಸಂಸ್ಥೆಯು ಗರಿಷ್ಠ ಮೂವರು ಹೊರರಾಜ್ಯದ ಅತಿಥಿ ಕ್ರಿಕೆಟಿಗರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಬಹುದಾಗಿದೆ. ಕೆಲ ತಂಡಗಳು ಹೊರ ರಾಜ್ಯದ ಸ್ಟಾರ್​ ಆಟಗಾರರನ್ನು ತಮ್ಮ ತಂಡಕ್ಕೆ ಆಹ್ವಾನಿಸಿ ಅವರಿಗೆ ಪಂದ್ಯದ ಸಂಭಾವನೆಯ ಜತೆ ಹೆಚ್ಚುವರಿ ವೇತನವನ್ನೂ ನೀಡುತ್ತಿತ್ತು. ಆದರೆ ಇನ್ನು ಮುಂದೆ ಇದು ಅಸಾಧ್ಯವಾಗಿದೆ. ಇದಕ್ಕೆ ಬಿಸಿಸಿಐ ಕಡಿವಾಣ ಹಾಕಲು ಮುಂದಾಗಿದೆ. ಬಿಸಿಸಿಐ ಈ ನಿರ್ಧಾರದಿಂದ ಅತಿಥಿಯಾಗಿ ಆಡಿ ಉತ್ತಮ ವೇತನ ಪಡೆಯುತ್ತಿದ್ದ ಕ್ರಿಕೆಟಿಗರಿಗೆ ಹಿನ್ನಡೆಯಾಗಿದೆ.

ಬಿಸಿಸಿಐ ಪ್ರಕಾರ ಅತಿಥಿ ಆಟಗಾರರನ್ನೂ ತಂಡದ ಉಳಿದೆಲ್ಲಾ ಆಟಗಾರರಂತೆಯೇ ಕಾಣಬೇಕು ಮತ್ತು ಎಲ್ಲ ಆಟಗಾರರಿಗೆ ಸಮಾನದ ವೇತನ ನೀಡುಬೇಕು ಎಂದು ರಾಜ್ಯ ಸಂಸ್ಥೆಗಳಿಗೆ ಸೂಚಿಸಿದೆ. ಈಗಾಗಕೇ ಬಿಸಿಸಿಐ ರಾಷ್ಟ್ರೀಯ ಮಹಿಳಾ ಮತ್ತು ಪುರುಷರ ತಂಡದ ಆಟಗಾರರಿಗೆ ಸಮಾನ ವೇತನ ಪದ್ಧತಿ ಜಾರಿ ಮಾಡಿ ಲಿಂಗ ಸಮಾನತೆಯನ್ನು ಪಾಲಿಸುತ್ತಿದೆ.

ಇದನ್ನೂ ಓದಿ BCCI News: ವಯಾಕಾಮ್ 18ಗೆ ಭಾರತದ ತವರು ಪಂದ್ಯಗಳ ಪ್ರಸಾರದ ಹಕ್ಕು; ಬಿಸಿಸಿಐಗೆ ಹರಿದು ಬರಲಿದೆ ಕೋಟಿ ಮೊತ್ತ

ದಾಲ್ಮಿಯಾ, ಧುಮಾಲ್ ಪುನರಾಯ್ಕೆ

ಇದೇ ಸಭೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ ಆಡಳಿತ ಸಮಿತಿಯ ಮುಖ್ಯಸ್ಥರಾಗಿ ಅರುಣ್​ ಸಿಂಗ್ ಧುಮಾಲ್ ಮತ್ತು ಬಂಗಾಳ ಕ್ರಿಕೆಟ್ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಅವಿಷೇಕ್ ದಾಲ್ಮಿಯಾ ಅವರನ್ನು ಐಪಿಎಲ್ ಸಮಿತಿಗೆ ಮರು ಆಯ್ಕೆ ಮಾಡಲಾಯಿತು.

ಕಳೆದ ವರ್ಷದಲ್ಲಿ ಬಿಸಿಸಿಐ ಆದಾಯದಲ್ಲಿ ಗಣನೀಯ ಪ್ರಮಾಣದ ಹೆಚ್ಚಳವಾಗಿದೆ. ಐಸಿಸಿಯ ಆದಾಯಕ್ಕಿಂತಲೂ ಶೇ 38ರಷ್ಟು ಹೆಚ್ಚು ಬಿಸಿಸಿಐ ಗಳಿಕೆಯಿದೆ. ಮುಂಬರುವ ಐದು ವರ್ಷಗಳಲ್ಲಿ ನಡೆಯುವ ದ್ವಿಪಕ್ಷೀಯ ಸರಣಿಗಳ ಮಾಧ್ಯಮ ಹಕ್ಕುಗಳನ್ನು ಬಿಡ್‌ ಮಾಡಲಾಗಿದ್ದು ಪಂದ್ಯವೊಂದಕ್ಕೆ ಅಂದಾಜು 67 ಕೋಟಿ ಪಡೆಯುವ ನಿರೀಕ್ಷೆ ಇದೆ.

ವಯಾಕಾಮ್ 18ಗೆ ಭಾರತದ ತವರು ಪಂದ್ಯಗಳ ಪ್ರಸಾರದ ಹಕ್ಕು

ಮುಂದಿನ 5 ವರ್ಷಗಳ ಕಾಲ ಭಾರತದಲ್ಲಿ ನಡೆಯುವ ತವರು ಪಂದ್ಯಗಳ ನೇರಪ್ರಸಾರದ ಹಕ್ಕನ್ನು ವಯಾಕಾಮ್ 18(Viacom18) ಪಡೆದುಕೊಂಡಿದೆ. ಒಪ್ಪಂದ ಪ್ರಕಾರ ಭಾರತೀಯ ಕ್ರಿಕೆಟ್ ತಂಡದ ತವರು ಪಂದ್ಯಗಳಿಗೆ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು(BCCI TV And Digital Media Rights) ವಯಾಕಾಮ್ 18 ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಐದು ವರ್ಷಗಳ ಅವಧಿಯುಲ್ಲಿ ಇದೇ ವರ್ಷ ತವರಿನಲ್ಲಿ ನಡೆಯುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳ ಸರಣಿಯೂ ಒಳಗೊಂಡಿದೆ. ಒಟ್ಟಾರೆಯಾಗಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮುಂದಿನ ಐದು ವರ್ಷಗಳಲ್ಲಿ ಪೂರ್ವ ನಿಗದಿಯಾದಂತೆ ಒಟ್ಟು 21 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಐದು ಟೆಸ್ಟ್ ಪಂದ್ಯಗಳು, ಆರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಹತ್ತು ಟ್ವೆಂಟಿ 20 ಪಂದ್ಯಗಳು ಸೇರಿವೆ. ಈ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾದರೂ ಅಚ್ಚರಿಯಿಲ್ಲ.

Exit mobile version