ಬೆಂಗಳೂರು: ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಅಭಿಷೇಕ್ ನಾಯರ್ ಮತ್ತು ರಯಾನ್ ಟೆನ್ ಡೊಸ್ಚಾಟ್ ಅವರನ್ನು ಸಹಾಯಕ ತರಬೇತುದಾರರಾಗಿ ನೇಮಕ ಮಾಡಲಾಗಿದೆ ಎಂದು ಹೊಸದಾಗಿ ಆಯ್ಕೆಯಾಗಿರುವ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಗಂಭೀರ್ ಮುಂಬೈನಲ್ಲಿ ನಡೆಸಿದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ಈ ಮೂಲಕ ಗಂಭೀರ್ ಬೇಡಿಕೆಗೆಳನ್ನು ಬಿಸಿಸಿಐ ತಿರಸ್ಕರಿಸಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿದರು. ಎಲ್ಲದಕ್ಕೂ ಒಪ್ಪಿದೆ ಎಂಬುದನ್ನು ಒತ್ತಿ ಹೇಳಿದರು. ಶ್ರೀಲಂಕಾ ಪ್ರವಾಸಕ್ಕೆ ಹೊರಡಲಿರುವ ಹಿನ್ನೆಲೆಯಲ್ಲಿ ಆಯ್ಕೆಗಾರ ಅಜಿತ್ ಅಗರ್ಕರ್ ಜತೆ ಮಾಧ್ಯಮಗೋಷ್ಠಿ ನಡೆಸಿದರು.
🗣️ A happy and secure dressing room is a winning dressing room: #TeamIndia Head Coach @GautamGambhir#SLvIND pic.twitter.com/ZJnNuUuWNY
— BCCI (@BCCI) July 22, 2024
ಐಪಿಎಲ್ 2024 ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ನ ಯಶಸ್ವಿ ಅಭಿಯಾನದ ಸಮಯದಲ್ಲಿ ಈ ಮೂವರು ಇತ್ತೀಚೆಗೆ ಒಟ್ಟಿಗೆ ಕೆಲಸ ಮಾಡಿದ್ದರಿಂದ ನಾಯರ್ ಮತ್ತು ಟೆನ್ ಡೊಸ್ಚಾಟ್ ಅವರ ನೇಮಕವು ಅವರೆಲ್ಲರ ಪುನರ್ಮಿಲ ಎಂದೇ ಕರೆಯಬಹುದು. ಅವರ ಸಹಯೋಗದಿಂದ ಕೆಕೆಆರ್ ಒಂದು ದಶಕ ಬಳಿಕ ತಮ್ಮ ಮೊದಲ ಟ್ರೊಫಿ ಗೆದ್ದಿತು. ಈ ಸಾಧನೆಯು ಅವರೆಲ್ಲರವನ್ನೂ ರಾಷ್ಟ್ರೀಯ ಸೆಟಪ್ಗೆ ಕರೆತರುವ ಗಂಭೀರ್ ಅವರ ನಿರ್ಧಾರದ ಮೇಲೆ ಪ್ರಭಾವ ಬೀರಿತು.
ರಯಾನ್ (ಟೆನ್ ಡೊಸ್ಚಾಟೆ) ಮತ್ತು ಅಭಿಷೇಕ್ (ನಾಯರ್) ಅವರಂತಹ ಜನರು ನನ್ನೊಂದಿಗೆ ಕೆಲಸ ಮಾಡಿದವರು. ನಾನು ಆಟಗಾರರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದೇನೆ. ಟಿ.ದಿಲೀಪ್ ಫೀಲ್ಡಿಂಗ್ ಕೋಚ್ ಆಗಿ ಮುಂದುವರಿಯಲಿದ್ದಾರೆ. ಶ್ರೀಲಂಕಾ ಪ್ರವಾಸಕ್ಕೆ ಸಾಯಿರಾಜ್ ಬಹುತುಲೆ ಅವರನ್ನು ಮಧ್ಯಂತರ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ, “ಎಂದು ಗಂಭೀರ್ ಹೇಳಿದರು.
ಬಿಸಿಸಿಐ ಬೆಂಬಲಕ್ಕೆ ಸಮ್ಮತಿ
2024ರ ಟಿ 20 ವಿಶ್ವಕಪ್ನಲ್ಲಿ ಭಾರತದ ವಿಜಯದ ನಂತರ ದ್ರಾವಿಡ್ ಅವರಿಂದ ಅಧಿಕಾರ ವಹಿಸಿಕೊಂಡ ಗಂಭೀರ್, ಬಿಸಿಸಿಐ ಬೆಂಬಲದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. “ನಿಜವಾಗಿಯೂ ಸಂತೋಷವಾಗಿದೆ. ಬಿಸಿಸಿಐ. ನಾನು ಕೇಳಿದ ಹೆಚ್ಚಿನ ಬೇಡಿಕೆಗಗಳಿಗೆ ಒಪ್ಪಿಕೊಂಡಿದೆ. ನಾನು ಈ ವಿಷಯವನ್ನು ಮುಂದುವರಿಸುತ್ತಲೇ ಇರುತ್ತೇನೆ. ಸಹಾಯಕ ಸಿಬ್ಬಂದಿಯ ನೆರವು ಹಾಗೆಯೇ ಉಳಿಯುತ್ತದೆ. ಉಳಿದ ಸಿಬ್ಬಂದಿಯನ್ನು ಶ್ರೀಲಂಕಾ ಪ್ರವಾಸದ ನಂತರ ಅಂತಿಮಗೊಳಿಸಲಾಗುವುದು, “ಎಂದು ಗಂಭೀರ್ ಹೇಳಿದ್ದಾರೆ.
ಇದನ್ನೂ ಓದಿ: Olympics 2024 : ತಮ್ಮ ಲಗೇಜ್ಗಳನ್ನೇ ಮರೆತು ಪ್ಯಾರಿಸ್ ತಲುಪಿದ ಆಸ್ಟ್ರೇಲಿಯಾದ ಮಹಿಳೆಯರ ಫುಟ್ಬಾಲ್ ತಂಡ
ಜುಲೈ 27 ರಿಂದ ಪ್ರಾರಂಭವಾಗುವ ಮೂರು ಟಿ 20 ಮತ್ತು ಮೂರು ಏಕದಿನ ಪಂದ್ಯಗಳು ಸೇರಿದಂತೆ ಶ್ರೀಲಂಕಾ ಪ್ರವಾಸದೊಂದಿಗೆ ಹೊಸ ತಂಡ ತಕ್ಷಣದ ಸವಾಲನ್ನು ಎದುರಿಸುತ್ತಿದೆ. ಈ ಸರಣಿಯೊಂದಿಗೆ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧದ ತವರು ಸರಣಿ ಸೇರಿದಂತೆ ಅಂತಾರಾಷ್ಟ್ರೀಯ ವೇಳಾಪಟ್ಟಿ ಆರಂಭಗೊಳ್ಳುತ್ತದೆ. ನಂತರ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.
ದೇಶೀಯ ಕ್ರಿಕೆಟ್ ಅನುಭವದ ಸಂಪತ್ತನ್ನು ಹೊಂದಿರುವ ಭಾರತದ ಮಾಜಿ ಆಲ್ರೌಂಡರ್ ನಾಯರ್ ತಂಡಕ್ಕೆ ಅಮೂಲ್ಯ ನೆರವು ನೀಡಲಿದ್ದಾರೆ. ಈ ಹಿಂದೆ ದಿನೇಶ್ ಕಾರ್ತಿಕ್, ವರುಣ್ ಚಕ್ರವರ್ತಿ ಮತ್ತು ರಿಂಕು ಸಿಂಗ್ ಅವರಂತಹ ಆಟಗಾರನ್ನು ಹುರಿದುಂಬಿಸಿದ ಅನುಭವ ಅವರಿಗೆ ಇದೆ ಅವರ ಕೌಶಲಗಳು ಯುವ ಪ್ರತಿಭೆಗಳನ್ನು ಪೋಷಿಸುವಲ್ಲಿ ನಿರ್ಣಾಯಕವೆಂದು ಹೇಳಲಾಗುತ್ತಿದೆ.
ನೆದರ್ಲ್ಯಾಂಡ್ಸ್ನ ಮಾಜಿ ಆಲ್ರೌಂಡರ್ ಟೆನ್ ಡೊಸ್ಚಾಟ್ ಅವರು ಮೇಜರ್ ಲೀಗ್ ಕ್ರಿಕೆಟ್ನಲ್ಲಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಪರ ಆಡಿದ್ದರು. ನಂತರ ಅಂತಾರರಾಷ್ಟ್ರೀಯ ದೃಷ್ಟಿಕೋನ ಮತ್ತು ಇತ್ತೀಚಿನ ಕೋಚಿಂಗ್ ಅನುಭವ ಹೊಂದಿದ್ದಾರೆ.