Site icon Vistara News

Ranji Trophy : ಮುಂದಿನ ಋತುವಿನ ರಣಜಿ ಟ್ರೋಫಿಯ ದಿನಾಂಕ ಬಹಿರಂಗ

Ranaji Trophy

#image_title

ಮುಂಬಯಿ: 2023-24ರ ದೇಶೀಯ ಕ್ರಿಕೆಟ್ ಋತುವಿನ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ. ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯಾದ ರಣಜಿ ಟ್ರೋಫಿ (Ranji Trophy) 2024ರ ಜನವರಿ 5ರಿಂದ ಆರಂಭವಾಗಲಿದೆ. ಲೀಗ್ ಹಂತವು ಫೆಬ್ರವರಿ 19ರಂದು ಕೊನೆಗೊಳ್ಳಲಿದೆ. ನಾಕೌಟ್ ಸುತ್ತುಗಳು ಫೆಬ್ರವರಿ 23 ರಂದು ಪ್ರಾರಂಭವಾಗಲಿದ್ದು, ಪಂದ್ಯಾವಳಿಯು ಮಾರ್ಚ್ 14 ರಂದು ಕೊನೆಗೊಳ್ಳಲಿದೆ.

ದುಲೀಪ್ ಟ್ರೋಫಿ 2023-24ರ ದೇಶೀಯ ಋತುವನ್ನು ಜೂನ್ 28 ರಿಂದ ಜುಲೈ 16 ರವರೆಗೆ ಪ್ರಾರಂಭಿಸಲಿದ್ದು, ನಂತರ ದಿಯೋಧರ್ ಟ್ರೋಫಿ ಜುಲೈ 24 ರಿಂದ ಆಗಸ್ಟ್ 4 ರವರೆಗೆ ನಡೆಯಲಿದೆ. ಪ್ರಸ್ತುತ ರಣಜಿ ಟ್ರೋಫಿ ಚಾಂಪಿಯನ್ ಸೌರಾಷ್ಟ್ರ ಮತ್ತು ರೆಸ್ಟ್ ಆಫ್ ಇಂಡಿಯಾ ಆಡುವ ಇರಾನಿ ಟ್ರೋಫಿ ಅಕ್ಟೋಬರ್ 1ರಿಂದ 5 ರವರೆಗೆ ನಡೆಯಲಿದೆ ಎಂದು ಕ್ರಿಕ್​ಬಜ್​​ ವರದಿ ಮಾಡಿದೆ.

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಅಕ್ಟೋಬರ್ 16ರಿಂದ ನವೆಂಬರ್ 6ರವರೆಗೆ, ವಿಜಯ್ ಹಜಾರೆ ಟ್ರೋಫಿ ನವೆಂಬರ್ 23ರಿಂದ ಡಿಸೆಂಬರ್ 15ರವರೆಗೆ ಆಯೋಜನೆಗೊಂಡಿದೆ. ಎರಡೂ ಪಂದ್ಯಾವಳಿಗಳಲ್ಲಿ ಎಲೈಟ್ ಮತ್ತು ಪ್ಲೇಟ್ ಎಂಬ ಎರಡು ವಿಭಾಗಗಳು ಇರಲಿವೆ. ಎಲೈಟ್ ವಿಭಾಗವು ಎಂಟು ತಂಡಗಳ ಮೂರು ಗುಂಪುಗಳನ್ನು ಒಳಗೊಂಡಿದ್ದರೆ, ಪ್ಲೇಟ್ ಏಳು ತಂಡಗಳ ಎರಡು ಗುಂಪುಗಳನ್ನು ಒಳಗೊಂಡಿರುತ್ತದೆ.

ರಣಜಿ ಟ್ರೋಫಿಯಲ್ಲಿ ಎಲೈಟ್ ಮತ್ತು ಪ್ಲೇಟ್ ಎಂಬ ಎರಡು ವಿಭಾಗಗಳು ಇರಲಿದ್ದು, ಅಗ್ರ ವಿಭಾಗದಲ್ಲಿ ಎಂಟು ತಂಡಗಳ ನಾಲ್ಕು ಗುಂಪುಗಳು ಇರಲಿವೆ ಮತ್ತು ಕೆಳಗಿನ ವಿಭಾಗವು ಆರು ತಂಡಗಳ ಒಂದು ಗುಂಪನ್ನು ಒಳಗೊಂಡಿರುತ್ತದೆ. ಎಲೈಟ್ ವಿಭಾಗದ ಒಂದು ತಂಡವು ಚಾಂಪಿಯನ್​ ಆಗಲು 10 ಪಂದ್ಯಗಳನ್ನು ಆಡಬೇಕು. ಇದರಲ್ಲಿ ಏಳು ಲೀಗ್ ಪಂದ್ಯಗಳು ಸೇರಿವೆ, ನಂತರ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್.

ಇದನ್ನೂ ಓದಿ : Team India : ಟೀಮ್​ ಇಂಡಿಯಾಗೆ ಗುಡ್​ ನ್ಯೂಸ್​, ಶೀಘ್ರದಲ್ಲೇ ಬುಮ್ರಾ ತಂಡಕ್ಕೆ ವಾಪಸ್​​

ನಾಲ್ಕು ಎಲೈಟ್ ಗುಂಪುಗಳಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ. ಪ್ಲೇಟ್ ವಿಭಾಗದಲ್ಲಿ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಲಿವೆ. ಪ್ಲೇಟ್ ಗ್ರೂಪ್ ಫೈನಲಿಸ್ಟ್​ಗಳನ್ನು 2024-25ರ ಋತುವಿನಲ್ಲಿ ಎಲೈಟ್ ಗ್ರೂಪ್​​​ಗೆ ಬಡ್ತಿ ನೀಡಲಾಗುತ್ತದೆ. ಎಲೈಟ್ ಗುಂಪುಗಳಿಂದ ಕೊನೆಯ ಎರಡು ತಂಡಗಳನ್ನು ಅಂಕಗಳು, ಬೋನಸ್ ಅಂಕಗಳು, ಗೆಲುವುಗಳು ಮತ್ತು ಅಂಶಗಳ ಆಧಾರದ ಮೇಲೆ ಪ್ಲೇಟ್ ಗ್ರೂಪ್​​ಗೆ ಪ್ರವೇಶ ಪಡೆಯುತ್ತದೆ.

ತಂಡಗಳನ್ನು ಈ ರೀತಿ ಗುಂಪು ಮಾಡಲಾಗಿದೆ

ಎಲೈಟ್ ಗ್ರೂಪ್ ಎ: ಸೌರಾಷ್ಟ್ರ, ಜಾರ್ಖಂಡ್, ಮಹಾರಾಷ್ಟ್ರ, ರಾಜಸ್ಥಾನ, ವಿದರ್ಭ, ಹರ್ಯಾಣ, ಸರ್ವಿಸಸ್ ಮತ್ತು ಮಣಿಪುರ ತಂಡಗಳು ಈ ಗುಂಪಿನಲ್ಲಿವೆ.

ಎಲೈಟ್ ಗ್ರೂಪ್ ಬಿ: ಈ ಗುಂಪಿನಲ್ಲಿ ಬಂಗಾಳ, ಆಂಧ್ರ, ಮುಂಬೈ, ಕೇರಳ, ಛತ್ತೀಸ್ ಗಢ, ಉತ್ತರ ಪ್ರದೇಶ, ಅಸ್ಸಾಂ ಮತ್ತು ಬಿಹಾರ ತಂಡಗಳಿವೆ.

ಎಲೈಟ್ ಗ್ರೂಪ್ ಸಿ: ಕರ್ನಾಟಕ, ಪಂಜಾಬ್, ರೈಲ್ವೆ, ತಮಿಳುನಾಡು, ಗೋವಾ, ಗುಜರಾತ್, ತ್ರಿಪುರಾ ಮತ್ತು ಚಂಡೀಗಢ ತಂಡಗಳು ಈ ಗುಂಪಿನಲ್ಲಿವೆ.

ಎಲೈಟ್ ಗ್ರೂಪ್ ಡಿ: ಮಧ್ಯಪ್ರದೇಶ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಬರೋಡಾ, ದೆಹಲಿ, ಒಡಿಶಾ, ಪಾಂಡಿಚೆರಿ ಮತ್ತು ಜಮ್ಮು ಮತ್ತು ಕಾಶ್ಮೀರ ತಂಡಗಳು ಈ ಗುಂಪಿನಲ್ಲಿವೆ.

ಪ್ಲೇಟ್ ಗ್ರೂಪ್: ಎಲೈಟ್ 31, 32ನೇ ಸ್ಥಾನ; ಪ್ಲೇಟ್ ರ್ಯಾಂಕ್ 3, 4, 5, 6. ನಾಗಾಲ್ಯಾಂಡ್, ಹೈದರಾಬಾದ್, ಮೇಘಾಲಯ, ಸಿಕ್ಕಿಂ, ಮಿಜೋರಾಂ ಮತ್ತು ಅರುಣಾಚಲ ಪ್ರದೇಶ ತಂಡಗಳು ಈ ಗುಂಪಿನಲ್ಲಿವೆ.

Exit mobile version