Site icon Vistara News

Amol Muzumdar: ಭಾರತ ಮಹಿಳಾ ಕ್ರಿಕೆಟ್​ ತಂಡಕ್ಕೆ ಅಮೋಲ್ ಮಜುಂದಾರ್ ಮುಖ್ಯ ಕೋಚ್​

Amol Muzumdar is considered as the front-runner for the position of India women's head coach.

ಮುಂಬೈ: ಭಾರತ ಮಹಿಳಾ ಕ್ರಿಕೆಟ್​ ತಂಡದ(Indian women’s cricket team) ಕೋಚ್​ ಆಗಿ ದೇಶೀಯ ಕ್ರಿಕೆಟ್​ನ ಮಾಜಿ ಆಟಗಾರ ಅಮೋಲ್ ಮಜುಂದಾರ್(Amol Muzumdar) ಅವರನ್ನು ನೇಮಕ ಮಾಡಲಾಗಿದೆ. ಈ ವಿಚಾರವನ್ನು ಬಿಸಿಸಿಐ(BCCI) ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಕೆಲವು ತಿಂಗಳ ಹಿಂದೆ ಮುಖ್ಯ ಕೋಚ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶಿಸಿತ್ತು. ಈ ಹುದ್ದೆಗೆ ಮಜುಂದಾರ್ ಅವರನ್ನು ಆಯ್ಕೆ ಮಾಡಲಾಗಿತ್ತಾದರೂ ನೇಮಕಾತಿಗೆ ಧೀರ್ಘ ಕಾಲ ತೆಗೆದುಕೊಳ್ಳಲಾಗಿತ್ತು. ಸಂಪೂರ್ಣ ಸಮಾಲೋಚನೆ ನಂತರ ಮೂವರು ಸದಸ್ಯರ ಸಮಿತಿಯು ಮಜುಂದಾರ್ ಅವರನ್ನು ಹುದ್ದೆ ವಹಿಸಿಕೊಳ್ಳುವಂತೆ ಸರ್ವಾನುಮತದಿಂದ ಶಿಫಾರಸು ಮಾಡಿದೆ.

ರಮೇಶ್ ಪವಾರ್ ಸ್ಪಿನ್ ಬೌಲಿಂಗ್ ಸಲಹೆಗಾರರಾಗಿ ಬೆಂಗಳೂರು ಕೇಂದ್ರಕ್ಕೆ ಸ್ಥಳಾಂತರಗೊಂಡ ನಂತರ ಭಾರತದ ಮಾಜಿ ಬ್ಯಾಟರ್ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಸಿಬ್ಬಂದಿ ಹೃಷಿಕೇಶ್ ಕಾನಿಟ್ಕರ್ ಅವರು ತಂಡದ ಹಂಗಾಮಿ ಮುಖ್ಯ ಕೋಚ್ ಹೊಣೆ ಹೊತ್ತಿದ್ದರು. ಈಗ ಸಂಪೂರ್ಣವಾಗಿ ಮಜುಂದಾರ್ ಅವರು ಕೋಚ್​ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

30 ಶತಕ

48 ವರ್ಷದ ಮಜುಂದಾರ್ ಅವರು 21 ವರ್ಷಗಳ ಕಾಲ ಪ್ರಥಮ ದರ್ಜೆ ಕ್ರಿಕೆಟ್​ ಆಡಿದ ಅನುಭವ ಹೊಂದಿದ್ದಾರೆ. ಮುಂಬೈ ತಂಡ ನಾಯಕನಾಗಿಯೂ ಅವರು ಹಲವು ಸಾಧನೆ ಮಾಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ ವೃತ್ತಿಜೀವನದಲ್ಲಿ 171 ಪಂದ್ಯಗಳನ್ನು ಆಡಿ 30 ಶತಕ ಬಾರಿಸಿದ ಸಾಧನೆ ಅವರದ್ದಾಗಿದೆ. ಒಟ್ಟಾರೆ 11167 ರನ್​ ಬಾರಿಸಿದ್ದಾರೆ. 113 ಲಿಸ್ಟ್ ಎ ಪಂದ್ಯಗಳನ್ನು ಆಡಿ 3286 ರನ್​ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಒಳಗೊಂಡಿದೆ. ಆದರೆ ಭಾರತ ತಂಡದ ಪರ ಆಡಿಲ್ಲ.

ಇದನ್ನೂ ಓದಿ AUS vs NED: ದುಬಾರಿ ಮೊತ್ತ ನೀಡಿ ಅನಗತ್ಯ ದಾಖಲೆ ಬರೆದ ಬಾಸ್ ಡಿ ಲೀಡೆ

“ಮುಜುಂದಾರ್ ಅವರ ಆಧುನಿಕ ಕ್ರಿಕೆಟ್‌ ಜ್ಞಾನವನ್ನು ಪರಿಗಣಿಸಿ ಮುಖ್ಯ ಕೋಚ್ ಹುದ್ದೆಗೆ ನೇಮಕ ಮಾಡಲಾಗಿದೆ. ಅವರ ಕೋಚಿಂಗ್​ ಅವಧಿಯಲ್ಲಿ ಭಾರತಾ ಮಹಿಳಾ ತಂಡ ಶ್ರೇಷ್ಠ ಸಾಧನೆ ಮತ್ತು ಪ್ರದರ್ಶನ ತೋರುವ ಎಲ್ಲ ವಿಶ್ವಾಸವಿದೆ” ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ಏಷ್ಯನ್​ ಗೇಮ್ಸ್​ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಭಾರತ ಮಹಿಳಾ ಕ್ರಿಕೆಟ್​ ತಂಡ

ಇತ್ತೀಚೆಗೆ ಚೀನಾದಲ್ಲಿ ನಡೆದಿದ್ದ ಏಷ್ಯನ್​ ಗೇಮ್ಸ್​(Asian Games 2023) ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದ ಭಾರತ ಮಹಿಳಾ ಕ್ರಿಕೆಟ್​ ತಂಡ. ತನ್ನ ಮೊದಲ ಪ್ರಯತ್ನದಲ್ಲೇ ಐತಿಹಾಸಿಕ ಚಿನ್ನದ ಪದಕ ಜಯಿಸಿದ ಸಾಧನೆ ಮಾಡಿತ್ತು. ಫೈನಲ್​ನಲ್ಲಿ ಲಂಕಾ ವಿರುದ್ಧ ರೋಚಕ 19 ರನ್​ಗಳ ಗೆಲುವು ಸಾಧಿಸಿತ್ತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ್ದ ಭಾರತ ಜೆಮಿಮಾ ರೋಡ್ರಿಗಸ್​ ಅವರು ಸ್ಮೃತಿ ಮಂಧಾನ ಜತೆ ಸೇರಿಕೊಂಡು ತಾಳ್ಮೆಯುತ ಆಟದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 116 ರನ್​ ಬಾರಿಸಿತು. ಸುಲಭ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ಉತ್ತಮ ಆರಂಭ ಪಡೆದರೂ ಆ ಬಳಿಕ ನಾಟಕೀಯ ಕುಸಿತ ಕಂಡು  97 ರನ್​ ಗಳಿಶಲಷ್ಟೇ ಶಕ್ತವಾಗಿ ಸೋಲು ಕಂಡಿತ್ತು. ಗೆಲುವು ಕಂಡ ಹರ್ಮನ್​ಪ್ರೀತ್​ ಬಳಗ ಐತಿಹಾಸಿಕ ಚಿನ್ನ ಗೆದ್ದ ಸಾಧನೆ ಮಾಡಿದ್ದರು.

Exit mobile version