Site icon Vistara News

BCCI | ಟೀಮ್​ ಇಂಡಿಯಾ ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ನಿರ್ಧರಿಸಿದ ಬೈಜುಸ್‌, ಎಂಪಿಎಲ್ ಸ್ಪೋರ್ಟ್ಸ್!

byjus

ನವದೆಹಲಿ: ಟೀಮ್​ ಇಂಡಿಯಾದ ಎರಡು ಪ್ರಮುಖ ಪ್ರಾಯೋಜಕತ್ವ ಕಂಪನಿಗಳಾದ ಬೈಜುಸ್‌ ಮತ್ತು ಎಂಪಿಎಲ್ ಸ್ಪೋರ್ಟ್ಸ್ ಬಿಸಿಸಿಐ(BCCI)ನೊಂದಿಗಿನ ಒಪ್ಪಂದದಿಂದ ಹೊರಗುಳಿಯಲು ನಿರ್ಧರಿಸಿವೆ ಎಂದು ವರದಿಯಾಗಿದೆ.

ಭಾರತ ತಂಡಕ್ಕೆ ಪೋಷಾಕು ಪ್ರಾಯೋಜಕತ್ವ ನೀಡುತ್ತಿರುವ ಬೈಜುಸ್‌ ಸಂಸ್ಥೆ ಜೂನ್‌ನಲ್ಲಿ ತನ್ನ ಒಪ್ಪಂದವನ್ನು 293 ಕೋಟಿ ರೂ. ಮೊತ್ತಕ್ಕೆ 2023ರ ನವೆಂಬರ್‌ವರೆಗೆ ವಿಸ್ತರಿಸಿಕೊಂಡಿತ್ತು. ಆದರೆ ಇದೀಗ ಆರ್ಥಿಕ ಮುಗ್ಗಟ್ಟು ಸಮಸ್ಯೆಯಿಂದ ತನ್ನ ಒಪ್ಪಂದವನ್ನು ಕಡಿತಗೊಳಿಸಲು ಬಯಸಿದೆ. ಆದರೆ ಕನಿಷ್ಠ 2023ರ ಮಾರ್ಚ್‌ವರೆಗೆ ಮುಂದುವರಿಯುವಂತೆ ಕಂಪನಿಗೆ ಬಿಸಿಸಿಐ ಕೇಳಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಪಾಯೋಜಕತ್ವದ ಒಪ್ಪಂದದ ಹೊರಗುಳಿಯಲು ಬೈಜುಸ್‌ ಈ ವರ್ಷ ನವೆಂಬರ್ 4ರಂದು ಬಿಸಿಸಿಐಗೆ ಪತ್ರ ಬರೆದಿದೆ. ಒಪ್ಪಂದದ ಅನ್ವಯ ಪ್ರಾಯೋಜಕತ್ವ ಮುಂದುವರಿಸುವಂತೆ ನಾವು ಕೇಳಿಕೊಂಡಿದ್ದೇವೆ” ಎಂದು ಬಿಸಿಸಿಐ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ | IND VS BAN | ಪಂದ್ಯಶ್ರೇಷ್ಠ ಆಟಗಾರ ಕುಲ್​ದೀಪ್​ ಯಾದವ್​ ಕೈಬಿಟ್ಟ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸುನೀಲ್​ ಗವಾಸ್ಕರ್​!

Exit mobile version