Site icon Vistara News

Team India : ಈ ಎಲ್ಲ ಬ್ರಾಂಡ್​​ಗಳನ್ನು ಬ್ಯಾನ್ ಮಾಡಿದ ಬಿಸಿಸಿಐ! ಪಟ್ಟಿಯಲ್ಲಿರುವ ಉತ್ಪನ್ನಗಳು ಯಾವುವು?

BCCI

ಮುಂಬಯಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ಕ್ರಿಕೆಟ್ ತಂಡದ (Team India) ಪ್ರಮುಖ ಪ್ರಾಯೋಜಕತ್ವ ಹಕ್ಕುಗಳಿಗಾಗಿ ಆಸಕ್ತ ಉದ್ಯಮಗಳಿಂದ ಟೆಂಡರ್ ಆಹ್ವಾನಿಸಿದೆ. ಬ್ರಾಂಡಿಂಗ್ ವೆಚ್ಚದ ಕಡಿತವನ್ನು ಉಲ್ಲೇಖಿಸಿ ಎಜು-ಟೆಕ್ ಕಂಪನಿ ಬೈಜುಸ್ ಮಂಡಳಿಯೊಂದಿಗಿನ ತಮ್ಮ 35 ಮಿಲಿಯನ್ ಡಾಲರ್ ಒಪ್ಪಂದವನ್ನು ಕೊನೆಗೊಳಿಸಲು ನಿರ್ಧರಿಸಿದ ನಂತರ ಹೊಸ ಟೆಂಡರ್​ಗಳನ್ನು ಆಯ್ಕೆ ಮಾಡಿಕೊಳ್ಳಲು ಹೇಳಿದೆ.

ಭಾರತೀಯ ಕ್ರಿಕೆಟ್ ತಂಡದ ಎಲ್ಲಾ ಮಾದರಿಯ ಕ್ರಿಕೆಟ್​ನ ಪ್ರಮುಖ ಪ್ರಾಯೋಜಕತ್ವ ಪಡೆದುಕೊಂಡಿತ್ತು ಬೈಜುಸ್. ಬೈಜು ನಿರ್ಗಮನದೊಂದಿಗೆ, ಬಿಸಿಸಿಐ ಹೊಸ ಪ್ರಮುಖ ಪ್ರಾಯೋಜಕರನ್ನು ಹುಡುಕುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ಪ್ರತಿಷ್ಠಿತ ಅವಕಾಶಕ್ಕಾಗಿ ಬಿಡ್ ಮಾಡುವಂತೆ ಮಂಡಳಿಯು ಟೆಂಡರ್ ಗೆ ಆಹ್ವಾನ (ಐಟಿಟಿ) ಬಿಡುಗಡೆ ಮಾಡಿದೆ.

“ಬಿಡ್ ಸಲ್ಲಿಸಲು ಬಯಸುವ ಯಾವುದೇ ಆಸಕ್ತ ಪಕ್ಷವು ಐಟಿಟಿಯನ್ನು ಖರೀದಿಸಬೇಕಾಗುತ್ತದೆ. ಆದಾಗ್ಯೂ, ಐಟಿಟಿಯಲ್ಲಿ ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸುವವರು ಮತ್ತು ಅದರಲ್ಲಿ ನಿಗದಿಪಡಿಸಿದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟವರು ಮಾತ್ರ ಬಿಡ್ ಮಾಡಲು ಅರ್ಹರಾಗಿರುತ್ತಾರೆ. ಕೇವಲ ಐಟಿಟಿಯನ್ನು ಖರೀದಿಸುವುದರಿಂದ ಯಾವುದೇ ವ್ಯಕ್ತಿಗೆ ಬಿಡ್ ಮಾಡಲು ಅರ್ಹತೆ ಇರುವುದಿಲ್ಲ ಎಂದು ಬಿಸಿಸಿಐ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಪ್ರಾಯೋಜಕತ್ವದ ಹಕ್ಕುಗಳ ಬಿಡ್ ಈ ಬಾರಿ ಗಮನ ಸೆಳೆಯುವ ನಿರೀಕ್ಷೆಯಿದೆ. ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ವೇಳೆ ಭಾರತ ತಂಡದ ಜೆರ್ಸಿಯಲ್ಲಿ ಹೊಸ ಪ್ರಾಯೋಜಕರ ಹೆಸರು ಪ್ರಕಟವಾಗಲಿದೆ.

ಬಿಸಿಸಿಐ ಇತ್ತೀಚೆಗೆ ಪ್ರಸಿದ್ಧ ಕ್ರೀಡಾ ಉಡುಪು ತಯಾರಕ ಕಂಪನಿ ಅಡಿಡಾಸ್​ನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಅಧಿಕೃತ ಕಿಟ್ ಪ್ರಾಯೋಜಕರಾಗಿ ಅಡಿಡಾಸ್​ ಐದು ವರ್ಷಗಳ ಕಾಲ ಮುಂದುವರಿಯಲಿದೆ. ಪ್ರಮುಖ ಪ್ರಾಯೋಜಕರ ಸೇರ್ಪಡೆಯೊಂದಿಗೆ, ಅಡಿಡಾಸ್​ ಮತ್ತು ಹೊಸ ಬ್ರಾಂಡ್​ನ ಹೆಸರು ಆಟಗಾರರ ಜೆರ್ಸಿಯಲ್ಲಿ ಮಿಂಚಲಿದೆ.

ಕೆಲವು ಬ್ರಾಂಡ್ ಗಳ ಮೇಲೆ ನಿಷೇಧ ಹೇರಿದ ಬಿಸಿಸಿಐ

ಪ್ರಾಯೋಜಕತ್ವದ ಹಕ್ಕುಗಳಿಗಾಗಿ ಕೆಲವೊಂದು ಬ್ರಾಂಡ್​​ಗಳನ್ನು ಬಿಸಿಸಿಐ ನಿಷೇಧಿಸಿದೆ. ಈ ಬ್ರಾಂಡ್​​ಗಳ ಟೀಮ್ ಇಂಡಿಯಾದ ಶೀರ್ಷಿಕೆ ಪ್ರಾಯೋಜಕರಾಗಲು ಬಿಡ್ ಮಾಡಲು ಸಾಧ್ಯವಿಲ್ಲ. ಕ್ರೀಡಾ ಉಡುಪು ತಯಾರಕರು, ಆಲ್ಕೋಹಾಲ್ ಉತ್ಪನ್ನಗಳು, ಬೆಟ್ಟಿಂಗ್ ಕಂಪನಿಗಳು, ಕ್ರಿಪ್ಟೋಕರೆನ್ಸಿ ಘಟಕಗಳು, ರಿಯಲ್ ಮನಿ ಗೇಮಿಂಗ್ ಪ್ಲಾಟ್​ಫಾರ್ಮ್​ಗಳು (ಫ್ಯಾಂಟಸಿ ಸ್ಪೋರ್ಟ್ಸ್ ಗೇಮಿಂಗ್ ಹೊರತುಪಡಿಸಿ), ತಂಬಾಕು ಬ್ರಾಂಡ್​​ಗಳು, ಅಶ್ಲೀಲತೆ ಅಥವಾ ಸಾರ್ವಜನಿಕ ನೈತಿಕ ಅಪರಾಧದಂತಹ ಆಕ್ರಮಣಕಾರಿ ವಿಷಯಗಳಿಗೆ ಸಂಬಂಧಿಸಿದ ಉತ್ಪನ್ನಗಳಿಗೆ ಅವಕಾಶ ಇಲ್ಲ.

Exit mobile version