ಮುಂಬಯಿ: ಟೀಮ್ ಇಂಡಿಯಾದ(Team India) 2024-25ನೇ ಸಾಲಿನ ತವರಿನ ಕ್ರಿಕೆಟ್ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ. ಅಂತಾರಾಷ್ಟ್ರೀಯ ಹೋಮ್(India’s International Home Season) ಸೀಸನ್ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಎರಡು ಪಂದ್ಯಗಳ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಟೆಸ್ಟ್ ಸರಣಿಯೊಂದಿಗೆ ಪ್ರಾರಂಭವಾಗಲಿದೆ.
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಮತ್ತು ಮೂರು ಪಂದ್ಯಗಳ ಟಿ20 ಸರಣಿಯ ಬಳಿಕ ನ್ಯೂಜಿಲ್ಯಾಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದಾದ ಬಳಿಕ 2025ರಲ್ಲಿ ಇಂಗ್ಲೆಂಡ್ ವಿರುದ್ಧ 5 ಟಿ20 ಪಂದ್ಯ ಮತ್ತು 3 ಏಕದಿನ ಸರಣಿಯನ್ನಾಡಲಿದೆ.
ಬಾಂಗ್ಲಾ ಸರಣಿಯ ವೇಳಾಪಟ್ಟಿ
ಸೆಪ್ಟೆಂಬರ್-19 ಮೊದಲ ಟೆಸ್ಟ್ ಪಂದ್ಯ. ತಾಣ: ಚೆನ್ನೈ
ಸೆಪ್ಟೆಂಬರ್-27 ದ್ವಿತೀಯ ಟೆಸ್ಟ್. ತಾಣ; ಕಾನ್ಪುರ
ಅಕ್ಟೋಬರ್-6 ಮೊದಲ ಟಿ20. ತಾಣ: ಧರ್ಮಶಾಲಾ
ಅಕ್ಟೋಬರ್-9 ದ್ವಿತೀಯ ಟಿ20. ತಾಣ: ದೆಹಲಿ
ಅಕ್ಟೋಬರ್-12 ಮೂರನೇ ಟಿ20. ತಾಣ: ಹೈದರಾಬಾದ್
ನ್ಯೂಜಿಲ್ಯಾಂಡ್ ಸರಣಿಯ ವೇಳಾಪಟ್ಟಿ
ಅಕ್ಟೋಬರ್-16 ಮೊದಲ ಟಿ20. ತಾಣ: ಬೆಂಗಳೂರು
ಅಕ್ಟೋಬರ್-24 ದ್ವಿತೀಯ ಟಿ20. ತಾಣ: ಪುಣೆ
ನವೆಂಬರ್-1 ಮೂರನೇ ಟಿ20. ತಾಣ: ಮುಂಬಯಿ
ಇದನ್ನೂ ಓದಿ Team India Coach: ಇಂದು ಟೀಮ್ ಇಂಡಿಯಾದ ನೂತನ ಕೋಚ್ ಹೆಸರು ಘೋಷಣೆ!
ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳಾಪಟ್ಟಿ
ಜನವರಿ-22 ಮೊದಲ ಟಿ20. ತಾಣ:ಚೆನ್ನೈ
ಜನವರಿ-25 ದ್ವಿತೀಯ ಟಿ20. ತಾಣ: ಕೋಲ್ಕತ್ತಾ
ಜನವರಿ-28 ಮೂರನೇ ಟಿ20. ತಾಣ: ರಾಜ್ಕೋಟ್
ಜನವರಿ-31 ನಾಲ್ಕನೇ ಟಿ20. ತಾಣ:ಪುಣೆ
ಫೆಬ್ರವರಿ-2 ಐದನೇ ಟಿ20. ತಾಣ: ಮುಂಬಯಿ
ಫೆಬ್ರವರಿ-6 ಮೊದಲ ಏಕದಿನ. ತಾಣ:ನಾಗ್ಪುರ
ಫೆಬ್ರವರಿ-9 ದ್ವಿತೀಯ ಏಕದಿನ. ತಾಣ: ಕಟಕ್
ಫೆಬ್ರವರಿ-12 ಮೂರನೇ ಏಕದಿನ. ತಾಣ: ಅಹಮದಾಬಾದ್