ನವದೆಹಲಿ: ದೇಶೀಯ ಕ್ರಿಕೆಟ್‌ನಲ್ಲಿ ಆಡುವುದನ್ನು ತಪ್ಪಿಸಿಕೊಂಡು ಐಪಿಎಲ್‌ಗೆ(IPL) ಹೆಚ್ಚಿನ ಆದ್ಯತೆ ನೀಡುತ್ತಿರುವ ಭಾರತದ ಯುವ ಕ್ರಿಕೆಟಿಗರಿಗೆ ಬಿಸಿಸಿಐ(BCCI) ಅಂತಿಮ ಹಂತದ ಎಚ್ಚರಿಕೆ ನೀಡಿದೆ. ದೇಶಿ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದು ಬೇಡ ಎಂದು ಖಡಕ್ ಸೂಚನೆ ಕೊಟ್ಟಿದೆ. ತಪ್ಪಿದರೆ ತೀವ್ರ ಪರಿಣಾಮ ಎದುರಿಸ ಬೇಕಾದಿತು ಎಂಬ ಎಚ್ಚರಿಕೆಯನ್ನೂ ನೀಡಿದೆ.
ಕಳೆದ ವಾರವೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ(jay shah), ಹಲವು ಆಟಗಾರರಿಗೆ ಪತ್ರ ಬರೆದು ಕೇಂದ್ರೀಯ ಒಪ್ಪಂದಕ್ಕೆ ಒಳಪಟ್ಟಿರುವ ಆಟಗಾರರನ್ನು ರಾಷ್ಟ್ರೀಯ ತಂಡದ ಆಯ್ಕೆಗೆ ಪರಿಗಣಿಸಬೇಕಿದ್ದರೆ ಈ ಆಟಗಾರರು ತಪ್ಪದೇ ದೇಶಿ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕು ಎಂದು ಹೇಳಿದ್ದರು. ಅವರ ಈ ಸೂಚನೆಯ ಹೊರತಾಗಿಯೂ ಕೆಲ ಆಟಗಾರರು ಇದನ್ನು ಕ್ಯಾರೆ ಎನ್ನದೆ ಐಪಿಎಲ್ ಅಭ್ಯಾಸ ನಡೆಸಿದ್ದಾರೆ. ಇದೀಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಕೆಲ ಆಟಗಾರರು ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಇದನ್ನೂ ಓದಿ IND vs ENG: ನಾಲ್ಕನೇ ಪಂದ್ಯಕ್ಕೆ ಭಾರತ ತಂಡದ ಸ್ಟಾರ್ ವೇಗಿಗೆ ವಿಶ್ರಾಂತಿ!
‘ದೇಶಿ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಆದ್ಯತೆ ನೀಡುತ್ತಿರುವುದು ಸರಿಯಲ್ಲ. ದೇಶಿ ಕ್ರಿಕೆಟ್ ಭಾರತೀಯ ಕ್ರಿಕೆಟ್‌ನ ಬೆನ್ನೆಲುಬು. ಅದು ತನ್ನ ಮೌಲ್ಯ ಕಳೆದುಕೊಳ್ಳಬಾರದು’ ಒಂದೊಮ್ಮೆ ಐಪಿಎಲ್ನಿಂದ ಇದಕ್ಕೆ ಕುತ್ತು ಬರುತ್ತದೆ ಎಂದಾರೆ ಐಪಿಎಲ್ ಟೂರ್ನಿಯ ಬಗ್ಗೆ ಮುಂದಿನ ದಿನಗಳಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಜಯ್ ಶಾ ಹೇಳಿದ್ದಾರೆ.
ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ವೇಳಾಪಟ್ಟಿ ಪ್ರಕಟ
ಪ್ರಸಕ್ತ ಸಾಲಿನ ರಣಜಿ ಟ್ರೋಫಿ (Ranji Trophy 2024) ನಾಕೌಟ್ ಹಂತಕ್ಕೆ ಬಂದು ನಿಂತಿದೆ. 8 ತಂಡಗಳು ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ. ಕ್ವಾರ್ಟರ್ ಫೈನಲ್ ಪಂದ್ಯಗಳು ಫೆಬ್ರವರಿ 23 ರಿಂದ ಶುರುವಾಗಲಿದ್ದು, ಫೆಬ್ರವರಿ 27 ರವರೆಗೆ ನಡೆಯಲಿದೆ.
ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ವಿದರ್ಭ ತಂಡಗಳು ಮುಖಾಮುಖಿಯಾಗಲಿದೆ. ದ್ವಿತೀಯ ಕ್ವಾರ್ಟರ್ ಫೈನಲ್ನಲ್ಲಿ ಬರೋಡ ವಿರುದ್ಧ ಮುಂಬೈ ಕಣಕ್ಕಿಳಿಯಲಿದೆ. ತಮಿಳುನಾಡು ಮತ್ತು ಸೌರಾಷ್ಟ್ರ ತಂಡಗಳು ಮೂರನೇ ಮತ್ತು ಮಧ್ಯ ಪ್ರದೇಶ ಮತ್ತು ಆಂಧ್ರ ಪ್ರದೇಶ ತಂಡಗಳು ನಾಲ್ಕನೇ ಕ್ವಾರ್ಟರ್ ಫೈನಲ್ನಲ್ಲಿ ಮುಖಾಮುಖಿಯಾಗಲಿದೆ.
ವೇಳಾಪಟ್ಟಿ
ಕರ್ನಾಟಕ vs ವಿದರ್ಭ (ವಿಸಿಎ ಸ್ಟೇಡಿಯಂ, ನಾಗ್ಪರ)
ಮುಂಬೈ vs ಬರೋಡ (ಎಂಸಿಎ ಸ್ಟೇಡಿಯಂ, ಮುಂಬೈ)
ತಮಿಳುನಾಡು vs ಸೌರಾಷ್ಟ್ರ (ಎಸ್ಆರ್ಸಿ ಗ್ರೌಂಡ್, ಕೊಯಂಬತ್ತೂರು)
ಮಧ್ಯ ಪ್ರದೇಶ vs ಆಂಧ್ರ ಪ್ರದೇಶ (ಹೋಲ್ಕರ್ ಸ್ಟೇಡಿಯಂ, ಇಂದೋರ್)