Site icon Vistara News

ಡ್ರೆಸ್ಸಿಂಗ್ ರೂಮ್​ನಲ್ಲಿ ಕಾಣಿಸಿಕೊಂಡ ಆಯ್ಕೆ ಸಮಿತಿ ಅಧ್ಯಕ್ಷ; ಟೆಸ್ಟ್​ ಮುಗಿದ ತಕ್ಷಣ ವಿಶ್ವಕಪ್​ಗೆ ಆಟಗಾರರ ಶಾರ್ಟ್​ ಲಿಸ್ಟ್​ ಸಾಧ್ಯತೆ​

Ajit Agarkar has reached West Indies

ಪೋರ್ಟ್‌ ಆಫ್‌ ಸ್ಪೇನ್‌: ಭಾರತ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥ(Indian chief selector) ಅಜಿತ್ ಅಗರ್ಕರ್(Ajit Agarkar) ಅವರು ಇಲ್ಲಿ ನಡೆಯುತ್ತಿರುವ ವಿಂಡೀಸ್(IND vs WI)​ ವಿರುದ್ಧದ ದ್ವಿತೀಯ ಟೆಸ್ಟ್​ ಪಂದ್ಯವನ್ನು ವೀಕ್ಷಿಸಿದ್ದಾರೆ. ಭಾರತೀಯ ಆಟಗಾರರ ಡ್ರಿಸಿಂಗ್​ ರೋಮ್​ನಲ್ಲಿ ಕುಳಿತು ಅಗರ್ಕರ್​ ಪಂದ್ಯ ವೀಕ್ಷಿಸುತ್ತಿರುವ ಫೋಟೊ ವೈರಲ್​ ಆಗಿದೆ. ಹಾಗೇಯೇ ಟೆಸ್ಟ್​ ಮುಗಿದ ತಕ್ಷಣ ವಿಶ್ವಕಪ್ ಟೂರ್ನಿಗೆ​(ICC World Cup) ಆಟಗಾರರ ಶಾರ್ಟ್​ ಲಿಸ್ಟ್​ ರೆಡಿ ಮಾಡುವ ಕುರಿತು ನಾಯಕ ರೋಹಿತ್(Rohit Sharma)​ ಮತ್ತು ಕೋಚ್​ ದ್ರಾವಿಡ್(Rahul Dravid​) ಜತೆ ಮಹತ್ವದ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಆಯ್ಕೆ ಸಮಿತಿ ಮುಖ್ಯಸ್ಥರಾದ ಬಳಿಕ ಅಗರ್ಕರ್​ ಅವರ ಮೊದಲ ಭೇಟಿ ಇದಾಗಿದೆ.

ಅಜಿತ್ ಅಗರ್ಕರ್ ಅವರು ಆಯ್ಕೆ ಸಮಿತಿಯ ಮುಖ್ಯಸ್ಥರಾಗುವ ಮುನ್ನವೇ ಭಾರತ ತಂಡ ವಿಂಡೀಸ್​ ಪ್ರವಾಸ ಕೈಗೊಂಡಿತ್ತು. ಹೀಗಾಗಿ ಅವರಿಗೆ ತಂಡವನ್ನು ಭೇಟಿ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಅಗರ್ಕರ್ ಅವರೇ ತಂಡದ ಭೇಟಿಗಾಗಿ ವಿಂಡೀಸ್​ಗೆ ಬಂದಿದ್ದಾರೆ. ನಾಯಕ ರೋಹಿತ್​ ಮತ್ತು ಕೋಚ್​ ರಾಹುಲ್ ದ್ರಾವಿಡ್​ ಜತೆ ಏಷ್ಯಾ ಕಪ್​ ಮತ್ತು ಭಾರತದ ಆತಿಥ್ಯದಲ್ಲೇ ನಡೆಯುವ ಏಕದಿನ ವಿಶ್ವಕಪ್​ ಕುರಿತು ವಿಶೇಷ ಸಭೆ ನಡೆಸಿ ಚರ್ಚಿಸಲಿದ್ದಾರೆ. ತಂಡ ಸಂಯೋಜನೆ ಮತ್ತು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಜತೆಗೆ ಗಾಯಾಳುಗಳಾಗಿ ತಂಡದಿಂದ ಹೊರಗುಳಿದಿರುವ ಆಟಗಾರರ ಆಯ್ಕೆ ಪ್ರತಿಕೆ, ಹಿರಿಯ ಆಟಗಾರರಿಗೆ ವಿಶ್ರಾಂತಿ ವಿವಾರದ ಬಗ್ಗೆಯೂ ಪ್ರಮುಖ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ IND vs WI: ಜಿಂಕೆಯಂತೆ ಜಿಗಿದು ಕ್ಯಾಚ್​ ಪಡೆದ ಅಜಿಂಕ್ಯ; ವಿಡಿಯೊ ವೈರಲ್​

ಮೂಲಗಳ ಪ್ರಕಾರ ತಂಡದ ನಿರ್ವಹಣೆ ಮತ್ತು ಆಯ್ಕೆ ಸಮಿತಿಯು ಫಿಟ್‌ನೆಸ್ ಸಮಸ್ಯೆಗಳು ಮತ್ತು ಕೆಲಸದ ಹೊರೆ ನಿರ್ವಹಣೆ, ವಿಶ್ವಕಪ್​ಗೆ ಪ್ರಮುಖ 20 ಆಟಗಾರರ ಆಯ್ಕೆ ಈ ಎಲ್ಲ ವಿಚಾರದಲ್ಲಿ ಚರ್ಚೆ ನಡೆಸಲಿದ್ದಾರೆ ಎಂದು ವರದಿಯಾಗಿದೆ. ಇದಲ್ಲದೆ ಭವಿಷ್ಯದ ಟೆಸ್ಟ್​ ಮತ್ತು ಟಿ20 ತಂಡಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಟಿವಿ ಚಾನೆಲ್ ಒಂದರ ಕುಟುಕು ಕಾರ್ಯಾಚರಣೆಯ ವಿವಾದದ ಬಳಿಕ ಚೇತನ್ ಶರ್ಮಾ (Chetan Sharma) ಅವರನ್ನು ಹುದ್ದೆಯಿಂದ ಕೆಳಕ್ಕೆ ಇಳಿಸಲಾಗಿತ್ತು. ಹೀಗಾಗಿ ಕಳೆದ ಫೆಬ್ರವರಿಯಿಂದ ಖಾಲಿ ಇದ್ದ ಈ ಹುದ್ದೆಯನ್ನು 45 ವರ್ಷದ ಅಗರ್ಕರ್ ವಹಿಸಿಕೊಂಡಿದ್ದಾರೆ. ಶಿವ ಸುಂದರ್ ದಾಸ್, ಸಲೀಲ್ ಅಂಕೋಲಾ, ಸುಬ್ರತೋ ಬ್ಯಾನರ್ಜಿ ಮತ್ತು ಎಸ್ ಶರತ್ ಸೇರಿದಂತೆ ಐದು ಸದಸ್ಯರ ಸಮಿತಿಗೆ ಅಗರ್ಕರ್ ಮುಖ್ಯಸ್ಥರಾಗಿದ್ದಾರೆ.

Exit mobile version