Site icon Vistara News

Team India : ಏಷ್ಯನ್​ ಗೇಮ್ಸ್​ಗೆ ಕ್ರಿಕೆಟ್​ ತಂಡವನ್ನು ಕಳುಹಿಸಲು ಒಪ್ಪದ ಬಿಸಿಸಿಐ; ವಾದ, ಪ್ರತಿವಾದ!

BCCI does not agree to send cricket team to Asia Cup; Argument, counterargument!

BCCI does not agree to send cricket team to Asia Cup

ಮುಂಬಯಿ: ಭಾರತ ಕ್ರಿಕೆಟ್​ ತಂಡದ ಆಟಗಾರರೆಲ್ಲರೂ ಸದ್ಯ ಐಪಿಎಲ್​ನಲ್ಲಿ ಬ್ಯುಸಿಯಾಗಿದ್ದಾರೆ. ಕೋಚಿಂಗ್​ ವಿಭಾಗವನ್ನು ಹೊರತುಪಡಿಸಿ ಉಳಿದೆಲ್ಲರೂ ತಮ್ಮ ತಮ್ಮ ಫ್ರಾಂಚೈಸಿಗಳಿಗಾಗಿ ಆಡುತ್ತಿದ್ದಾರೆ. ಏತನ್ಮಧ್ಯೆ, ಮುಂದಿನ ಸೆಪ್ಟೆಂಬರ್​ನಲ್ಲಿ ನಡೆಯಲಿರುವ ಏಷ್ಯನ್​ ಗೇಮ್ಸ್​ಗೆ ತಂಡಗಳನ್ನು ಕಳುಹಿಸಲು ಬಿಸಿಸಿಐ ಒಪ್ಪಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಇದರಲ್ಲಿ ನಮ್ಮದೇನೂ ತಪ್ಪಿಲ್ಲ ಕೊನೇ ಹಂತದಲ್ಲಿ ಮಾಹಿತಿ ನೀಡಿದ ಕಾರಣ ತಂಡವನ್ನು ಕಳುಹಿಸಲು ಸಾಧ್ಯವಾಗಿಲ್ಲ ಎಂಬುದಾಗಿ ಬಿಸಿಸಿಐ ಪ್ರತಿಕ್ರಿಯೆ ಕೊಟ್ಟಿದೆ.

ಚೀನಾದ ಆತಿಥ್ಯದಲ್ಲಿ ಹ್ಯಾಗ್ಜೊದಲ್ಲಿ ಸೆಪ್ಟೆಂಬರ್​ 23ರಿಂದ ಅಕ್ಟೋಬರ್ 8ರವರೆಗೆ ಏಷ್ಯಾಡ್​ ನಡೆಯಲಿದೆ. ಈ ಕ್ರೀಡಾಕೂಟಕ್ಕೆ ಕ್ರಿಕೆಟ್​ ಕೂಡ ಸೇರಿಸಬೇಕು ಎಂಬುದು ಒತ್ತಾಯವಾಗಿತ್ತು. ಅಂತೆಯೇ ತಂಡವನ್ನು ಕಳುಹಿಸುವಂತೆ ಏಷ್ಯಾ ಕ್ರೀಡಾಕೂಟಕ್ಕೆ ಭಾರತದಿಂದ ನೇಮಕಗೊಂಡಿರುವ ವಿಶೇಷ ಅಧಿಕಾರಿ ಬಿಸಿಸಿಐಗೆ ಮೇಲ್​ ಮಾಡಿತ್ತು. ಅದಕ್ಕೆ ಉತ್ತರ ನೀಡಿರುವ ಬಿಸಿಸಿಐ, ತಂಡ ಕಳುಹಿಸಲು ನಿರಾಕರಿಸಿದೆ ಎಂದು ಹೇಳಲಾಗಿದೆ.

ವಿಶೇಷ ಅಧಿಕಾರಿ ಭೂಪೇಂದರ್​ ಭಾಜ್ವಾ ಅವರು ಏಷ್ಯಾ ಗೇಮ್ಸ್​ಗೆ ಭಾರತದ ವಿಶೇಷ ಅಧಿಕಾರಿಯಾಗಿದ್ದಾರೆ. (ಚೆಪ್​ ಡಿ ಮಿಷನ್​). ಅವರು ಬಿಸಿಸಿಐಗೆ ಮನವಿ ಕಳುಹಿಸಿ ಎಲ್ಲ ಕ್ರೀಡಾ ಕ್ಷೇತ್ರಗಳಿಂದ ತಂಡವನ್ನು ಪ್ರಕಟಿಸಲಾಗಿದೆ. ಅಂತೆಯೇ ಕ್ರಿಕೆಟ್​ ತಂಡವನ್ನೂ ಪ್ರಕಟಿಸಬೇಕು ಎಂದು ಕೋರಿದ್ದರು. ಅದಕ್ಕೆ ಉತ್ತರ ನೀಡಿರುವ ಬಿಸಿಸಿಐ ಸದ್ಯ ಅದು ಸಾಧ್ಯವಿಲ್ಲ ಎಂದು ಹೇಳಿದೆ.

ಏಷ್ಯಾ ಗೇಮ್ಸ್​ಗೆ ಕ್ರಿಕೆಟ್​ ಒಂದನ್ನು ಹೊರತುಪಡಿಸಿ ಮತ್ತೆಲ್ಲ ಕ್ರೀಡೆಗಳಿಗೆ ಹೆಸರು ನೋಂದಾಯಿಸಲಾಗಿದೆ. ನಮ್ಮ ಯೋಜನೆಗಳು ಸಿದ್ಧಗೊಂಡಿವೆ ಎಂದು ಬಿಸಿಸಿಐ ಪ್ರತಿಕ್ರಿಯೆ ಕೊಟ್ಟಿದೆ. ತಂಡವನ್ನು ಕಳುಹಿಸಿ ಎಂದು ಮೂರರಿಂದ ನಾಲ್ಕು ಇಮೇಲ್​ಗಳನ್ನು ರವಾನಿಸಿದ್ದೇವು. ಕೊನೇ ಕ್ಷಣದಲ್ಲಿ ತಂಡವನ್ನು ಕಳುಹಿಸುವುದಿಲ್ಲ ಎಂದು ಅಲ್ಲಿಂದ ಪ್ರತಿಕ್ರಿಯೆ ಬಂತು ಎಂಬುದಾಗಿ ಭೂಪೆಂದರ್ ಅವರು ಇಂಡಿಯನ್​ ಎಕ್ಸ್​ಪ್ರೆಸ್​ ಜತೆ ಹೇಳಿದ್ದಾರೆ.

ಕೊನೇ ದಿನ ಕಳುಹಿಸಿದರು

ಬಿಸಿಸಿಐ ಈ ಕುರಿತು ಬೇರೆಯದೇ ಉತ್ತರ ನೀಡುತ್ತಿದೆ. ಭಾರತೀಯ ಒಲಿಂಪಿಕ್​ ಅಸೋಸಿಯೇಷನ್​ ಹೆಸರು ನೋಂದಾಯಿಸಲು ಕೊನೇ ದಿನಕ್ಕಿಂದ ಒಂದು ದಿನ ಮುಂಚಿತವಾಗಿ ಮೇಲ್​ ಕಳುಹಿಸಿದ್ದಾರೆ. ನಾವು ಆಗಲೇ ನಮ್ಮ ಫ್ಯೂಚರ್ ಟೂರ್ ಪ್ರೋಗ್ರಾಮ್​ ಅನ್ನು ಹಾಕಿಕೊಂಡಿದ್ದೆವು. ಮಹಿಳೆಯರ ತಂಡವು ದಕ್ಷಣ ಆಫ್ರಿಕಾ ಹಾಗೂ ನ್ಯೂಜಿಲ್ಯಾಂಡ್​ ತಂಡವನ್ನು ಈ ವೇಳೆ ಎದುರಿಸಲಿದೆ. ಅದೇ ರೀತಿ ಪುರುಷರ ತಂಡ ವಿಶ್ವ ಕಪ್​ಗಾಗಿ ಸಿದ್ದತೆ ನಡೆಸಿಕೊಂಡಿರುತ್ತವೆ ಎಂದು ಹೇಳಿದೆ.

ಇದನ್ನೂ ಓದಿ: IPL 2023: ಕೊಹ್ಲಿ ಸೂಚಿಸಿದ ಐಪಿಎಲ್​ನ ಸಾರ್ವಕಾಲಿಕ ಅತ್ಯುತ್ತಮ ಆಟಗಾರರು ಯಾರು?

ಬಿಸಿಸಿಐ ಏಷ್ಯಾ ಗೇಮ್ಸ್​ಗೆ ತಂಡಗಳನ್ನು ಕಳುಹಿಸದೇ ಇರುವುದು ಇದೇ ಮೊದಲೇನಲ್ಲ. 2010 ಹಾಗೂ 2014ರ ಏಷ್ಯಅ ಕಪ್​ ವೇಳೆಯೂ ಬಿಸಿಸಿಐ ತಂಡವನ್ನು ಕಳುಹಿಸಿರಲಿಲ್ಲ. ಆ ವೇಳೆಯೂ ಕ್ರಿಕೆಟ್​ ಏಷ್ಯಾ ಕಪ್​ನ ಭಾಗವಾಗಿರಲಿಲ್ಲ. ಆದರೆ, 2018ರ ಏಷ್ಯಾ ಕಪ್​ನಲ್ಲಿ ಸ್ಪರ್ಧೆಗಳ ಪಟ್ಟಿಯಲ್ಲಿ ಕ್ರಿಕೆಟ್​ ಇರಲಿಲ್ಲ. ಇವೆಲ್ಲದರ ನಡುವೆ ಬಿಸಿಸಿಐ 2022ರ ಕಾಮನ್ವೆಲ್ತ್ ಗೇಮ್ಸ್​ಗೆ ಮಹಿಳೆಯರ ತಂಡವನ್ನು ಬಿಸಿಸಿಐ ಕಳುಹಿಸಿತ್ತು.

Exit mobile version