ಮುಂಬಯಿ: ವರದಿಗಳ ಪ್ರಕಾರ ಈ ವರ್ಷದ ಆರಂಭದಲ್ಲಿ ಮುಂಬೈನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್ 2023) ನ ಉದ್ಘಾಟನಾ ಆವೃತ್ತಿಯಿಂದ (WPL 2023 ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 377.49 ಕೋಟಿ ರೂ.ಗಳಿಸಿದೆ. ಗೋವಾದಲ್ಲಿ ಸೋಮವಾರ ನಡೆದ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಬಿಸಿಸಿಐ ಖಜಾಂಚಿ ಆಶಿಶ್ ಶೆಲಾರ್ ತಮ್ಮ ವರದಿಯಲ್ಲಿ ಈ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಶೆಲಾರ್ ಅವರ ವರದಿಯಲ್ಲಿನ ಆದಾಯ ವಿಶ್ಲೇಷಣೆಯ ಪ್ರಕಾರ, 2022-23ರ ಹಣಕಾಸು ವರ್ಷದಲ್ಲಿ ಬಿಸಿಸಿಐನ ಒಟ್ಟು ಆದಾಯದ ಆರು ಶೇಕಡಾ ಮಹಿಳೆಯರ ಪ್ರೀಮಿಯರ್ ಲೀಗ್ನಿಂದ ಬಂದಿದೆ.
ಬಿಸಿಸಿಐ ಆದಾಯಕ್ಕೆ ಐಪಿಎಲ್ ದೊಡ್ಡ ಕೊಡುಗೆ ಕೊಟ್ಟಿದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಶೇಕಡಾ 37 , ಮಾಧ್ಯಮ ಹಕ್ಕುಗಳ ಮಾರಾಟದಿಂದ ಶೇಕಾಡ 38 . ಹಿರಿಯ ಪುರುಷರ ಕ್ರಿಕೆಟ್ ತಂಡದ ಅಂತಾರಾಷ್ಟ್ರೀಯ ಪ್ರವಾಸಗಳಿಂದ ಶೇ 10 ಪ್ರತಿಶತದಷ್ಟು ಆದಾಯ ಬಂದಿದೆ ಎಂದು ವಿವರಣೆ ನೀಡಲಾಗಿದೆ.
2022-23ನೇ ವರ್ಷವು ದೇಶೀಯ ಋತುವನ್ನು ಉತ್ಸಾಹದಿಂದ ನಡೆಸಲು ವಿಶ್ವಾಸವನ್ನು ನೀಡಿದೆ. ಅಧಿಕಾರವನ್ನು ಅನ್ನು ನನ್ನ ಹಿಂದಿನವರು ಆರೋಗ್ಯಕರ ಆರ್ಥಿಕ ಸ್ಥಿತಿಯಲ್ಲಿ ನನಗೆ ಹಸ್ತಾಂತರಿಸಿದರು. ಸಮಯ ಕಳೆದಂತೆ ಅದು ಬಲಗೊಳ್ಳುತ್ತದೆ ಎಂದು ನಾನು ಖಚಿತಪಡಿಸಿಕೊಳ್ಳುತ್ತೇನೆ. ಎಲ್ಲಾ ಸಂದರ್ಭಗಳಲ್ಲಿ ಗುಣಮಟ್ಟವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ಬಿಸಿಸಿಐ ಕ್ರೀಡಾ ಜಗತ್ತಿಗೆ ಸಾಬೀತುಪಡಿಸಿದ ಎಂದು ಶೆಲಾರ್ ರಾಜ್ಯ ಅಸೋಸಿಯೇಷನ್ ಸದಸ್ಯರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
“ನನ್ನ ಹಿಂದಿನವರು ನನಗೆ ಅಧಿಕಾರ ಹಸ್ತಾಂತರ ಮಾಡುವಾಗ ಬಿಸಿಸಿಐ ಹಣಕಾಸು ಸ್ಥಿತಿ ಆರೋಗ್ಯಕರವಾಗಿತ್ತು. ದಿನ ಕಳೆದಂತೆ ಅದು ಇನ್ನಷ್ಟು ಅಭಿವೃದ್ಧಿಯಾಗುತ್ತಾ ಬಂತು ಎಂಬುದನ್ನು ನಾನು ಖಚಿತಪಡಿಸಿಕೊಳ್ಳುತ್ತೇನೆ. ಬಿಸಿಸಿಐ ಈ ಮಟ್ಟಕ್ಕೆ ಏರುವುದುಕ್ಕೆ ಎಲ್ಲಾ ಮಾಜಿ ಮತ್ತು ಪ್ರಸ್ತುತ ಅಧಿಕಾರಿಗಳ ಸಾಮೂಹಿಕ ಪ್ರಯತ್ನವೇ ಕಾರಣ. ನಾಯಕತ್ವದ ದೂರದೃಷ್ಟಿ ಮತ್ತು ಬಿಸಿಸಿಐನ ಎಲ್ಲಾ ಸದಸ್ಯರ ಬಲವಾದ ಬದ್ಧತೆಯು ಕೆಲವೇ ವರ್ಷಗಳ ಅವಧಿಯಲ್ಲಿ ಕ್ರಿಕೆಟ್ ಕ್ರೀಡೆಯನ್ನು ಗೌರವಾನ್ವಿತ ಎತ್ತರಕ್ಕೆ ಕೊಂಡೊಯ್ದಿದೆ. ಇದು ಇನ್ನಷ್ಟು ಅಭಿವೃದ್ಧಿ ಕಾಣಲಿದೆ ಎಂಬುದಾಗಿ ಶೆಲಾರ್ ಅವರು ಹೇಳಿಕೊಂಡಿದ್ದಾರೆ.
ಬಿಸಿಸಿಐನ ಸಮರ್ಪಣೆ ಮತ್ತು ದೃಢನಿಶ್ಚಯವು ಬಿಸಿಸಿಐ ಎಲ್ಲಾ ಸಮಯದಲ್ಲೂ ನೈತಿಕವಾಗಿ ಮತ್ತು ಆರ್ಥಿಕವಾಗಿ ಸದೃಢವಾಗಿರುವಂತೆ ನೋಡಿಕೊಂಡಿದೆ. ಎಲ್ಲಾ ಸಂದರ್ಭಗಳಲ್ಲಿ ಗುಣಮಟ್ಟವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ಬಿಸಿಸಿಐ ಕ್ರೀಡಾ ಜಗತ್ತಿಗೆ ಸಾಬೀತುಪಡಿಸಿದೆ ಎಂದು ಶೆಲಾರ್ ಅವರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
2023 ಮಾರ್ಚ್ 4 ರಿಂದ 26 ರವರೆಗೆ ನಡೆದ ಡಬ್ಲ್ಯುಪಿಎಲ್ 2023 ರಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಭಾಗವಹಿಸಿದ್ದವು. ಹರ್ಮನ್ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಫೈನಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಯಶಸ್ಸಿನ ಹಿನ್ನೆಲೆಯಲ್ಲಿ ಮುಂದಿನ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ ಅನ್ನು ಇನ್ನಷ್ಟು ಅದ್ಧೂರಿಯಾಗಿ ಆಚರಿಸಲು ಬಿಸಿಸಿಐ ಸಿದ್ಧತೆ ಮಾಡಿಕೊಂಡಿದೆ ಎಂಬುದಾಗಿ ಹೇಳಲಾಗಿದೆ.