Site icon Vistara News

IPL News: ವರ್ಷದಲ್ಲಿ 2 ಐಪಿಎಲ್ ನಡೆಸಲು ಮುಂದಾದ ಬಿಸಿಸಿಐ; ಮುಂದಿನ ವರ್ಷವೇ ಜಾರಿ?

IPL

ಮುಂಬಯಿ: ಮುಂದಿನ ವರ್ಷ ನಡೆಯುವ ಐಪಿಎಲ್(IPL) ಟೂರ್ನಿಯಲ್ಲಿ ಹಲವು ಬದಲಾವಣೆ ತರಲು ಬಿಸಿಸಿಐ ಯೋಜನೆ ಹಾಕಿಕೊಂಡಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಬಿಸಿಸಿಐ(BCCI) ವರ್ಷದಲ್ಲಿ ಎರಡು ಐಪಿಎಲ್(IPL News) ಟೂರ್ನಿಗಳು ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಹಿಂದೆ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಕೂಡ ಎರಡು ಐಪಿಎಲ್ ಪಂದ್ಯ ಆಯೋಜನೆ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇದೀಗ ಬಿಸಿಸಿಐ ಮತ್ತು ಐಪಿಎಲ್​ ಆಡಳಿತ ಮಂಡಳಿ ಇದೇ ವಿಚಾರವಾಗಿ ಚರ್ಚೆ ನಡೆಸಿದೆ ಎಂದು ವರದಿಯಾಗಿದೆ. ಅಂತಾರಾಷ್ಟ್ರೀಯ ಪಂದ್ಯಗಳ ಸ್ಲಾಟ್ ಕಡಿಮೆ ಇರುವ ವರ್ಷಗಳಲ್ಲಿ 2 ಐಪಿಎಲ್ ಆಯೋಜನೆ ಮಾಡುವ ಬಗ್ಗೆ ಬಿಸಿಸಿಐ ಚರ್ಚೆ ನಡೆಸುತ್ತಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

2 ಐಪಿಎಲ್​ ನಡೆಸಿದರೆ 20 ಓವರ್​ಗಳ ಬದಲಾಗಿ 10 ಓವರ್​ಗೆ ಐಪಿಎಲ್ ಪಂದ್ಯ ಸೀಮಿತಗೊಳಿಸುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ದುಬೈನಲ್ಲಿ ಈಗಾಗಲೇ ಟಿ10 ಮಾದರಿಯ ಕ್ರಿಕೆಟ್​ ಲೀಗ್​ ನಡೆಯುತ್ತಿದೆ, ಹೀಗಾಗಿ ಮುಂದಿನ ದಿನಗಳಲ್ಲಿ ಭಾರತದಲ್ಲಿಯೂ ಈ ಲೀಗ್​ ಜಾರಿಗೆ ಬಂದರೆ ಅಚ್ಚರಿಯಿಲ್ಲ. ಏಕೆಂದರೆ ವಿದೇಶಿ ಲೀಗ್​ನಲ್ಲಿರುವ ಕೆಲವು ನಿಯಮಗಳನ್ನು ಐಪಿಎಲ್​ ಕೂಡ ಅಳವಡಿಸಿಕೊಂಡಿದೆ.

ಮೆಗಾ ಹರಾಜು


ಮುಂದಿನ ವರ್ಷದ ಐಪಿಎಲ್​ 18ನೇ ಆವೃತ್ತಿಗೆ ಮುನ್ನ ಆಟಗಾರರ ಮೆಗಾ ಹರಾಜು(Mega auction) ಪ್ರಕ್ರಿಯೆ ನಡೆಯಲಿದೆ ಎಂದು ಅರುಣ್​ ಧುಮಾಲ್​ ಖಚಿತಪಡಿಸಿದ್ದಾರೆ. 2022ರಲ್ಲಿ ಆಟಗಾರರ ಮೆಗಾ ಹಲರಾಜು ನಡೆದಿತ್ತು. ಇದೀಗ ಮೂರು ನಂತರದಲ್ಲಿ ಮತ್ತೆ ಮೆಗಾ ಹರಾಜು ನಿಗದಿಯಾಗಿದೆ. ಪ್ರತಿ ತಂಡ ಮುಂಬರುವ 17ನೇ ಆವೃತ್ತಿಯ ನಂತರದಲ್ಲಿ 3-4 ಆಟಗಾರರನ್ನು ಮಾತ್ರ ರಿಟೇನ್​ ಮಾಡಿಕೊಳ್ಳಲು ಅವಕಾಶ ಲಭಿಸುವ ನಿರೀಕ್ಷೆ ಇದೆ. ಹೀಗಾಗಿ ಮುಂದಿನ ಆವೃತ್ತಿಗೆ ಹಲವು ಆಟಗಾರರ ತಂಡಗಳು ಮತ್ತೆ ಬದಲಾಗುವ ಸಾಧ್ಯತೆ ಇದೆ.

ಇದನ್ನೂ ಓದಿ IPL 2024: ಡ್ರೆಸ್ಸಿಂಗ್ ರೂಮ್‌ನಲ್ಲಿ ಪೂಜೆ ಮಾಡಿ ಅಭ್ಯಾಸ ಆರಂಭಿಸಿದ ಮುಂಬೈ ನಾಯಕ ಹಾರ್ದಿಕ್​ ಪಾಂಡ್ಯ

ಡಬಲ್​-ಹೆಡರ್​ ಪಂದ್ಯಗಳ ಸಂಖ್ಯೆ ಹೆಚ್ಚಳ!


ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ತೀಯ ಹಂತದ ವೇಳಾಪಟ್ಟಿ ಬಗ್ಗೆ ಮಹತ್ವ ಮಾಹಿತಿ ನೀಡಿರುವ ಧುಮಾಲ್, ಮೊದಲ ಹಂತದ ಪಂದ್ಯಾವಳಿಗಳು ನಡೆದ ಬಳಿಕ ಚುನಾವಣೆಗಾಗಿ ಪಂದ್ಯಗಳನ್ನು ಕೆಲವು ದಿನಗಳ ಕಾಲ ಸ್ಥಗಿತಗೊಳಿಸಲಾಗುತ್ತದೆ. ಇಲ್ಲಿ ನಷ್ಟವಾದ ದಿನಗಳನ್ನು ಸರಿದೂಗಿಸಲು ನಾವು ಡಬಲ್-ಹೆಡರ್‌ ಪಂದ್ಯಗಳನ್ನು ಹೆಚ್ಚಿಸಬೇಕಾಗಬಹುದು ಎಂದು ಹೇಳಿದ್ದಾರೆ. ಹೀಗಾಗಿ ದ್ವಿತೀಯ ಹಂತದಲ್ಲಿ ಹೆಚ್ಚಿನ ಡಬಲ್-ಹೆಡರ್‌ ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ಐಪಿಎಲ್​ ಮುಕ್ತಾಯದ ಒಂದು ವಾರದ ಅಂತರದಲ್ಲಿ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ಐಸಿಸಿ ಟಿ20 ವಿಶ್ವಕಪ್​ ಟೂರ್ನಿ ಆರಂಭಗೊಳ್ಳಲಿದೆ.

Exit mobile version